ಲೋಕದರ್ಶನ ವರದಿ
ಮುಧೋಳ 13: ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟ, ತಾಲೂಕಾ ಕಾನೂನು ಸೇವಾ ಸಮೀತಿ, ಸಾರ್ಡ ಸಂಸ್ಥೆ, ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಹಾಗೂ ಸಕರ್ಾರಿ ಪದವಿ ಪೂರ್ವ ಕಾಲೇಜ ಮುಧೋಳ ಇವರ ಆಶ್ರಯದಲ್ಲಿ ವರದಕ್ಷಿಣೆ ವಿರೋಧಿ ದಿನಾಚರಣೆ ಹಾಗೂ ಬಾಲ್ಯವಿವಾಹ ನಿಷೇದ ಕುರಿತು ಜಾಗೃತಿ ಕಾರ್ಯ ಕ್ರಮವನ್ನು ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜ ಮುಧೋಳದಲ್ಲಿ ಬುಧವಾರ ದಿ.12 ರಂದು ಹಮ್ಮಿಕೊಳ್ಳಲಾಗಿತ್ತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ. ಜಿ. ಕೋರೆಗೋಳರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಇಲಾಖೆಯಿಂದ ಯೋಜನೆಗಳ ಬಗ್ಗೆ ಮತ್ತು ಬೇಟಿ ಬಚಾವೋ, ಬೇಟಿ ಪಡಾವೊ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಕಾರ್ಯಕ್ರಮವನ್ನು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧಿಶ ಎಸ್. ಶ್ರೀಧರರವರು ಉಧ್ಘಾಟಿಸಿ ಮಾತನಾಡುತ್ತಾ, ಅನಿಷ್ಟ ಪದ್ದತಿ ಗಳಾದ ವರದಕ್ಷಿಣೆ ಪಿಡುಗು, ಬಾಲ್ಯವಿವಾಹದಿಂದಾಗುವ ದುಷ್ಪರಿನಾಮಗಳ ಬಗ್ಗೆ ಹಾಗೂ ಅಸಿಡ ದಾಳಿಯ ಮುಂಜಾಗ್ರತಾ ಕ್ರಮಗಳ ಕುರಿತು ವಿವರಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ನ್ಯಾಯವಾದಿಗಳಾದ ಸಿ.ಜಿ. ಮಠಪತಿ ಅವರು ಬಾಲ್ಯ ವಿವಾಹ ನಿಷೇದ ಕುರಿತು ಮಾತನಾಡಿದರು. ಎಸ್.ಬಿ ಪಾಟೀಲರವರು ವರದಕ್ಷಿಣೆ ನಿಷೇದ, ಎಂ. ಪಿ. ರೋಣದರವರು ಅಸಿಡ ದಾಳಿಯ ಮುಂಜಾಗ್ರತಾ ಕ್ರಮಗಳ ಕುರಿತು ವಿವರಿಸಿದರು.
ಮುಖ್ಯ ಅಥಿತಿ ಶ್ರೀಶೈಲ. ಬ್ಯಾಕೋಡ. ಪಿಸ್ಆಯ್ ಮುಧೋಳ ಇವರು ಮಾತನಾಡುತ್ತ, ವರದಕ್ಷಿಣೆ ತೆಗೆದುಕೊಳ್ಳು ವುದು ಕೊಡುವುದು ತಪ್ಪು. ಹೆಣ್ಣು ಮಕ್ಕಳಿಗೂ ಎಲ್ಲದರಲ್ಲಿಯೂ ಸರಿಸಮನಾದ ಹಕ್ಕಿದೆ. ಹೆಣ್ಣು ಮಕ್ಕಳು ಇವತ್ತಿಗೂ ಮೂಢನಂಬಿ ಕೆಗೆ ಕಟ್ಟು ಬಿದ್ದು ಮೋಸ ಹೋಗುತ್ತಿದ್ದಾರೆ. ಕಾರಣ ಸಮಾಜದಲ್ಲಿ ಬಾಳಬೇಕಾದರೆ ಹೆಣ್ಣು ಮಕ್ಕಳು ತುಂಬಾ ಜಾಗೃತರಾಗಿರಬೇಕು. ಇಂಥಹ ಮೂಢ ನಂಬಿಕೆಗೆ ಕಟ್ಟು ಬೀಳಬಾರದು. ಕೆಲವೊಂದು ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ, ಹೆಣ್ಣು ಮಕ್ಕಳೇ ಮೋಸ ಮಾಡು ತ್ತಾರೆ. ಕಷ್ಟಪಟ್ಟುಗಳಿಸಿದ್ದನ್ನು ಉಳಿಸಿಕೊಳ್ಳಿ ಹಾಗೂ ಟ್ರಾಫೀಕ್ ನಿಯಮಗಳನ್ನು ಪಾಲಿಸಬೇಕೆಂದರು.
ಇನ್ನೋರ್ವ ಮುಖ್ಯ ಅಥಿತಿಗ ಸಾರ್ಡ ಸಂಸ್ಥೆಯ ವ್ಯವಸ್ಥಾಪಕ ನಿದರ್ೆಶಕರಾದ ಸುರೇಶ ಕೆಳಗಡೆ ಅವರು ಮಾತನಾಡುತ್ತಾ, ಸಂಸ್ಥೆಯು ಕಳೆದ 1997 ರಿಂದ ಮಹಿಳೆ, ಮಕ್ಕಳು, ರೈತರು, ಯುವಕರು/ಯುವತಿಯರು, ದೇವದಾಸಿ ಮಹಿಳೆಯರೊಂದಿಗೆ ಕೆಲಸ ನಿರ್ವಹಿಸುತ್ತ ಬಂದಿದ್ದು, 2009 ರಿಂದ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರವು ಪ್ರಾರಂಭವಾಗಿದ್ದು, ಈ ಕಾರ್ಯಕ್ರಮದಲ್ಲಿ ನೊಂದ ಮಹಿಳೆಯರಿಗೆ ಆಗುವ ತೊಂದರೆಗಳನ್ನು ನಿವಾರಿಸುತ್ತ ಕೌಟುಂಬಿಕವಾಗಿ ಬರುವ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತ ಬಂದಿದೆ. ಇದರಲ್ಲಿ ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕಲಹದಂತಹ ಸಮಸ್ಯೆಗಳನ್ನು ನಿವಾರಿಸುತ್ತ ನೊಂದ ಮಹಿಳೆಯರಿಗೆ ನ್ಯಾಯವದಗಿಸುತ್ತ ಬಂದಿದ್ದೇವೆ. ಸಂಸ್ಥೆಯೂ ಮುಧೋಳ, ಬದಾಮಿ, ಜಮಖಂಡಿ ಹಾಗೂ ರಾಯಬಾಗ ತಾಲೂಕಿನವರೆಗೂ ಕಾರ್ಯನಿರ್ವಹಿಸಿಕೊಂಡು ಸಾಗಿದೆಯೆಂದರು.
ಇದೇ ಸಂದರ್ಭದಲ್ಲಿ ವರದಕ್ಷಿಣೆ ಪಡಿವುವದಿಲ್ಲಾ ಮತ್ತು ಕೊಡುವುದಿಲ್ಲಾ ಎಂದು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಕರ್ಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪಿ. ಆಯ್. ಭಂಡಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ 625ಕ್ಕೂ ಹೆಚ್ಚು ವಿದ್ಯಾಥರ್ಿ/ವಿದ್ಯಾಥರ್ಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಯಶಸ್ಸಿಗೊಳಿಸಲು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ಡ ಸಂಸ್ಥೆ, ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ಸಕರ್ಾರಿ ಪದವಿ ಪೂರ್ವ ಕಾಲೇಜ್ ಮುಧೋಳ ಸಿಬ್ಬಂದಿಗಳು ಶ್ರಮಿಸಿದರು.
ಎಸ್. ಎಲ್. ಮಂಟೂರ ಸ್ವಾಗತಿಸಿದರು. ಪ್ರೋ:ಎಂ.ಬಿ.ಪೂಜಾರಿ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರೋ:ಎಸ್.ಎನ್. ಪಡಸಲಗಿರವರು ವಂದಿಸಿದರು.