ವಿವಿಧ ರಂಗಗಳಲ್ಲಿ ಸಾಧನೆಗೈದ ಮಹನೀಯರಿಗೆ ಪ್ರಶಸ್ತಿ ಮತ್ತು ಸನ್ಮಾನ
Awards and honors for distinguished individuals who have achieved in various fields
ವಿವಿಧ ರಂಗಗಳಲ್ಲಿ ಸಾಧನೆಗೈದ ಮಹನೀಯರಿಗೆ ಪ್ರಶಸ್ತಿ ಮತ್ತು ಸನ್ಮಾನ
ಮಹಾಲಿಂಗಪುರ, 04 ; ಸಮೀಪದ ಬನಹಟ್ಟಿಯ ಎಸ್. ಆರ್. ಎ ಕಾಲೇಜು ಮೈದಾನದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ವೈವಿಧ್ಯಮಯ ಪಥ ಸಂಚಲನ ವೀಕ್ಷಣೆಯೊಂದಿಗೆ ಗೌರವ ಧ್ವಜ ವಂದನೆಯನ್ನು ಸ್ವೀಕರಿಸಿ, ನಾಡಿನ ಜನತೆಗೆ 79 ನೇಯ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಉಚಿತ ಕೊಡ ಮಾಡುವ ತ್ರಿ-ಚಕ್ರ ವಾಹನಗಳನ್ನು ವಿಕಲಚೇತನರಿಗೆ ವಿತರಿಸಿ, ಸಾಮಾನ್ಯರಂತೆ ಸರ್ವ ಸ್ವತಂತ್ರರಾಗಿ ವಿಹರಿಸಲು ಹಾರೈಸಿ, ಸದಾ ವಾಹನವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಕಾಳಜಿ ವಹಿಸಿ ಎಂದರು.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಹಶೀಲ್ದಾರ್ ಗಿರಿಶ ಸ್ವಾದಿ ಮಾತನಾಡಿ, ಅಹಿಂಸಾವಾದಿ ಮಹಾತ್ಮ ಗಾಂಧಿಜಿ ನೇತೃತ್ವದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮಕ್ಕಳು, ಮಹಿಳೆಯರು ಮತ್ತು ದೇಶ ಪ್ರೇಮಿಗಳು ಹೋರಾಟದಲ್ಲಿ ಧುಮುಕಿ, ತಮ್ಮನ್ನು ತಾವು ಅರ್ಿಸಿಕ್ಕೊಂಡು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ.ನಾವೂ ಸಹ ಈ ಶುಭ ಗಳಿಗೆಯಲ್ಲಿ ಅವರ ತ್ಯಾಗ ಬಲಿದಾನಗಳನ್ನು ಸ್ಮರಿಸಿಕೊಳ್ಳಬೇಕು ಎಂದರು. ಹಂತ ಹಂತವಾಗಿ ದೇಶ ಎಲ್ಲ ರಂಗಗಳಲ್ಲೂ ಅಭಿವೃದ್ಧಿ ಹೊಂದುತ್ತ ವಿಶ್ವ ಭಾರತ ದೇಶದ ಕಡೆಗೆ ನೋಡುವಂತಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಬಿಆರಪಿ ರವಿ ಅವಟಿ ಮಾತನಾಡಿ, ಅಂದು ದೇಶದ ಸಹಬಾಳ್ವೆಯ ಮುಗ್ಧರನ್ನು ಒಡೆದು ಅಧಿಕಾರ ದರಿ್ದಂದ ಜನತೆ ಮೇಲೆ ದೌರ್ಜನ್ಯ ನಡೆಸಿದರು. ಅಷ್ಟೇ ಅಲ್ಲದೆ ಸಹಾಯಕ ಸೇನಾ ಪದ್ಧತಿ, ದತ್ತು ಹಕ್ಕು, ನಿಶಸ್ತ್ರಿಕರಣ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದು ಸಾರ್ವಜನಿಕ ಬದುಕನ್ನು ಯಾತನಾಮಯ ಮಾಡಿದರು.
ಈ ರೀತಿಯಾಗಿ ಬ್ರಿಟಿಷರು ದೀರ್ಘ ಅಧಿಕಾರ ನಡೆಸಿದರೂ, ಎದೆ ಗುಂದದ ದೇಶದ ಜನ ಸತ್ಯ, ಅಹಿಂಸೆ ಮತ್ತು ಶಾಂತಿ ಮಂತ್ರಗಳಿಂದ ಚಂಪಾರಣ್ಯ, ಉಪ್ಪಿನ ಸತ್ಯಾಗ್ರಹ ಮತ್ತು ಮಾಡು ಇಲ್ಲವೇ ಮಡಿ ಎಂಬ ಕ್ವಿಟ್ ಇಂಡಿಯಾ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೋಟ್ಟಿದ್ದು, ಅವರೆಲ್ಲರಿಗೂ ಅನಂತ ಅನಂತ ನಮನಗಳು ಎಂದರು.
ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ : 2024-25 ನೇ ಸಾಲಿನಲ್ಲಿ ಪತ್ರಿಕಾ ರಂಗದಿಂದ ಮಹಾಲಿಂಗಪುರ ಉದಯಕಾಲ ದಿನ ಪತ್ರಿಕೆ ವರದಿಗಾರ ಮೀರಾ ಎಲ್.ತಟಗಾರ, ವೈದ್ಯಕೀಯ ಡಾ.ಅಜೀತ ಕನಕರೆಡ್ಡಿ, ಹಿರಿಯ ನ್ಯಾಯವಾದಿ ಎಸ್.ಬಿ.ಗೌಡಪ್ಪನ್ನವರ, ಶಿಕ್ಷಣ ರಂಗದಲ್ಲಿ ಅಕ್ಕುತಾಯಿ ಚೆನ್ನಾಳ, ನಾಗಪ್ಪ ಉಪ್ಪಲದಿನ್ನಿ, ನಾರಾಯಣ ಗುಗ್ಗರಿ, ರೇಶ್ಮಾ ಗಜಾಕೋಶ, ಕಲಾವಿದರು ಸಹದೇವ ತಳವಾರ, ಸುಭಾಸ್ ಪಾಟೀಲ್, ಕೃಷಿ ಶಿವಲಿಂಗಪ್ಪ ಚಾಂಬರ, ಕ್ರೀಡೆ ಕರೆಪ್ಪ. ಕಾಡನ್ನು. ಬ್ಯಾಕೋಡ, ಸಾಹಿತ್ಯ ಸಿದ್ದು ಶಿವಾಪೂರ, ಬೈಲಾಟ್ ಮಕ್ಬೂಲ್ ನದಾಫ, ಕಂದಾಯ ಇಲಾಖೆ ಶಾಂತಾ ಕೂಗಾಟೆ, ಪೋಲೀಸ್ ಇಲಾಖೆ ಪಿಎ??? ಕಿರಣ ಸತ್ತಿಗೇರಿ, ಕೃಷಿ ಇಲಾಖೆ ಪ್ರವೀಣ ಕೊಪ್ಪದ, ಗೃಹರಕ್ಷಕ ದಳ ಎಂ.ಕೆ.ಜೀರಗಾಳ, ಆರೋಗ್ಯ ಇಲಾಖೆ ಸ್ಮೀತಾ ಕಾಳಗಿ, ಪಂ.ರಾಜ ಇಲಾಖೆ ಶಬ್ಬೀರ್ ಮುಲ್ಲಾ, ಪೌರ ಪ್ರಭು ಬಸಪ್ಪಗೋಳ, ಸಹಕಾರ ಸುರೇಶ್ ಚಿಂಡಕ, ಸಮಾಜ ಸೇವೆ ರವಿ ಕೊಣ್ಣೂರ ಮತ್ತು ಸದಾಶಿವ ಸಂತಿ ಹೀಗೆ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ತಾಲೂಕಾಡಳಿತದಿಂದ ಪ್ರಶಸ್ತಿ ಪತ್ರ ಮತ್ತು ಸನ್ಮಾನ ಸ್ವೀಕರಿಸಿದರು.
ಪೋಲೀಸ್ ಇಲಾಖೆ, ಗೃಹ ರಕ್ಷಕ ದಳ, ಸ್ಕೌಟ್ಸ್ ಮತ್ತು ಗೈಡ್ಸ್, ವಿವಿಧ ಶಾಲೆಗಳ ವಿಧ್ಯಾರ್ಥಿಗಳು, ಪಥ ಸಂಚಲನ ನಡೆಸಿಕ್ಕೊಟ್ಟರು. ವೇದಿಕೆ ಮೇಲೆ ನಗರಸಭೆ ಅಧ್ಯಕ್ಷಿಣಿ ವಿದ್ಯಾ ದಬಾಡಿ, ಸಿದ್ದು ಪಟ್ಟಿಹಾಳ, ಪೌರಾಯುಕ್ತ ರಮೇಶ್ ಜಾಧವ, ಸಿಪಿಆಯ್ ಸಂಜೀವ ಬಳಿಗಾರ್ ಮುಂತಾದವರಿದ್ದರು.ಶಿಕ್ಷಕರಾದ ಪ್ರಶಾಂತ್ ಹೊಸಮನಿ, ಮಲ್ಲಿಕಾರ್ಜುನ ಗಡೆನ್ನವರ ನಿರೂಪಿಸಿ, ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 