ಲೋಕದರ್ಶನ ವರದಿ
ಮುದಗಲ್ಲ 19: ಪಟ್ಟಣ ಸಮೀಪದ ಹಡಗಲಿ ಮತ್ತು ತುರಡಗಿ ಗ್ರಾಮಸ್ಥರು ನೆರೆಸಂತ್ರಸ್ತರಿಗಾಗಿ ಸಂಗ್ರಹಿಸಿದ್ದ ದಿನಬಳಕೆಯ ಅಗತ್ಯವಸ್ತುಗಳನ್ನು ಲಿಂಗಸುಗೂರ ತಾಲೂಕಾಡಳಿತಕ್ಕೆ ಶುಕ್ರವಾರ ಹಸ್ತಾಂತರಿಸಿದರು.
ಹಡಗಲಿ ಗ್ರಾಮಸ್ಥರು ಸಾವಿರ ರೊಟ್ಟಿ, ಸೀರೆ, ದೋತ್ರಾ, ಶರ್ಟ,ಅಕ್ಕಿ, ಹುಣಸೆಚಟ್ನಿ, ಮಾವಿನ ಚಟ್ಟಿ, ಖಾರದ ಪುಡಿ, ತೊಗರಿ ಬೆಳೆ, ಬಿಸ್ಕೇಟ್ ಬಾಕ್ಸ್, ಬ್ರೇಡ್ ಬಾಕ್ಸ್ಗಳನ್ನು ಸಂಗ್ರಹಿಸಿ ಲಿಂಗಸುಗೂರಿನ ಪರಿಹಾರ ಸಾಮಗ್ರಿ ಸಂಗ್ರಹ ಕೇಂದ್ರದ ನೋಡಲ್ ಅಧಿಕಾರಿ ರಾಚಪ್ಪವರಿಗೆ ಹಸ್ತಾಂತರಿಸಿದರು. ಶರಣಬಸವ ಹಡಗಲಿ, ಶೇಖರಗೌಡ ಮಾಲಿಪಾಟೀಲ್, ಶಿವುಕುಮಾರ ಹಡಗಲಿ, ಶರಣಬಸವ, ಹನುಮಂತ ಸೇರಿದಂತೆ ಗ್ರಾಮದ ಯುವಕರು ಇದ್ದರು.
ತಾಪಂ ಮಾಜಿ ಅಧ್ಯಕ್ಷ ರುದ್ರಗೌಡ ಪಾಟೀಲ್ ತುರಡಗಿ ಇಲ್ಲಿನ ಗ್ರಾಮಸ್ಥರು ಸಂಗ್ರಹಿಸಿದ್ದ ದವಸ ಧಾನ್ಯಗಳನ್ನು, ಬಟ್ಟೆ, ಕಾಳು, ರೊಟ್ಟಿ, ಅಕ್ಕಿ ಸೇರಿದಂತೆ ಗೋವಿಗಳಿಗೆ ಮೇವುಗಳನ್ನು ತಶೀಲ್ದಾರ ಚಾಮರಾಜ ಪಾಟೀಲರಿಗೆ ನೀಡಿದರು. ನೋಡಲ್ಅಧಿಕಾರಿ ಡಾ| ರಾಚಪ್ಪ, ಮಾನಪ್ಪ ಆಶಿಹಾಳ ತಾಂಡಾ ಸೇರಿದಂತೆ ಅನೇಕರು ಇದ್ದರು.