ಗದಗ: ಭಾರತೀಯ ಸಂಸ್ಕೃತಿಯ ಭಾಗವಾದ ಆಯುವರ್ೇದದಲ್ಲಿ ವೈಯಕ್ತಿಕ ಹಾಗೂ ಸಾರ್ವಜನಿಕ ಸೂತ್ರಗಳನ್ನು ನೀಡಲಾಗಿದ್ದು ಅವುಗಳನ್ನು ನಾವು ಚಾಚೂ ತಪ್ಪದೇ ಪಾಲಿಸದಲ್ಲಿ ಸರ್ವರ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಶಾಸಕ ಎಚ್.ಕೆ.ಪಾಟೀಲ ನುಡಿದರು.
ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ದಲ್ಲಿಂದು ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಆಯುಷ್ ಇಲಾಖೆ ಆಯೋಜಿಸಿದ ರಾಷ್ಟ್ರೀಯ ಆಯುವರ್ೇದ ದಿನಾಚರಣೆ ಕಾರ್ಯಕ್ರಮವದ ಅಧ್ಯಕ್ಷತೆ ವಹಿಸಿ ಆಯುವರ್ೇದದ ಮೂಲ ಪುರುಷ ಧನ್ವಂತ್ರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಗದಗ ಜಿಲ್ಲೆಯಲ್ಲಿನ ಕಪ್ಪತಗುಡ್ಡದಲ್ಲಿಯೂ ಸಹ ಸಾಕಷ್ಟು ಪ್ರಮಾಣದಲ್ಲಿ ಅಮೂಲ್ಯವಾದ ಆಯುವರ್ೇದ ಔಷಧೀಯ ಗಿಡಗಳು ಬೆಳೆಯುತ್ತಿವೆ. ಸಿರಿಧಾನ್ಯಗಳಿಂದ ವಿವಿಧ ಬಗೆಯ ಅಡುಗೆ ತಯಾರಿಸಿ ಸೇವನೆ ಮಾಡುವುದರಿಂದ ಕೂಡ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಎಚ್.ಕೆ.ಪಾಟೀಲ ನುಡಿದರು.
ಸಮಾರಂಭವನ್ನು ಔಷಧೀಯ ಸಸ್ಯಕ್ಕೆ ನೀರೆರೆದು ಉದ್ಘಾಟಿಸಿದ ಸಂಸದ ಶಿವಕುಮಾರ ಉದಾಸಿ ಅವರು ಮಾತನಾಡಿ ವೈಯಕ್ತಿಕ ಹಾಗೂ ಸಾರ್ವಜನಿಕ ಸೂತ್ರಗಳನ್ನು ನೀಡಲಾಗಿದ್ದು ಅವುಗಳನ್ನು ಪಾಲಿಸುವುದರಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಯ ಆಯುವರ್ೇದ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಬಾರಿ ಸಾರ್ವಜನಿಕ ಆರೋಗ್ಯದಲ್ಲಿ ಆಯುವರ್ೇದದ ಪಾತ್ರ ಕುರಿತು ಧ್ಯೇಯದಡಿ ಆಚರಿಸಲಾಗುತ್ತಿದೆ. ನಿಯಮಿತ ಆಹಾರ, ವಿಹಾರ, ಸಕಾಲದಲ್ಲಿ ನಿದ್ರೆ, ಯೋಗ ಪ್ರಾಣಾಯಾಮಗಳಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದಾಗಿದೆ ಎಂದರು.
ಆಯುವರ್ೇದ ಕುರಿತು ಜಾಗೃತಿ ಕರಪತ್ರಗಳನ್ನು ಬಿಡುಗಡೆ ಮಾಡಿದ ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಪಿ. ಬಳಿಗಾರ ಅವರು ಮಾತನಾಡಿ ಆಯುವರ್ೇದದಿಂದ ಅನೇಕ ರೋಗಗಳನ್ನು ಶಾಶ್ವತವಾಗಿ ಗುಣಪಡಿಸುವ ಚಿಕಿತ್ಸೆಗಳಿವೆ. ಚಿಕುನ್ ಗುನ್ಯಾಗೆ ಅಮೃತ ಬಳ್ಳಿಯ ರಸ ಹಾಗೂ ಡೆಂಗ್ಯೂಗೆ ಪಪ್ಪಾಯಿ ಹಣ್ಣು ಸೇವನೆ ಹೀಗೆ ಹಲವು ರೋಗಗಳನ್ನು ಪರಿಹರಿಸಲು ಹಾಗೂ ನಿರಂತರ ಸುಸ್ಥಿತ ಆರೋಗ್ಯ ಕಾಪಾಡಲು ಆಯುವರ್ೇದವು ಸಹಕಾರಿಯಾಗಿದ್ದು ಆಯುವರ್ೇದದ ಮಹತ್ವ ಇತ್ತೀಚೆಗೆ ಮುಂಚೂಣಿಯಲ್ಲಿ ಬಂದಿದೆ ಎಂದು ನುಡಿದರು.
ಡಾ. ಮಹೇಶ ಹಿರೇಮಠ, ಡಾ. ಪ್ರವೀಣ ಸರ್ವದೆ, ಡಾ. ಉಷಾ ನಾಯಕ ಹಾಗೂ ಡಾ. ಅಶೋಕ ಮತ್ತಿಗಟ್ಟಿ ಅವರು ರೋಗ ನಿರೋಧಕ ಶಕ್ತಿಯಲ್ಲಿ ಆಯುವರ್ೇದ, ದೀಘರ್ಾಯುಷ್ಯದಲ್ಲಿ ಆಯುವರ್ೇದ, ದಿನನಿತ್ಯದ ಜೀವನದಲ್ಲಿ ಆಯುವರ್ೇದ ಹಾಗೂ ಮಾನಸಿಕ ಆರೋಗ್ಯದಲ್ಲಿ ಆಯುವರ್ೇದದ ಕುರಿತು ಪಿ.ಪಿ.ಟಿ (ದ್ರಶ್ಯಶ್ರವಣ) ಸಹಿತ ಉಪನ್ಯಾಸ ನೀಡಿದರು. ಚಿಕೂನ್ ಗುನ್ಯಾ ಮಲೇರಿಯಾ ರೋಗ ನಿರೋಧಕ ಔಷಧಿಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಜಿ.ಪಂ. ಸದಸ್ಯರುಗಳಾದ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಶಕುಂತಲಾ ಮೂಲಿಮನಿ, ಈರಪ್ಪ ನಾಡಗೌಡ್ರ, ತಾಲೂಕು ಪಂಚಾಯತ್ ಅಧ್ಯಕ್ಷ ಮೋಹನ ದುರಗಣ್ಣವರ, ಉಪಾಧ್ಯಕ್ಷೆ ಸುಜಾತಾ ಖಂಡು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎನ್. ಹೊನಕೇರಿ, ಗಣೇಶ ಬ್ಯಾಳಿ, ಆಯುವರ್ೇದ ವೈದ್ಯರುಗಳು, ಕಾಲೇಜು ವಿದ್ಯಾಥರ್ಿ ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು.
ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಸುಜಾತಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಡಾ. ಅಶೋಕ ಮತ್ತಿಗಟ್ಟಿ ಹಾಗೂ ಡಾ. ಮಾಲಾ ಮೂಲಿಮನಿ ಧನ್ವಂತ್ರಿ ಸ್ತೋತ್ರ ಪ್ರಸ್ತುತಪಡಿಸಿದರು. ಡಾ. ಮಹಾಂತೇಶ ಹಾದಿಮನಿ, ಡಾ. ಪಿ.ಬಿ. ಹಿರೇಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಡಾ. ಎಂ.ಎಸ್. ಉಪ್ಪಿನ ವಂದಿಸಿದರು.