ಧಾರವಾಡ 16: ದೇಶದಾದ್ಯಂತ ಮಕ್ಕಳ ಹಕ್ಕುಗಳ ಜಾಗೃತಿ ಇದೀಗ ಮೂಡುತ್ತಿದೆ. ಇದನ್ನು ಮನಗಂಡಿರುವ ರಾಜ್ಯ ಮತ್ತು ಕೇಂದ್ರ ಸಕರ್ಾರಗಳು ಮಕ್ಕಳ ಸಹಾಯವಾಣಿಯೊಂದಿಗೆ ಗೆಳೆತನ ಕಾರ್ಯಕ್ರಮ ರೂಪಿಸಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಈಶಪ್ಪ ಕೆ. ಭೂತೆ ಹೇಳಿದರು.
ಮಕ್ಕಳ ಸಹಾಯವಾಣಿ 1098, ಸಿಐಎಫ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ, ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ, ಜಿಲ್ಲಾ ಸಹಯೋಗ ಕೇಂದ್ರ ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಸಾಧನಕೇರಿಯ ಸಕರ್ಾರಿ ಆದರ್ಶ ವಿದ್ಯಾಲಯ ಆರ್.ಎಂ.ಎಸ್.ಎ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಕ್ಕಳ ಸಹಾಯವಾಣಿಯೊಂದಿಗೆ ಗೆಳೆತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಕರ್ಾರದ ಯೋಜನೆಗಳು ಮತ್ತು ಕಾನೂನಿನ ನೆರವಿನಿಂದ ಇಂದು ಕೂಲಿಕಾರರ ಮಕ್ಕಳು ಸಹ ಉನ್ನತ ಹುದ್ದೆಗೆ ಏರಲು ವಿಫುಲ ಅವಕಾಶಗಳಿವೆ. ಮಕ್ಕಳ ಹಕ್ಕುಗಳ ರಕ್ಷಣೆ, ವಿಶೇಷವಾಗಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ರೂಪಿಸಿರುವ ಪೋಕ್ಸೋ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದಿಂದ ಸಮಾಜದಲ್ಲಿ ಜಾಗೃತಿ ಮೂಡುತ್ತಿದೆ. ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಇಂದು ಸ್ವೀಕರಿಸಿರುವ ಪ್ರತಿಜ್ಞೆಯನ್ನು ಎಲ್ಲರೂ ಆಚರಣೆಗೆ ತರಬೇಕು. ಧಾರವಾಡದ ಸಕರ್ಾರಿ ಆದರ್ಶ ವಿದ್ಯಾಲಯವು ಒಳ್ಳೆಯ ವಾತಾವರಣದೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಿಗೇರ ಮಾತನಾಡಿ, ಮಕ್ಕಳು ಬಾಳಿನ ಬೆಳಕು. ಆ ದೀಪಗಳು ಸದಾ ಬೆಳಗುತ್ತಿರಬೇಕು. ಸ್ವಾಮಿ ವಿವೇಕಾನಂದರ ಸಿಂಹ ವಾಣಿಯಂತೆ ನಾವು ಸರ್ವ ಧರ್ಮ ಸಮನ್ವಯದ ಭಾವನೆ ಬೆಳೆಸಿಕೊಂಡು ಎಲ್ಲ ಧಮರ್ಿಯರೊಂದಿಗೆ ಸಹಬಾಳ್ವೆಯಿಂದ ಬದುಕಬೇಕು. ಭಾತೃತ್ವ ಭಾವನೆ ಬೆಳೆಸಿಕೊಳ್ಳಬೇಕು. ಹೆಣ್ಣುಮಕ್ಕಳು ಸಬಲರಾಗಬೇಕು. ಯಾವುದೇ ಆಸೆ, ಆಮಿಷಗಳಿಗೆ ಮಕ್ಕಳ ಒಳಗಾಗದೇ ತಮ್ಮ ಮೇಲೆ ದೌರ್ಜನ್ಯ, ಕೆಟ್ಟ ನಡುವಳಿಕೆ ತೋರಿದವರ ಕುರಿತು ತಕ್ಷಣ ಉಚಿತ ಸಹಾಯವಾಣಿ 1098 ಮೂಲಕ ಮಾಹಿತಿ ನೀಡಿದರೆ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಸಹಾಯವಾಣಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೆಶಕ ಬಸವರಾಜ ವರವಟ್ಟಿ ಮಾತನಾಡಿ, ಬಾಲ್ಯವಿವಾಹ ತಡೆ, ಹೆಣ್ಣುಮಕ್ಕಳ ಸಾಗಣೆ, ಜೀತಪದ್ಧತಿ, ದೇವದಾಸಿ ಪದ್ಧತಿ ನಿಮರ್ೂಲನೆ ಮಾಡಲು ಜಿಲ್ಲಾ ಮಟ್ಟದಲ್ಲಿ ಮಕ್ಕಳ ರಕ್ಷಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
7ನೇ ತರಗತಿ ವಿದ್ಯಾಥರ್ಿನಿ ಕವಿತಾ ಅವರಿಂದ ಭರತನಾಟ್ಯ ಪ್ರದರ್ಶನ ಜರುಗಿತು. ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಬಿಡಿಎಸ್ಎಸ್ ಸಂಸ್ಥೆ ಹಾಗೂ ಮಕ್ಕಳ ಸಹಾಯವಾಣಿ 1098 ನಿದರ್ೆಶಕ ಫಾದರ್ ಜೇಕಬ್ ಅಂಥೋನಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಚಿನ್ನಣ್ಣವರ ಆರ್.ಎಸ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿದರ್ೆಶಕ ಮಂಜುನಾಥ ಡೊಳ್ಳಿನ, ಜಿಲ್ಲಾ ಬಾಲಕಾಮರ್ಿಕ ಯೋಜನಾಧಿಕಾರಿ ಬಾಳಾಗೌಡ ಪಾಟೀಲ, ಆದರ್ಶ ವಿದ್ಯಾಲಯದ ಎಸ್ಡಿಎಂಸಿ ಉಪಾಧ್ಯಕ್ಷ ಚನ್ನಬಸಪ್ಪ ಲಗಮಣ್ಣನವರ, ಕಲ್ಯಾಣ ಕಿರಣ ಸೇವಾ ಸಂಸ್ಥೆಯ ನಿದರ್ೆಶಕ ಬಿ.ವೈ. ಪಾಟೀಲ, ಸೀಡಾ ಸಂಸ್ಥೆಯ ನಿದರ್ೆಶಕ ಶ್ರೀನಿವಾಸ ಕುಲಕಣರ್ಿ, ಆದರ್ಶ ವಿದ್ಯಾಲಯದ ಪ್ರಾಚಾರ್ಯ ಪ್ರಕಾಶ ಬಿ. ಭೂತಾಳಿ ಮತ್ತಿತರರು ವೇದಿಕೆಯಲ್ಲಿದ್ದರು. ಚಂದ್ರಶೇಖರ್ ರಾಹುತರ್
ನಿರೂಪಿಸಿದರು.