ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಸೀಫ್ ಕೆಂಭಾವಿ ಆಯ್ಕೆ
ತಾಳಿಕೋಟಿ 08: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಇದರ ಮುದ್ದೇಬಿಹಾಳ ಗ್ರಾಮೀಣ ತಾಳಿಕೋಟಿ ಬ್ಲಾಕ್ ನ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಟ್ಟಣದ ಕ್ರಿಯಾಶೀಲ ಕಾಂಗ್ರೆಸ್ ಯುವ ಕಾರ್ಯಕರ್ತ ಆಸಿಫ್ ಮಹಿಬೂಬ ಕೆಂಭಾವಿ ಆಯ್ಕೆಯಾಗಿದ್ದಾರೆ.
ಈ ಬಾರಿ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯನ್ನು ಆನ್ಲೈನ್ ಮತದಾನದ ಮೂಲಕ ಮಾಡಲು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನಿರ್ಧರಿಸಿತ್ತು. ಇದರ ಅಂಗವಾಗಿ 2024ರ ಆಗಸ್ಟ್ 20 ರಿಂದ ಸೆಪ್ಟೆಂಬರ್ 22 ರವರೆಗೆ ಚುನಾವಣೆಗಾಗಿ ಮತದಾನ ನಡೆದಿತ್ತು ಇದರಲ್ಲಿ ಕಾರ್ಯಕರ್ತ ಆಸಿಫ್ ಕೆಂಭಾವಿ ಅವರು ಹೆಚ್ಚಿನ ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಲಾಗಿದೆ.