ಅಥಣಿ: ಭಾರತೀಯ ಮಹಿಳೆ ಅತ್ಯಂತ ಧೈರ್ಯವಂತೆ: ಡಾ. ಗೊಂದಿ

ಲೋಕದರ್ಶನ ವರದಿ

ಅಥಣಿ 14:   ಭಾರತೀಯ ಮಹಿಳೆ ಅತ್ಯಂತ ಧೈರ್ಯವಂತೆ ಹಾಗೂ ಜ್ಞಾನಿಯಾದವಳು ಎಂದು ಡಾ.ಎಂ.ಎಂ.ಗೊಂದಿ ಹೇಳಿದರು ಅವರು ಸ್ಥಳೀಯ ಯಶೋಧಾದೇವಿ ಕುಲಗುಡೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

            ಪ್ರಾಚೀನ ಕಾಲದಿಂದಲೂ ಭಾರತೀಯ ಮಹಿಳೆಯರಲ್ಲಿ ಧೈರ್ಯ , ಜಾಣತನ ಹಾಗೂ ಆತ್ಮವಿಶ್ವಾಸಗಳಿರುವುದನ್ನು ಸಾಕಷ್ಟು ಉದಾಹರಣೆಗಳಿಂದ ನೋಡಿದ್ದೇವೆ, ಕನ್ನಗಿ, ಗಾಗರ್ಿ ಯರಂತಹ ಸ್ತ್ರೀಯರು ತಮ್ಮಜ್ಞಾನದಿಂದ ಎಂತಹ ಮೇಧಾವಿಗಳನ್ನೂ ಸಹ ಸೋಲಿಸುತ್ತಿದ್ದರು, ತನ್ನ ಆತ್ಮ ವಿಶ್ವಾಸದಿಂದ ಸೀತೆ ಎಂತಹ ಕಷ್ಟಕ್ಕೂ ಬಗ್ಗದೆ ಜಯ ಸಾಧಿಸಿದಳು, ಹಾಗೆ ಮುಂದೆ ಚನ್ನಮ್ಮ, ಅಬ್ಬಕ್ಕ, ಝಾಂಸಿರಾಣೀ ಲಕ್ಷ್ಮೀಬಾಯಿ, ಅಹಲ್ಯಾಬಾಯಿ ಹೋಳ್ಕರ ಹೀಗೆ ಧೈರ್ಯವಂತ ಮಹಿಳೆಯರ ಬಳಗವೇ ನಮ್ಮ ಭಾರತದಲ್ಲಿತ್ತು, ನಂತರದ ದಶಕದಲ್ಲಿ ಬಂದ ಆನಂಧಿಬಾಯಿ ಮೊದಲ ವೈದ್ಯೆ, ಸಾವಿತ್ರಿಬಾಯಿ ಫುಲೆ ವಿಧವೆಯರಿಗೂ ಶಿಕ್ಷಣ ದೊರಕಿಸುವ ಉದ್ದೇಶದಿಂದ ಹೋರಾಡಿದವರು ಹೀಗೆ ಜ್ಞಾನ, ವಿಜ್ಞಾನ, ಕಲೆ, ಸಾಹಿತ್ಯ ಎಲ್ಲದರಲ್ಲಿಯೂ ಹೆಸರು ಮಾಡರುವಂತಹ ಮಹಿಳೆಯರು ಹಿಂದಿನಿಂದ ಇಂದಿನವರೆಗೂ ನಮ್ಮ ಭಾರತದಲ್ಲಿರುವುದು ಹೆಮ್ಮೆ ವಿಷಯ ಎಂದ ಅವರು ಇಂತಹ ಮಹಾನ್ ಸಆಧಕರ ಸಾಧನೆಗಳು ನಮ್ಮ ಇಂದಿನ ಯುವತಿಯರಿಗೆ ದಾರಿದೀಪವಾಗಬೇಕು ಎಂದರು.

        ಅನಂತರ ಮಾತನಾಡಿದ ಸಮಾರಂಭದ ಅಧ್ಯಕ್ಷ ಎಸ್. ಸಿ. ಪಾಟೀಲ, ಮಹಿಳೆಯರು ಜಾಗ್ರತಗೊಳ್ಳದ ಹೊರತು ಅವರು ಅಭಿವೃದ್ದಿಯಾಗುವುದಿಲ್ಲ ಅದಕ್ಕಾಗಿ ಪ್ರತಿಯೊಬ್ಬ ಮಹಿಳೆಯು ತಾನು ಜಾಗೃತಗೊಂಡು ತನ್ನ ಸುತ್ತಮುತ್ತಲಿನ ಎಲ್ಲ ಮಹಿಳೆಯರನ್ನು ಜಾಗೃತಗೊಳಿಸಲು ಯತ್ನಿಸಬೇಕು ಎಂದು ಹೇಳಿದರು.

    ಈ ಸಂದರ್ಭದಲ್ಲಿ ಡಾ ಎನ್. ಸಿ. ಪಾಟೀಲ, ಡಿ.ಎಸ್.ಪಾಟೀಲ, ಎ.ಎಮ್.ಸೊನ್ನಗಿ, ಜಿ.ಟಿ. ಲಿಗಾಡೆ, ಎಸ್.ಎಸ್.ನಾಯಿಕ, ಆರ್.ಪಿ.ಸಾಳವೆ, ಎಸ್. ಸಿ. ತಳವಾರ  ಮುಂತಾದವರು ಉಪಸ್ಥಿತರಿದ್ದರು.  ಕಾರ್ಯಕ್ರಮವನ್ನು ಅನಿತಾ ಡಂಗಿ ಹಾಗೂ ಲಕ್ಷ್ಮಿ ಅರಮೂತಿ  ನಿರೂಪಿಸಿದರು, ಭಾರತಿ ಬಸರಿಕೊಡಿ ವಂದಿಸಿದರು.