ಪ್ರೊ. ಜ್ಯೋತಿ ಹೊಸೂರಗೆ ಸನ್ಮಾನ

ಬೆಳಗಾವಿ 20: ನಗರ ಕೇಂದ್ರ ಗ್ರಂಥಾಲಯದಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಪ್ರತಿಷ್ಠಾನದ ಪ್ರಶಸ್ತಿ ಪುರಸ್ಕೃತ ಪ್ರೊ. ಜ್ಯೋತಿ ಹೊಸೂರ ಅವರನ್ನು ಇಲ್ಲಿಯ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸನ್ಮಾನ ಮಾಡಲಾಯಿತು. 

ದಿ. 25 ರಂದು ಬೆಂಗಳೂರಿನಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುವುದು. 

ಡಾ. ರಾಮಕೃಷ್ಣ  ಮರಾಠೆ ಅಧ್ಯಕ್ಷತೆ ವಹಿಸಿದರು. ಡಾ. ಎಚ್.ಬಿ.ಕೋಲಕಾರ ಹಾಗೂ ಹಮೀದಾ ದೇಸಾಯಿ ಅವರು ಪ್ರೊ. ಜ್ಯೋತಿ ಹೊಸೂರ ಅವರ ಕುರಿತು ಮಾತನಾಡಿದರು. 

ಎಂ. ವಾಯ್. ಮೆಣಸಿನಕಾಯಿ ಸ್ವಾಗತಿಸಿ ನಿರೂಪಿಸಿದರು. ಮೋಹನ ಕಳಸದ, ಎ.ಎ.ಸನದಿ, ಅಕ್ಬರ ಸನದಿ ಮುಂತಾದವರು ಉಪಸ್ಥಿತರಿದ್ದರು. ಬಿ. ಎಸ್. ಜಗಾಪೂರ ವಂದಿಸಿದರು.