ಕಾಗವಾಡ: ಏಡ್ಸ ಕುರಿತು ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ

ಕಾಗವಾಡ 08:  ಉಗಾರಲಾಯನ್ಸ ಕ್ಲಬ್ ಹಾಗೂ ಪಿಪಲ್ ಎಜುಕೇಶನ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಪಿಇಎಸ್ ಬಿಬಿಎ ಹಾಗೂ ಬಿಕಾಂ ಮಹಾವಿದ್ಯಾಲಯದಲ್ಲಿ ಡಿಸೆಂಬರ 1 ವಿಶ್ವಏಡ್ಸ ದಿನಾಚರಣೆ ನಿಮಿತ್ಯ ಶನಿವಾರ 07 ರಂದು ಎಚ್ಆಯ್ವಿ ಮತ್ತು ಏಡ್ಸ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಲಾಯನ್ಸಕ್ಲಬ್ ಉಗಾರದ ಡಾ.ಎಸ್.ಎಬರಮದೆ ಅವರು ಎಚ್.ಆಯ್.ವಿ ಹಾಗೂ ಏಡ್ಸ್ ಕುರಿತು ಉಪನ್ಯಾಸ ನೀಡಿದರು ಹಾಗೂ ವಿದ್ಯಾಥರ್ಿಗಳಲ್ಲಿ ಎಚ್.ಆಯ್.ವಿ ಹಾಗೂ ಏಡ್ಸ್ ಕುರಿತು ಮುಂಜಾಗೃತ ಕ್ರಮದ ಬಗ್ಗೆ ಜಾಗೃತಿ ಮೂಡಿಸಿದರು.

ಹಾಗೂ ಪ್ರಶ್ನೋತ್ತರಗಳ ಮೂಲಕ ಸುರಕ್ಷೀತ ಲೈಂಗಿಕತೆ ಕುರಿತು ಮಾಹಿತಿ ನೀಡಿದರು. ಎಚ್.ಆಯ್.ವಿ ಸೊಂಕಿನಿಂದ ದೂರ ಇರುವಂತೆ ತಿಳುವಳಿಕೆ ಮೂಡಿದರು. ಕರ್ಯಕ್ರಮದ ಅಧ್ಯಕ್ಷತೆಯನ್ನು ಲಯನ ಡಾ.ಬಿ.ಎ ಪಾಟೀಲ ಅವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಲಯನ್ಸಕ್ಲಬ್ ಉಗಾರದ ಅಧ್ಯಕ್ಷ ಶ್ರೀಕಾಂತ ಭಟ್ಟ, ಪಿಇಎಸ್ ಸಂಸ್ಥೆಯ ಮಾರ್ಗದರ್ಶಕ ಜಿ.ಆರ್. ಕಿಲ್ಲೇದಾರ ಹಾಗೂ ಲಾಯನ್ಸಕ್ಲಬ್ ಉಗಾರ ಹಾಗೂ ಪಿಇಎಸ್ ಸಂಸ್ಥೆಯ ಕಾರ್ಯದಶರ್ಿ ಲಯನ ರಾಮಚಂದ್ರ ಕಿಲ್ಲೇದಾರ ಅವರು ಭಾಗವಹಿಸಿದ್ದರು.