ಬಿಜಾಪುರ ಜಿಲ್ಲಾ ನೂತನ ಅಧ್ಯಕ್ಷರಾಗಿ ಅತಾವುಲ್ಲಾದ್ರಾಕ್ಷಿ ಆಯ್ಕೆ
ಬಿಜಾಪುರ 16 : ಜನವರಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಿಜಾಪುರ ಜಿಲ್ಲೆಯ 2024-27 ರಅವಧಿಗೆ ನೂತನ ಅಧ್ಯಕ್ಷರಾಗಿ ಅತಾವುಲ್ಲಾದ್ರಾಕ್ಷಿ, ಉಪಾಧ್ಯಕ್ಷರಾಗಿ ಸಮೀರ್ ಹುಣಸಗಿ ಮತ್ತು ನಾಜಿಯಾ ಮುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ನಿಸಾರ್‌ಅಹ್ಮದ್ ಮನಿಯಾರ್ ಮತ್ತು ಮೆಹಬೂಬ್ ಕೋಲಾರ್, ಕಾರ್ಯದರ್ಶಿಯಾಗಿ ಅಡ್ವೋಕೇಟ್ ಸಮೀ ಉಲ್ಲಾ ಬಡೇಘರ್, ಕೋಶಾಧಿಕಾರಿಯಾಗಿ ಇಸಾಕ್ ಸಯ್ಯದ್ ಹಾಗೂ ಸಮಿತಿ ಸದಸ್ಯರುಗಳಾಗಿ ಅಡ್ವೋಕೇಟ್ ಗೌಸ್‌ಜಕಾತಿ, ಎಜಾಜ್ ಮನಿಯಾರ್, ಮುನಾಫ್ ಪಠಾಣ, ಸೈಫನ್ ಮುಲ್ಲಾ, ಉಮರಖಾನ್ ಪಠಾಣ್,ಯಾಸಿರ್ ಇನಾಮದಾರ್, ನಾಮ ನಿರ್ದೇಶಿತ ಸದಸ್ಯರಾಗಿ ಉಮರ್ ಪುಣೇಕರ್‌ರವರು ಆಯ್ಕೆ ಯಾಗಿದ್ದಾರೆ.
ಜಿಲ್ಲಾ ಸಮಿತಿಯ ಚುನಾವಣಾ ಪ್ರಕ್ರಿಯೆಯನ್ನು, ಎಸ್‌ಡಿ ಪಿಐ ರಾಜ್ಯ ಕಾರ್ಯದರ್ಶಿಯಾದ ರಂಜಾನ್ ಕಡಿವಾಳ್‌ರವರು ನಡೆಸಿಕೊಟ್ಟರು.ಜಿಲ್ಲಾ ಪ್ರತಿನಿಧಿ ಸಭೆಯನ್ನುರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆಫ್ಸರ್ ಕೊಡ್ಲಿಪೇಟೆ ರವರು ಉದ್ಘಾಟಿಸಿದರು.ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಆಫ್ಸರ್ ಕೊಡ್ಲಿಪೇಟೆ ಮಾತನಾಡಿ, ಬಾಗಲಕೋಟೆಯ ಜಮಖಂಡಿಯಲ್ಲಿ ನಡೆದಿದ್ದ ಬಂದೂಕು ತರಬೇತಿಗೆ ಸಂಬಂಧಿಸಿದಂತೆ ಕೇವಲ 27 ಜನರ ವಿರುದ್ಧಈಋ ದಾಖಲಿಸಿ ಕೈ ತೊಳೆದುಕೊಂಡಿರುವ ಸರಕಾರ ಯಾಕೆ ಈ ಪ್ರಕರಣವನ್ನು ಓಋ ತನಿಖೆ ವಹಿಸಿಲ್ಲ? ಬಂದೂಕು ತರಬೇತಿಯಂತಹ ಶಿಬಿರದ ಮೂಲಕ ಭಯವನ್ನು ಹುಟ್ಟಿಸುವ ಕೆಲಸ ನಡೆಯುತ್ತಿದ್ದರೂ ಗೃಹ ಇಲಾಖೆ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದ ಅವರು ಸನಾತನ ಸಂಸ್ಥೆಯ ಕಾರ್ಯಕರ್ತರು 2017 ಸೆಪ್ಟೆಂಬರ್ 5 ರಂದು ದಿಟ್ಟ ಪತ್ರಕರ್ತೆಯಾಗಿದ್ದ ಗೌರಿ ಲಂಕೇಶರನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆಗೆ ಇದೇ ರೀತಿಯ ಬಂದೂಕು ತರಬೇತಿ ನೀಡಲಾಗಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.ಈತ ವಿಚಾರವಾದಿ ನರೇಂದ್ರದಾ ಬೋಲ್ಕರ್‌ರನ್ನು ಗುಂಡಿಕ್ಕಿಕೊಂದ ಪ್ರಮುಖ ಆರೋಪಿ ಕೂಡಆಗಿದ್ದಾನೆ ಇವನಿಗೂ ಈಗ ಬಂದೂಕು ತರಬೇತಿ ನೀಡುತ್ತಿರುವವರಿಗೂ ಸಂಬಂದವಿದೆಯೇ?ಎಂಬ ಬಗ್ಗೆ ಪೊಲೀಸ್ ಇಲಾಖೆ ಉನ್ನತ ಮಟ್ಟದ ತನಿಖೆ ಮಾಡಬೇಕು. ಹೋರಾಟಗಾರ್ತಿ ವಿಚಾರವಾದಿ ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿಗಳಿಗೆ "ವಿಚಾರಣೆ ಶೀಘ್ರದಲ್ಲಿ ಮುಕ್ತಾಯಗೊಳ್ಳುವ ಸಾಧ್ಯತೆಇಲ್ಲ" ಎಂಬ ಕಾರಣ ನೀಡಿ ಜಾಮೀನು ಮಂಜೂರು ಗೊಳಿಸಿರುವುದು ಸ್ವೀಕಾರಾರ್ಹವಲ್ಲ. ಜನಪರ ಹೋರಾಟಗಾರರ ಸಾಲು ಸಾಲು ಜಾಮೀನು ಅರ್ಜಿಗಳು ಧೂಳು ಮುಕ್ಕುತ್ತಿವೆ. ಆದರೆಗೌರಿಹತ್ಯೆ ಆರೋಪಿಗಳಿಗೆ ಸುಲಭದಲ್ಲಿ ಜಾಮೀನು ದೊರಕುತ್ತಿರುವುದು ವಿಷಾದನೀಯ. ಗೌರಿಹತ್ಯೆ ಆರೋಪಿಗಳಿಗೆ ನೀಡಿರುವ ಜಾಮೀನು ಇವರಲ್ಲಿ ಇನ್ನಷ್ಟು ಕೊಲೆಗಳನ್ನು ನಡೆಸಲು ಧೈರ್ಯ ನೀಡಿದಂತಾಗುತ್ತದೆ ಹಾಗಾಗಿ ಜಾಮೀನುರದ್ದು ಮಾಡುವಂತೆ ತಕ್ಷಣ ಈ ಬಗ್ಗೆ ಸರಕಾರ ಮೇಲ್ಮನವಿ ಸಲ್ಲಿಸಬೇಕೆಂದು ಆಗ್ರಹಿಸಿದರು.ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ಪಕ್ಷದ ಕಳೆದ ಒಂದುವರೆ ವರ್ಷಗಳ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿ ಅಗತ್ಯ ಸಲಹೆಗಳನ್ನು ಪರಿಗಣಿಸಿ ಅನುಮೋದನೆ ನೀಡಲಾಯಿತು. ಬಿಜಾಪುರ ಜಿಲ್ಲೆಯ ರಾಜಕೀಯ ವಿದ್ಯಮಾನಗಳ ಚರ್ಚೆ ನಡೆಸಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಿಷ್ಠಗೊಳಿಸಲು ಚರ್ಚೆ ನಡೆಸಲಾಯಿತು.