ಪಂಚಾಯಿತಿಯ ವಾಣಿಜ್ಯ ಮಳಿಗೆಗಳ ಹರಾಜು ಪಾರದರ್ಶಕವಾಗಿ ನಡೆಯಲಿ: ಎಂಟಮಾನ
Auction of panchayat commercial outlets should be conducted transparently: Eighteen
ಆಲಮೇಲ 13: ಪಟ್ಟಣದ ಬಸವೇಶ್ವರ ವೃತದಲ್ಲಿ ನಿರ್ಮಾಣಗೊಂಡ ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳು ಗೌಪ್ಯವಾಗಿ ಹರಾಜು ಮಾಡಲು ಮುಂದಾಗಿರುವ ಮುಖ್ಯಾಧಿಕಾರಿ ಮತ್ತು ಅಧ್ಯಕ್ಷರು ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದಾರೆ ಎಂದು 2ನೇ ವಾರ್ಡಿನ ಪ.ಪಂ. ಸದಸ್ಯ ಸಂಜೀವಕುಮಾರ ಎಂಟಮಾನ ಆರೋಪಿಸಿದರು. ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು. ಪಂಚಾಯತಿಯ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಕಾನೂನು ರೀತಿ ಮೀಸಲಾತಿ ಆಧಾರದ ಮೇಲೆ ನಡೆಯಬೇಕು. ಮತ್ತು ಮುಂಚಿತವಾಗಿ ಪ್ರಚಲಿತ ವಿವಿಧ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಹರಾಜು ಮಾಡಬೇಕು ಎಂದು ಈ ಹಿಂದೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ, ಅದು ಯಾವುದು ಪರಿಗಣನೆಗೆ ತೆಗೆದುಕೊಳ್ಳದೆ ಗೌಪ್ಯವಾಗಿ ಹರಾಜು ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಕೆಲ ವ್ಯಾಪರಸ್ಥರು ಪ.ಪಂ ಸಿ.ಓ ಹೆಸರಿನ ಮೇಲೆ ವಿವಿಧ ಬ್ಯಾಂಕುಗಳಲ್ಲಿ ಡಿಡಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರೀಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಾರ್ವಜನಿಕರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು. ವಾಣಿಜ್ಯ ಮಳಿಗೆಗಳ ಹರಾಜು ಮಾಡುವ ಬಗ್ಗೆ ಪ.ಪಂ ಸದಸ್ಯರ ಸಭೆ ಕರೆದು ಎಲ್ಲರ ಒಪ್ಪಿಗೆ ಪಡೆದುಕೊಂಡು ಕಾನೂನು ರೀತಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚಲಿತ ದಿನ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸುವದು ಮತ್ತು ಕರ ಪತ್ರಗಳ ಹಂಚುವದು, ಡಂಗುರ ಸಾರುವ ಮೂಲಕ ಹರಾಜು ಮಾಡಬೇಕು ಎಂದು ಆಗ್ರಹಿಸಿದರು.
ಒಟ್ಟು 21 ವಾಣಿಜ್ಯ ಮಳಿಗೆಗಳು ನಿರ್ಮಾಣ ಮಾಡಬೇಕಿದ್ದು ಅದರಲ್ಲಿ 17 ಮಾತ್ರ ನಿರ್ಮಿಸಿದ್ದಾರೆ ಅದರ ಕಾಮಗಾರಿ ಇನ್ನು ಪೂರ್ಣಗೊಳಿಸದೆ ಆತುರದಲ್ಲಿ ಮಳಿಗೆಗಳು ಪ್ರಾರಂಬಿಸಲು ಮುಂದಾಗಿದ್ದಾರೆ. ಪಟ್ಟಣ ಪಂಚಾಯಿತಿ ಅಧಿಕಾರಿ ಮತ್ತು ಅದ್ಯಕ್ಷರು ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದು ಪಂಚಾಯಿತಿ ಎಲ್ಲ ವ್ಯವಹಾರಗಳು ಅವ್ಯವಹಾರ ನಡೆದಿದೆ. ಆಲಮೇಲದ ಕೆಪಿಆರ್ ಸಕ್ಕರೆ ಕಾರ್ಖಾನೆಯಿಂದ ಪ್ರತಿ ವರ್ಷ 7.45 ಲಕ್ಷ ತೆರಿಗೆ ಹಣ ಮತ್ತು ಪಟ್ಟಣದ ಕಾಯಿಪಲ್ಯ ಮಾರುಕಟ್ಟೆಯ ನಿಲಾವಿನ 5.40 ಲಕ್ಷ ಹಣ ಸೇರಿದಂತೆ ಪಂಚಾಯಿತಿಗೆ ಬರುವ ಆದಯವನ್ನು ಸಂಪೂರ್ಣವಾಗಿ ಅವ್ಯವಹಾರ ಮಾಡಲಾಗಿದೆ ಈ ಬಗ್ಗೆ ಸದಸ್ಯರು ಲೆಕ್ಕಪತ್ರ ಕೆಳಿದರೆ ಸರಿಯಾದ ಮಾಹಿತಿ ನಿಡುವದಿಲ್ಲ ಸದಸ್ಯರ ಗಮನಕ್ಕೆ ಬಾರದೆ ಅಧ್ಯಕ್ಷ ಮತ್ತು ಮುಖ್ಯಾಧಿಕಾರಿ ಅವ್ಯವಹಾರ ಮಾಡಿದ್ದು ಈ ಬಗ್ಗೆ ಲೋಕಾಯುಕ್ತರು ಸ್ವಯಂ ಪ್ರೇರಣೆಯಿಂದ ತನಿಖೆ ಮಾಡಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಾಣಿಜ್ಯ ಮಳಿಗೆಗಳು ಕಾನೂನು ರೀತಿ ಮಿಸಲಾತಿ ಆಧಾರದ ಮೇಲೆ ಹರಾಜು ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿರವ ಮತ್ತು ಕೆಪಿಆರ್ ತೆರಿಗೆ ತುಂಬಿರುವ ಮತ್ತು ತರಕಾರಿ ಮಾರುಕಟ್ಟೆಯ ಹರಾಜಿನಿಂದ ಬಂದ ಹಣದ ಕರಪತ್ರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು 