ಲೋಕದರ್ಶನ ವರದಿ
ಕುರುಗೋಡು 17:ಅತ್ಯಾಧುನಿಕ ಯುಗದಲ್ಲಿ ಮಾನವ ಆಯಾ ಪರಿಸ್ಥಿತಿಗೆ ತಕ್ಕಂತೆ ಬದಲಾಗುವುದು ಸಹಜ ನೈಜ ಗುಣ. ಆದರೆ ಇಂದಿನ ಕಾಲ ಘಟ್ಟದ ಮನುಜರು ಮೂಢ ನಂಬಿಕೆಯಿಂದ ಹೊರ ಬಾರದಿರುವುದು ದುರಂತದ ಸಂಗತಿ ಎಂದು ಕುದ್ಮಲ್ ರಂಗ ರಾವ್, ಚಾಣುಕ್ಯ, ಬಸವರತ್ನ ಪ್ರಶಸ್ತಿ ಪುರಸ್ಕೃತರು ಹಾಗೂ ಸಮಾಜ ವಿಜ್ಞಾನ ವಿಚಾರ ವೇದಿಕೆಯ ಬಳ್ಳಾರಿ ಜಿಲ್ಲಾಧ್ಯಕ್ಷ ವೀರಭದ್ರಗೌಡ ವಿಷಾಧ ವ್ಯಕ್ತಪಡಿಸಿದರು.
ಅವರು ಪಟ್ಟಣ ಸಮೀಪದ ಸಿರಿಗೇರಿ ಪ್ರೌಢ ಶಾಲಾ ಮೈದಾನದಲ್ಲಿ ಸ್ಥಳೀಯ ಸಮಾಜ ವಿಜ್ಞಾನ ವಿಚಾರ ವೇದಿಕೆ ಸಿರಿಗೇರಿ ಹೋಬಳಿ ಘಟಕದ ವತಿಯಿಂದ ಮಕರ ಸಂಕ್ರಮಣ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ರಂಗೋಲಿ ಸ್ಪದರ್ೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಕಲೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಎಲೆ ಮರೆಯ ಕಾಯಿಯಂತೆ ಅಡಗಿರುತ್ತದೆ. ಅಂತಹಾ ಪ್ರತಿಭೆಗಳನ್ನು ಗುರುತಿಸಿ ಗೌರವಿಸಬೇಕಾದ್ದು ಸಂಘಟನೆಗಳ ಮೂಲ ಉದ್ದೇಶವಾಗಿರಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ತದ ನಂತರ "ಜನ ನಾಯಕ" ಪ್ರಶಸ್ತಿಗೆ ಭಾಜರಾದ ರೈತ ಮುಖಂಡ ಎಸ್.ಎಂ.ಅಡಿವೆಯ್ಯ ಸ್ವಾಮಿ ಹಾಗೂ "ಹಳ್ಳಿ ಕಡಲ ಮುತ್ತು" ಪ್ರಶಸ್ತಿಗೆ ಭಾಜನರಾದ ಲೇಖಕ ಹಾಗೂ ಸಂಜೆವಾಣಿ ವರದಿಗಾರ ಎನ್.ಕುಮಾರ್ "ರಂಗೋಲಿ ಎನ್ನುವುದು ಕಲೆಗಳ ಒಂದು ಭಾಗ. ಇದಕ್ಕೆ ಸವಾಲೊಡ್ಡಿ ಕಲೆ ಪ್ರದರ್ಶನ ನೀಡುತ್ತಿರುವ ಮಹಿಳೆಯರು ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇಂತಹಾ ಪ್ರತಿಭೆಗಳಿಗೆ ಗೌರವಿಸಿ ಕಲೆಗೆ ಸ್ಫೂತರ್ಿ ನೀಡುತ್ತಿರುವ ಸಂತೂರ್ ಸಂಸ್ಥೆ ಹಾಗೂ ಸಮಾಜ ವಿಜ್ಞಾನ ವಿಚಾರ ವೇದಿಕೆಯ ಪರಿಶ್ರಮ ಶ್ಲಾಘನೀಯ ಎಂದರು.
ನಂತರ ಎಪಿಎಂಸಿ ಸದಸ್ಯ ಹಾಗಲೂರು ಮಲ್ಲನಗೌಡ ಹಾಗೂ ಗ್ರಾಪಂ ಉಪಾಧ್ಯಕ್ಷ ಗೋಡೆ ಸಂಪತ್ ಕುಮಾರ್ " ಪ್ರಚಲಿತ ವಿಧ್ಯಮಾನಗಳಲ್ಲಿ ಕಲೆ ಎಂಬುದು ಮರೆಯಾಗುತ್ತಿದೆ. ಆದರೆ ರಂಗೋಲಿ ಮಾತ್ರ ಬೆಳಗಾಗುತ್ತಿದ್ದಂತೆ ಆಯಾ ಮನೆಯಂಗಳದಲ್ಲಿ ಬೆಳಕನ್ನು ಚೆಲ್ಲುತ್ತಿವೆ. ಇಂತಹಾ ಸ್ಪಧರ್ೆ ಶಾಶ್ವತವಾಗಿ ಉಳಿಸಿ ಬೆಳಗಲೆಂದು ಆಶಿಸಿದರು.
ಸಿರಿಗೇರಿ ಪಿಎಸ್ಐ ವಿ.ಶಂಕ್ರಪ್ಪ ಮಾತನಾಡಿದರು. ಸಂಘದ ವಲಯ ಮಟ್ಟದ ಅಧ್ಯಕ್ಷ ಖಾಜಾಪೀರ ಅಧ್ಯಕ್ಷತೆ ವಹಿಸಿದ್ದರು, ಸಭೆಯಲ್ಲಿ ತಾಪಂ ಸದಸ್ಯ ವಿ.ರೇಣುಕಪ್ಪ, ಗ್ರಾಪಂ ಅಧ್ಯಕ್ಷೆ ಕೊಳ್ಳಿ ದ್ಯಾವಮ್ಮ ಪವಾಡಿನಾಯ್ಕ, ಸಂತೂರ್ ಸಂಸ್ಥೆಯ ಪ್ರಮುಖರಾದ ಶಿವನಾಗ ಪ್ರಸಾದ್, ಎನ್.ಇಸ್ಮೈಲ್, ಶಿವರಾಜ ಕುಮಾರ್, ಪಿಡಿಓ ಯು.ರಾಮಪ್ಪ, ಬಕ್ಕಾಟೆ ನಾಗೇಂದ್ರಪ್ಪ, ಸಂಘದ ಮುಖಂಡರಾದ ಮೂರ್ಕಣ್ಣ, ಎಸ್.ಎಂ.ಪ್ರಕಾಶಸ್ವಾಮಿ, ಜಾನೂರು ರಾಜಾಸಾಬ್, ವೀರೇಶಸ್ವಾಮಿ, ಹರೀಶ್, ಸದ್ದಾಂ, ಬಿದಿರು ಎರಿಸ್ವಾಮಿ, ಕೆ.ಗುರುಲಿಂಗ, ಡಾ:ಯಾದವ್, ಅನ್ವರ್ ಬಾಷಾ, ಚಾಂದ್ ಬಾಷಾ, ಜಲಾಲಿ, ಗುರುಸಿದ್ದ, ವಿ.ನಾಗರಾಜ ಸೇರಿದಂತೆ ನೂರಾರು ಜನ ಮಹಿಳೆಯರು ಭಾಗವಹಿಸಿದ್ದರು.
ರಂಗೋಲಿ ಸ್ಪಧರ್ೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಸಂಘದ ಜಿಲ್ಲಾ ಸಂಚಾಲಕ ಹೆಚ್.ಲಕ್ಷ್ಮಣ ಭಂಡಾರಿ ಮತ್ತು ವಿ.ಹನುಮೇಶ ಕಾರ್ಯಕ್ರಮ ನಿರ್ವಹಿಸಿದರು.