ಲೋಕದರ್ಶನ ವರದಿ
ಕೊಪ್ಪಳ 20: ಇತೀಚೆಗಷ್ಡೆ ಪರಿಸರ ವೀಕೊಪದಿಂದ ಉತ್ತರ ಕನರ್ಾಟಕ ಭಾಗದ ಬಹುಭಾಗ ಕಡೆಗಳಲ್ಲಿ ನೆರೆ ಹಾವಳಿಯಿಂದ ಮನೆ-ಮಠ ಕಳೆದುಕೊಂಡಿರುವ ನೆರೆ ಸಂತ್ರಸ್ತ ಸಾರ್ವಜನಿಕರಿಗೆ ಕೊಪ್ಪಳ ನಗರದ ಮುಸ್ಲಿಂ ಸಮಾಜದ ಪರವಾಗಿ ಇಲ್ಲಿನ ಅಂಜುಮನ ಖಿದ್ಮತ-ಎ-ಮುಸ್ಲಿಮೀನ್ ಸಂಸ್ಥೆಯ ವತಿಯಿಂದ ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನ ಮನವಳ್ಳಿ ಗ್ರಾಮದ ನೆರೆ ಸಂತ್ರಸ್ತ ಸಾರ್ವಜನಿಕರಿಗೆ ಆಹಾರ ಸಾಮಗ್ರಿಗಳ 150 ಕಿಟ್ಗಳನ್ನು ಪ್ರತೇಕ ಕುಟುಂಬದವರಿಗೆ ವಿತರಿಸಲು, ಇಲ್ಲಿಂದ ಮಂಗಳವಾರ ಬೆಳಿಗ್ಗೆ ಅಂಜುಮನ್ ಕಮೀಟಿ ಪದಾಧಿಕಾರಿಗಳು ಪ್ರವಾಸ ಕೈಗೊಂಡರು.
ಬೆಳಗಾವಿ ಜಿಲ್ಲೆ ಸೌದತ್ತಿ ತಾಲೂಕಿನ ಮನುವಳ್ಳಿ ಗ್ರಾಮದ ನೆರೆ ಸಂತ್ರಸ್ತರನ್ನು ಭೆಟಿ ಮಾಡಿ ಅವರ ಯೋಗಾಕ್ಷೇಮ ವಿಚಾರಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ಹೇಳಿ ದಿನ ಬಳಕೆಯ ಆಹಾರ ಸಾಮಾಗ್ರಿಗಳ ಕಿಟ್ಗಳನ್ನು ವಿತರಿಸಲು ತೆರಳಿದ ಈ ಸಂದರ್ಭದಲ್ಲಿ ಅಂಜುಮನ ಕಮೀಟಿಯ ನಿಕಟಪೂರ್ವ ಅಧ್ಯಕ್ಷ ಹಾಗೂ ಸಮಾಜದ ಮುಖಂಡ ಎಂ. ಪಾಷಾ ಕಾಟನ್, ಅಂಜುಮನ ಕಮೀಟಿ ಅಧ್ಯಕ್ಷ ಹುಸೇನ್ ಪೀರಾಂ ಮುಜಾವರ್ (ಚಿಕನ್) ಸೇರಿದಂತೆ ಪದಾಧಿಕಾರಿಗಳಾದ ಮಾನ್ವಿ ಪಾಷಾ, ಜಾಫರ್ ಸಂಗಟಿ, ಅಬ್ದುಲ್ ಅಜೀಜ್ ಮಾನ್ವಿಕರ್, ಸಯ್ಯದ್ ಜಮೀರ್ ಖಾದ್ರಿ, ಎಂ.ಡಿ. ಆಸಿಫ್ ಕಕರ್ಿಹಳ್ಳಿ, ಆರ್.ಎಂ. ರಫಿ, ಅಬ್ದುಲ್ ಗಫ್ಫಾರ್ ಡಿಡ್ಡಿ, ಸೀರಾಜ್ ಕೊಲ್ಕಾರ, ಅಬ್ದುಲ್ ಮುನಾಫ್, ಕಬೀರ್ ಸಿಂದೋಗಿ, ಮಹೆಬೂಬ್ ಅರಗಂಜಿ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.