ಅವನಿ ಗಂಗಾವತಿಗೇ ರಾಷ್ಟ್ರೀಯ ಕಲಾ ಜ್ಯೋತಿ ರಾಷ್ಟ್ರ ಪ್ರಶಸ್ತಿ

ಲೋಕದರ್ಶನ ವರದಿ

ಕೊಪ್ಪಳ 04: ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ ಸುವರ್ೆ ಕಲ್ಚರಲ್ ಅಕಾಡೆಮಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಬೆಂಗಳೂರು ಅಪರ್ಿಸುವ ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಭಾರತ ವಿಕಾಸರತ್ನ ರಾಷ್ಟ್ರ ಪ್ರಶಸ್ತಿ ಹಾಗೂ ಕನರ್ಾಟಕ ವಿಕಾಸರತ್ನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲೆಯ ಹನುಮಸಾಗರದ ಪುಟ್ಟ ಪ್ರತಿಭೆ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಎಲ್ಲಾ ಜಿಲ್ಲೆಯಲ್ಲಿ ತನ್ನ ಪ್ರತಿಭೆಯನ್ನು ಅರಳಿಸಿ ಜನಮನ್ನಣೆಗಳಿಸಿದ ಅವನಿ ಗಂಗಾವತಿಗೇ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ರಾಷ್ಟ್ರೀಯ ಕಲಾ ಜ್ಯೋತಿ ರಾಷ್ಟ್ರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 

ಗಿನ್ನಿಸ್ ದಾಖಲೆ ಮಾಡಿದ ಅವನಿ ಗಂಗಾವತಿ ಡಿಡಿ ಚಂದನ ವಾಹಿನಿಯ ಮಧುರ ಮಧುರವೀ ಮಂಜುಳಗಾನ, ಮತ್ತು ನೃತ್ಯ ಸ್ಪಧರ್ೆಯಲ್ಲಿ ಚಿಕ್ಕ ವಯಸ್ಸಿನಲ್ಲಿ "ಬಾಲ ಸಾಧನ ಪ್ರಶಸ್ತಿ" ಬಹುಮಾನವನ್ನು ಮುಡಿಗೇರಿಸಿಕೊಂಡ ಹೆಮ್ಮೆ ಕೊಪ್ಪಳ ಜಿಲ್ಲೆಯ ಅವನಿಯವರಿಗೆ ಸಲ್ಲುತ್ತದೆ. ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ಮನೆಮಾತಾದ ಇವರು ಪ್ರಶಸ್ತಿಗಳ ಗರಿಮೆಯನ್ನು ಮುಡಿಗೇರಿಸಿಕೊಂಡವರು.