ಎಸ್ಸೆಸ್ಸೆಲ್ಸಿ ಟಾಪರ್ಸ್ ವಿದ್ಯಾರ್ಥಿಗಳ ಪುರಸ್ಕಾರ
ಹೂವಿನ ಹಡಗಲಿ 03: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ಟಾಪರ್ಸ್ ಮನೆಗೆ ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಗೌರವ ಸನ್ಮಾನ ನೆರವೇರಿಸಿದರು. ತಾಲೂಕಿನ ಮದಲಗಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹೇಮಂತ್ ಅರ್ತಿ 621(99) ಇಟ್ಟಿಗಿ ಪಾಲಕರ ಮನೆಯಲ್ಲಿ ಗೌರವ ಸನ್ಮಾನ ನೆರವೇರಿಸಲಾಯಿತು.ಹಗರನೂರು ಜ್ಞಾನಸಿರಿ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಲಕ್ಷ್ಮಿ ಬಿದರಳ್ಳಿ 621(99) ಎಂ ಎಂ ವಾಡ ಪಟ್ಟಣದ ಸ್ತುತಿ ಜೈನ್ 620(99)ಸ್ಪೂರ್ತಿ ದೊಡ್ಡಮನಿ 619(99)ಕನ್ನಡ ಮಾಧ್ಯಮದಲ್ಲಿ ನಂದಿಹಳ್ಳಿ ಸರ್ಕಾರಿ ಪ್ರೌಢಶಾಲೆಯಸಂಗೀತಾ ಪಾಟೀಲ್ 615(98)ವಿದ್ಯಾರ್ಥಿಗಳ ಮನೆಯಲ್ಲಿ ಪಾಲಕರ ಸಮ್ಮುಖದಲ್ಲಿ ಸನ್ಮಾನಿಸಿ ಮುಂದಿನ ಶೈಕ್ಷಣಿಕ ಬದುಕಿಗೆ ಶುಭಾಶಯ ಕೋರಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಹನುಮಂತಪ್ಪ ತಾಲೂಕು ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್ ಮಲ್ಲಿಕಾರ್ಜುನ ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ ಎಂ ಕಾಂತೇಶ್ ಕಾರ್ಯದರ್ಶಿ ಸುರೇಶ ಅಂಗಡಿ ಕೋಶಾಧ್ಯಕ್ಷ ಸೂರ್ಯಕಾಂತ್ ಇತರರು ಉಪಸ್ಥಿತರಿದ್ದರು.