ಹೆಚ್ಚಿನ ಪರಿಹಾರಕ್ಕಾಗಿ ಆಗ್ರಹಿಸಿ: ಆಸ್ಪತ್ರೆಯ ಮುಂದೆ ಮೃತರ ಕುಟುಂಬಗಳಿಂದ ಪ್ರತಿಭಟನೆ

ಲೋಕದರ್ಶನ ವರದಿ

ಮುಧೋಳ 17: ಭಾನುವಾರ ಡಿಸ್ಟಿಲರಿ ಸ್ಪೋಟಕ್ಕೆ ಸಂಬಂಧಿಸಿದಂತೆ ನಾಲ್ಕು ಜನರು ಮೃತಪಟ್ಟಿದ್ದು, ಹೆಚ್ಚಿನ ಅನುದಾನಕ್ಕಾಗಿ ಆಗ್ರಹಿಸಿ ಮೃತರ ಕುಟುಂಬಗಳು ಹಾಗೂ ರೈತ ಮುಖಂಡರು ನಗರದ ಸಕರ್ಾರಿ ಆಸ್ಪತ್ರೆಯ ಎದುರಿಗೆ ತಡರಾತ್ರಿಯ ವರೆಗೂ ಪ್ರತಿಭಟನೆ ನಡೆಸುತ್ತಿದ್ದಾರೆ.

      ರೈತ ಮುಖಂಡ, ಬಾಗಲಕೋಟ ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಈ ಸಂದರ್ಭದಲ್ಲಿ ಮಾತನಾಡಿ, ಗುಲಬಗರ್ಾ ಹಾಗೂ ಇನ್ನಿತರ ಕಡೆಗೆ ಈ ರೀತಿ ಅವಘಡಗಳು ಸಂಭವಿಸಿದಾಗ ಮೃತರ ಕುಟುಂಬಗಳಿಗೆ ರೂ. 25 ಲಕ್ಷ ಪರಿಹಾರ ಕೊಟ್ಟ ಉದಾಹರಣೆಗಳಿವೆ. ಅದೇ ರೀತಿ ಇಲ್ಲಿಯೂ ಮೃತ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ, ಸಕರ್ಾರ ಹಾಗೂ ಕಾಖರ್ಾನೆ ವಿರುದ್ಧ ಘೋಷಣೆ ಕೂಗುತ್ತಾ ಆಸ್ಪತ್ರೆ ಎದುರಿಗೆ ಅಪಾರ ಸಂಖ್ಯೆಯ ಜನರೊಂದಿಗೆ ಪಟ್ಟು ಹಿಡಿದು ಕುಳಿತರು.

      ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಮುಧೋಳ ಶಾಸಕ ಗೋವಿಂದ ಕಾರಜೋಳ ಮಾತನಾಡಿ, ನಾಳೆ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಈ ವಿಷಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ,  ಜಗದೀಶ ಶೆಟ್ಟರ, ಕೆ.ಎಸ್.ಈಶ್ವರಪ್ಪ ಹಾಗೂ ಮುಂತಾದ ಮುಖಂಡರೊಡನೆ ಮುಖ್ಯಮಂತ್ರಿಗಳ ಜೊತೆ ಚಚರ್ಿಸಲಾಗುವುದು. ಅಲ್ಲದೇ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ದೊರೆಯುವವರೆಗೂ ಬಿಜೆಪಿ ಹೋರಾಟ ನಡೆಸಲಿದೆ ಎಂದು ತಿಳಿಸಿದರು. ಈಗ ಶವಸಂಸ್ಕಾರ ಕಾರ್ಯ ಮುಗಿಸಿ, ಪರಿಹಾರಕ್ಕಾಗಿ ನಾನು, ಸಕರ್ಾರ ಹಾಗೂ ಕಾಖರ್ಾನೆ ಮಾಲೀಕರೊಂದಿಗೆ ಚಚರ್ಿಸುತ್ತೇನೆ ಎಂದಾಗ, ಸೂಕ್ತ ಪರಿಹಾರದ ಘೋಷಣೆ ಆಗುವವರೆಗೂ ಜಾಗ ಬಿಟ್ಟು ಕದಲುವುದಿಲ್ಲವೆಂದು ಮೃತರ ಕುಟುಂಬಗಳ ಸದಸ್ಯರು ಕಣ್ಣೀರು ಸುರಿಸುತ್ತಾ ತಿಳಿಸಿದರು. ಅದಕ್ಕೆ ರೈತ ಮುಖಂಡರೂ ಕೂಡಾ ಈ ಬಗ್ಗೆ ಸಂಬಂಧಿಸಿದವರ ಜೊತೆ ಚಚರ್ಿಸಿ ನಿರ್ಣಯ ತಿಳಿಸಿ. ನಮಗೆ ಸೂಕ್ತ ನ್ಯಾಯ ದೊರೆಯುವವರೆಗೂ ಜಾಗ ಬಿಟ್ಟು ಕದಲುವುದಿಲ್ಲವೆಂದು ಹೇಳಿದರು. 

ಆವಾಗ ಶಾಸಕರು ಹಾಗೂ ರೈತ ಮುಖಂಡರು ಸೇರಿಕೊಂಡು ಕಾಖರ್ಾನೆಯ ಮಾಲೀಕರ ಮನೆಗೆ ತೆರಳಿ ಅವರ ಜೊತೆ ಚಚರ್ಿಸಿದಾಗ ಕಾಖರ್ಾನೆ ಮಾಲಿಕರು ನಾನು ಈಗಾಗಲೇ ಘೋಷಣೆ ಮಾಡಿರುವ ಪ್ರಕಾರ  ಪರಿಹಾರವಾಗಿ  5 ಲಕ್ಷ ರೂ. ಹಾಗೂ ಇನ್ಸೂರೆಸ್ಸ್ ಹಣ ಮೃತ ಕುಟುಂಬಕ್ಕೆ ನೀಡುತ್ತೇನೆ. ಮತ್ತು ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಕಾಖರ್ಾನೆಯಲ್ಲಿ ನೌಕರಿ ಕೊಡುತ್ತೇನೆ.

ದಯಮಾಡಿ ಸಹಕರಿಸಿರೆಂದು ಕೋರಿದಾಗ ಮೃತರ ಕುಟುಂಬಸ್ಥರು ಹಾಗೂ ಶಾಸಕರು ಮತ್ತು ರೈತ ಮುಖಂಡರು ಒಪ್ಪಿಗೆ ನೀಡಿದಾಗ ಮೃತರ ಕುಟುಂಬಸ್ಥರು ತಮ್ಮ ತಮ್ಮ ಮೃತ ಕಳೆಬರಹವನ್ನು ಸಕರ್ಾರಿ ಆಸ್ಪತ್ರೆಯಿಂದ ಮನೆಗೆ ತಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದರು.