ಅವಸರ್ ಫೌಂಡೇಶನ್-ಕೃಷಿ ವಿವಿ ಹಿರಿಯ ಪ್ರಾಥಮಿಕ ಶಾಲೆ ಒಪ್ಪಂದ
Avasar Foundation-Krishi Vv Senior Primary School Agreement
ಧಾರವಾಡ 07: ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿನಗರ ಹಿರಿಯ ಪ್ರಾಥಮಿಕ ಶಾಲೆಯೊಂದಿಗೆ ಬೆಂಗಳೂರಿನ ಅವಸರ್ ಪ್ರತಿಷ್ಠಾನವು ಶಾಲೆಯ ನವೀಕರಣದ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಕೃಷಿನಗರ ಶಾಲೆಯ ಆವರಣದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಎರಡೂ ಸಂಸ್ಥೆಗಳ ಪ್ರತಿನಿಧಿಗಳು ಒಪ್ಪಂದಕ್ಕೆ ಸಹಿ ಮಾಡಿದರು. ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಕುಲಸಚಿವ ಜಯಶ್ರೀ ಶಿಂತ್ರಿ, ಕಾರ್ಯದರ್ಶಿ ಡಾ. ಹೆಚ್.ಬಿ. ಬಬಲಾದ, ಬೆಂಗಳೂರಿನ ಅವಸರ್ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿಗಳಾದ ಆನಂದ್ ಚತುರ್ವೇದಿ ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.
ಪ್ರಸ್ತುತ ಶಾಲೆಗೆ ಕಟ್ಟಡ ದುರಸ್ತಿ ಹಾಗೂ ಬಣ್ಣ ಹಚ್ಚುವ ಕಾರ್ಯ, ಅಧ್ಯಯನ ಸಾಮಾಗ್ರಿಗಳ ಪೂರೈಕೆ, ವಿದ್ಯುತ್ ಉಪಕರಣಗಳ ಜೋಡಣೆ, ಇನ್ನಿತರ ಅಂಶಗಳನ್ನು ಈ ಒಪ್ಪಂದವು ಹೊಂದಿದೆ. ಶಾಲೆಯ ನಿರ್ವಹಣಾ ಸಮಿತಿಯ ಖಜಾಂಚಿ ಡಾ. ಬಿ. ಎನ್. ಅರವಿಂದಕುಮಾರ್, ಸದಸ್ಯರುಗಳಾದ ಡಾ.ಎಸ್.ಎಂ. ಮುಂದಿನಮನಿ, ಡಾ. ಆರ್. ವಿ. ಕೋಟಿ, ಡಾ. ಎಸ್. ಕೆ. ಪಾಟೀಲ ಮತ್ತು ಮುಖ್ಯ ಶಿಕ್ಷಕಿ ಇಂದಿರಾ ತುಪಸುಂದರ ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 