ಅತಿರುದ್ರ ಮಹಾಯಜ್ಞ, ಕಿರಿಯ ಕುಂಭಮೇಳದ ಧರ್ಮಸಭೆ, ಸಮಾರೋಪ ಸಮಾರಂಭ

ಅತಿರುದ್ರ ಮಹಾಯಜ್ಞ, ಕಿರಿಯ ಕುಂಭಮೇಳದ ಧರ್ಮಸಭೆ, ಸಮಾರೋಪ ಸಮಾರಂಭ  Atirudra Mahayagna, Dharma Sabha of the Junior Kumbh Mela, Closing Ceremony

                 ಗದಗ   17 :ನವಂಬರ್‌-11 ರಿಂದ 18 ರ ವರೆಗೆ ಈ ಧಾರ್ಮಿಕ ವಿಧಿ ವಿಧಾನಗಳು ಬೆಳಿಗ್ಗೆ 8 ರಿಂದ ಸಾಯಂಕಾಲ 5 ಗಂಟೆ ವರೆಗೆ  ನಿರಂತರವಾಗಿ ನಗರದಲ್ಲಿ ಪ್ರ-ಪ್ರಥಮ ಬಾರಿಗೆ ನಡೆಯುತ್ತಿರುವ 9 ಅಗ್ನಿಕುಂಡದ ಅತಿರುದ್ರ ಮಹಾಯಜ್ಞ ಹಾಗೂ 11,111 ಮುತ್ತೈದೆಯರಿಂದ ಕಿರಿಯ ಕುಂಭಮೇಳ ಕಾರ್ಯಕ್ರಮಗಳ ಸಮಾರೋಪ ಧರ್ಮಸಭೆ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮ ನವೆಂಬರ್ 18 ರಂದು ಮಂಗಳವಾರ ಸಾಯಂಕಾಲ 4-00 ಘಂಟೆಗೆ ವಿದ್ಯಾದಾನ ಸಮಿತಿ ಮೈದಾನದಲ್ಲಿ ನಡೆಯಲಿದೆ ಅಂತ ಸಮಿತಿಯ ಶಾಸಕ ಹಾಗೂ ಸಮಿತಿಯ ಗೌರವಾಧ್ಯಕ್ಷ ಸಿ ಸಿ ಪಾಟೀಲ ಹೇಳಿದರು.         

            ನಗರದ ವಿ ಡಿ ಎಸ್ ಟಿ ಮೈದಾನದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದ ನೇತೃತ್ವವವನ್ನು ಪೂಜ್ಯ ಶ್ರೀ ಸಹದೇವಾನಂದ ಗಿರೀಜೀ ಮಹಾರಾಜರು ಹಾಗೂ ಕಾರ್ಯದರ್ಶಿ  ಜುನಾ ಆಖಾಢ ಪೀಠಾಧೀಶ್ವರ, ಶ್ರೀ ಅಮರನಾಥ ಮಹಾದೇವ ಮಠ ವಹಿಸಿಕೋಳ್ಳಲಿದ್ದಾರೆ. ದಿವ್ಯ ಸಾನಿಧ್ಯವನ್ನು    ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು, ಅನ್ನದಾನೇಶ್ವರ ಮಠ, ಮಣಕವಾಡ ವಹಿಸಿಕೋಳ್ಳಲಿದ್ದು, ಸಾನಿಧ್ಯ ಶ್ರೀ ಮ.ನಿ.ಪ್ರ. ಜಗದ್ಗುರು ಬೂದೀಶ್ವರ ಮಹಾಸ್ವಾಮಿಗಳು ವಹಿಸಿಕೋಳ್ಳಲಿದ್ದಾರೆ ಅಂತ ಮಾಹಿತಿ ನೀಡಿದರು  ಶಿವಶಾಂತವೀರ ಶಿವಶರಣರು ಸುಕ್ಷೇತ್ರ ಬಳಗಾನೂರ,   ಶಾಂತಲಿಂಗ ಮಹಾಸ್ವಾಮಿಗಳು ಭೈರನಟ್ಟಿ ತಾಲೂಕ ನರಗುಂದ, ಪ.ಪೂ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಜುಕಿ ಹಿರೇಮಠ, ಸೂಡಿ-ಗದಗ, ಪರಮ ಪ  ಅಭಿನವ ಯಚ್ಚರ ಮಹಾಸ್ವಾಮಿಗಳು ಜಗದ್ಗುರು ಶಿ  ಯಚ್ಚರ ಸ್ವಾಮಿಗಳ ಸಂಸ್ಥಾನ ಮಠ, ಶಿರೋಳ ಶ್ರೀಗಳು ಸೇರಿದಂತೆ ಅನೇಕ ಮಠದ ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು.    

              ಮಾಜಿ ಶಾಸಕ, ಕಾರ್ಯಕ್ರಮದ ಗೌರವಾಧ್ಯಕ್ಷ ಡಿ.ಆರ್‌. ಪಾಟೀಲ, ಶಾಸಕ ಸಿ.ಸಿ. ಪಾಟೀಲ ಘನ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿರಣ ಪ್ರಕಾಶ ಭೂಮಾ ಅಧ್ಯಕ್ಷರು, ಅತಿರುದ್ರ ಮಹಾಯಾಗ ಸಮಿತಿ, ಗದಗ-ಬೆಟಗೇರಿ ವಹಿಸಿಕೋಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ, ಮಾಜಿ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಹಲವರು ಅತಿಥಿ ಸ್ಥಾನ ವಹಿಸಿಕೋಳ್ಳಲಿದ್ದಾರೆ ಎಂದರು.       ನವ್ಹಂಬರ್ 11 ರಿಂದ 18 ರ ವರೆಗೆ ನಡೆದ ಧಾರ್ಮಿಕ ವಿಧಿ-ವಿಧಾನ, ಹೋಮ, ಯಜ್ಞ ಕಾರ್ಯಕ್ರಮವನ್ನು ನಮ್ಮ ಜೀವಿತಾವಧಿಯಲ್ಲಿ ಎಂದೂ ನೋಡಲು ಆಗುವುದಿಲ್ಲ. ಬಹುಶಃ ಉ. ಕರ್ನಾಟಕದಲ್ಲೇ ಅತ್ಯಂತ ದೊಡ್ಡ ಕಾರ್ಯಕ್ರಮ ಇದಾಗಿದೆ. ದೈವಿಕ ಕಾರ್ಯಕ್ರಮ ನೋಡುವುದು ಅಪರೋಪ. ಮನೆಯಲ್ಲಿ ಒಬ್ಬ ಬ್ರಾಹ್ಮಣರನ್ನು ಕರೆತಂದು ಪೂಜೆ ಮಾಡಬಹುದು. ಆದರೆ, ನೂರಾರು ಸಾಧು-ಸಂತರ ಸಮ್ಮುಖದಲ್ಲಿ ಜಾತ್ಯಾತೀತ, ಪಕ್ಷಾತೀತವಾಗಿ ಪೂಜಾ ಕಾರ್ಯಕ್ರಮ ನಡೆದಿದೆ.

               ನನ್ನ ಪಕ್ಷವನ್ನು ಹೋರಗಿಟ್ಟು ಈ ಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈ ಸೇವೆಯಲ್ಲಿ ಭಾಗಿಯಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.            ಪಕ್ಷಾತೀತ ಜಾತ್ಯಾತೀತವಾಗಿ  ನಡೆದ ಈ ಯಜ್ಞವು ಲೋಕ ಕಲ್ಯಾಣಕ್ಕಾಗಿ ನೆರವೇರಿಸಿದ್ದು, ನಾಳೆ ಇದರ ಸಮಾರೋಪ ಸಮಾರಂಭ ಜರುಗಲಿದ್ದು, ಈಗಾಗಲೇ 4 ಲಕ್ಷ 50 ಸಾವಿರ ಶ್ರೇಷ್ಠ ರುದ್ರಾಕ್ಷಿ ವಿತರಿಸಲಾಗಿದೆ.ನಾಳೆಯ ವರೆಗೆ ಇನ್ನೂ 50 ಸಾವಿರ ರುದ್ರಾಕ್ಷಿ ವಿತರಿಸಲಾಗುವುದಾಗಿ ಸಿ ಸಿ ಪಾಟೀಲ ತಿಳಿಸಿದರು. *ಕೋಟ್‌....* *ಕಾರ್ಯಕ್ರಮದಲ್ಲಿ ಭಾಗವಸಿದ್ದ ಶ್ರೀಗಳು* ಕಾಶಿ ಪೀಠದ ಜಗದ್ಗುರು ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಸೂಡಿಮಠದ ಶ್ರೀಗಳು, ಕಾಗಿನೆಲೆ ಶಾಖಾಪೀಠದ ಪೂಜ್ಯರಾದ ಅಮೋಘ ಸಿದ್ದಾನಂದಪುರಿ ಶ್ರೀಗಳು ಭೇಟಿ, ಶ್ರೀ ಮಹಾಂತ ನಾರಾಯಣ ಗಿರಿ ಜೀ ಮಹಾಮಂತ್ರಿ ಪ್ರಯಾಗರಾಜ ಕುಂಭಮೇಳ ಮತ್ತು ಅಂತರ ರಾಷ್ಟ್ರೀಯ ಪ್ರವಕ್ತ ಶ್ರೀ ಪಂಚದಶನಾಮ ಜುನಾ ಅಖಾಡ, ಶ್ರೀ ಮಹಾಂತ ಕಂಚನ ಗಿರಿಜಿ ಮಹಾರಾಜ ಮಹಾಯಂಡಲೇಶ್ವರ ಶ್ರೀ ಪಂಚದಶನಾಮ ಜುನಾ ಅಖಾಡ, ಶ್ರೀ ಮಹಾಂತ ಶ್ರೀ ಧೀರೇಂದ್ರ ಗಿರಿಜಿ ಮಹಾಗುರು ದೆಹಲಿ ಸಂತ ಮಹಾಮಂಡಲ, ಶ್ರೀ ಮಂಗೇಶಜೀ ಬೆಂಡೆ ಅಖಿಲ ಭಾರತೀಯ ಸಂಯೋಜಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಶ್ರೀ ರಘುನಂದನ ಜೀ ಅಖಿಲ ಭಾರತೀಯ ಸಹ ಸಂಯೋಜಕ ಪ್ರಜ್ಞಾಪ್ರವಾಹ ಭೇಟಿ ನೀಡಿದ್ದಾರೆ.       ಈ ವೇಳೆ ದೇವೇಂದ್ರ ಗಿರಿ ಶ್ರೀಗಳು, ಸಮಿತಿ ಅಧ್ಯಕ್ಷ ಕಿರಣ್ ಪ್ರಕಾಶ ಭೂಮಾ, ಎಚ್‌. ಎಸ್ ಶಿವನಗೌಡ್ರ, ರವಿ ಗುಂಜೀಕರ, ರಾಜು ಕುರಡಗಿ, ಬಸವರಾಜ ಬಿಂಗಿ, ರಮೇಶ ಸಜ್ಜಗಾರ, ವಿಜಯಲಕ್ಷ್ಮೀ ಮಾನ್ವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.