ಪಠಾನ್ ಮಸೀದಿಯಲ್ಲಿ ಆಟೋ ಚಾಲಕರಿಂದ ಇಫ್ತಾರ್ ಕೂಟ
ಕೊಪ್ಪಳ 10: ಇಸ್ಲಾಂ ಧರ್ಮದ ಪವಿತ್ರ ರಂಜಾನ್ ಮಾಸಾಚರಣೆ ಪ್ರಯುಕ್ತ ವೃತ ರೋಜದಾರ್ ಮುಸ್ಲಿಂ ಬಾಂಧವರಿಗೆ ಕೊಪ್ಪಳ ನಗರ ರೈಲ್ವೆ ನಿಲ್ದಾಣ ಏರಿಯಾದ ಆಟೋ ಚಾಲಕರು ಮತ್ತು ಮಾಲಕರು ಸೇರಿ ಶನಿವಾರ ಸಂಜೆ ಇಫ್ತಾರ್ ಕೋಟವನ್ನು ನಗರದ ಹೊರವಲಯ ರೈಲು ಹಳಿ ಪಕ್ಕದಲ್ಲಿರುವ ಪಠಾಣ್ ಮಸೀದಿಯಲ್ಲಿ ಏರಿ್ಡಸಿದ್ದರು. ಈ ಸಂದರ್ಭದಲ್ಲಿ ಮಸೀದಿಯ ಪೇಶ್ ಇಮಾಮ್ ಮೌಲಾನ ಆರಿಫ್ ಸಾಹೇಬ್ ರವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಇಫ್ತಾರ್ ಕೂಟ ಏರಿ್ಡಸಿದ ಸ್ಟೇಷನ್ ಏರಿಯಾ ಆಟೋ ಚಾಲಕ ಮತ್ತು ಮಾಲಕರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಬಾಬುಸಾಬ್ ಕೋತ್ ವಾಲ್ ಸೇರಿದಂತೆ ಆಟೋ ಚಾಲಕ ಮತ್ತು ಮಾಲಕರುಗಳಾದ ಮಹಬೂಬ್ ಬಾಷಾ ವೀರಾಪುರ ಸರ್ಮಸ್ ಅಲಿ ಅಲ್ತಾಫ್ ಜುಲೈ ನದಿ ಮಾಬು ಪಾಷಾ ಹುಸೇನ್ ಪೀರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.