ನಿಗದಿ, ಕಬ್ಬಿನ ಬಾಕಿ ಬಿಲ್ ಪಾವತಿಗಾಗಿ ಇಂದಿನಿಂದ ಆಹೋರಾತ್ರಿ ಧರಣಿ: ಅಶೋಕ ಪೂಜಾರಿ

ನಿಗದಿ, ಕಬ್ಬಿನ ಬಾಕಿ ಬಿಲ್ ಪಾವತಿಗಾಗಿ  ಇಂದಿನಿಂದ ಆಹೋರಾತ್ರಿ ಧರಣಿ: ಅಶೋಕ ಪೂಜಾರಿ

ರಾಮದುರ್ಗ 14: ಕಬ್ಬಿನ ದರ ನಿಧರ್ಾರ ಮಾಡದಿರುವ ಹಾಗೂ ಜಿಲ್ಲೆಯ ಹಲವು ಕಾಖರ್ಾನೆಗಳಿಂದ ರೈತರ ಬಾಕಿ ಹಣ ಸಂದಾಯವಾಗದೇ ಇರುವ ಕ್ರಮ ಖಂಡಿಸಿ ನವ್ಹಂಬರ-15 ಮುಂಜಾನೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಜಿಲ್ಲೆಯ ಕಬ್ಬು ಬೆಳೆಗಾರರ ಸಮ್ಮುಖದಲ್ಲಿ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಉತ್ತರ ಕನರ್ಾಟಕ ವಿಕಾಸ ವೇದಿಕೆಯ ಅಧ್ಯಕ್ಷ ಅಶೋಕ ಪೂಜಾರಿ ಹೇಳಿದರು.

ಪಟ್ಟಣದ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಏಫ್ಆರ್ಪಿ ಹಾಗೂ ರಾಜ್ಯದ ಎಸ್ಎಪಿ ಕಾಯ್ದೆಯನ್ವಯ ಪ್ರತಿ ಟನ್ ಕಬ್ಬಿಗೆ ರೂ. 3,000 ಪಾವತಿ ಮಾಡಿದರೂ ಕಾಖರ್ಾನೆ ಮಾಲಿಕರಿಗೆ ಯಾವುದೇ ನಷ್ಠ ಉಂಟಾಗದು. ಆದರೆ ಆಡಳಿತ ಯಂತ್ರ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಸರಕಾರ ಕಾಖರ್ಾನೆಗಳ ಪರ ಲಾಭಿ ನಡೆಸುತ್ತಿದೆ ಎಂದು ಕಿಡಿ ಕಾರಿದ ಅವರು, ರಾಮದುರ್ಗ ತಾಲೂಕಿನ ಸಮಸ್ತ ಕಬ್ಬು ಬೆಳೆಗಾರರು ಬೆಳಗಾವಿಯಲ್ಲಿ ನಡೆಯುತ್ತಿರುವ ನ್ಯಾಯಯುತ ರೈತರ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಬಾಕ್ಸ್ಃ

ಜಿಲ್ಲಾಧಿಕಾರಿಗಳ ಕಾಯರ್ಾಲಯದಲ್ಲಿ ಜಿಲ್ಲೆಯ ಎಲ್ಲ ಕಾಖರ್ಾನೆಗಳಿಂದ ರೈತರಿಗೆ ಸಂಪೂರ್ಣ ಬಿಲ್ ಸಂದಾಯವಾದ ಕುರಿತು ಮಾಹಿತಿ ಇದೆ. ಆದರೆ ಕೆಲವು ಕಾಖರ್ಾನೆಗಳಿಂದ ಕೆಲ ರೈತರಿಗೆ ಬಿಲ್ ಸಂದಾಯವಾಗಿಲ್ಲ. ಕಾಖರ್ಾನೆಯ ಬಿಲ್ ಪಾವತಿ ಮಾಹಿತಿ ಕುರಿತು ಪರಿಶೀಲಿಸುವ ಗೋಜಿಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿವರ್ಗ ಕಾಳಜಿ ವಹಿಸದೇ ಇರುವುದು ರೈತವಿರೋಧಿ ಸರಕಾರದಿಂದ ರೈತರಿಗೆ ಅನ್ಯಾಯವಾಗುವುದರಲ್ಲಿ ಎರಡು ಮಾತಿಲ್ಲ.

ಅಶೋಕ ಪೂಜಾರಿ ಉತ್ತರ ಕನರ್ಾಟಕ ವಿಕಾಸ ವೇದಿಕೆ ಅಧ್ಯಕ್ಷ.

ಕಬ್ಬು ಬೆಳೆಗಾರರ ಸಂಘದ ತಾಲೂಕಾಧ್ಯಕ್ಷ ವೈ. ಎಚ್. ಪಾಟೀಲ ಮಾತನಾಡಿ, ಪ್ರತಿ ಟನ್ ಕಬ್ಬಿಗೆ  ಶೇಕಡಾ 8.5 ಇಳುವರಿ ಇದ್ದುದನ್ನು ಈಗ ಶೇಕಡಾ 10 ಇಳುವರಿ ಆಧಾರದ ಮೇಲೆ ದರ ನಿಗಧಿ ಮಾಡಿದ್ದಾರೆ. ಆದರೆ ಇಳುವರಿಗೆ ತಕ್ಕಂತೆ ದರದಲ್ಲಿ ಮಾತ್ರ ಏರಿಕೆ ಮಾಡಿಲ್ಲ. ರಾಜ್ಯದಲ್ಲಿರುವ 65 ಕಾಖರ್ಾನೆಗಳಲ್ಲಿ 22 ಕಾಖರ್ಾನೆಗಳು ಸಹಕಾರಿ ಆಧಾರಿತವಾಗಿವೆ. ಆದರೆ ವಿವಿಧ ಕಾಖರ್ಾನೆಗಳಲ್ಲಿ ಬಿಲ್ ವಿತರಣೆಯಲ್ಲಿ ತಾರತಮ್ಯ ನೀತಿ ನಡೆಯುತ್ತಿಲೇ ಸಾಗಿದೆ. ಶೀಘ್ರದಲ್ಲಿ ಜಿಲ್ಲಾಧಿಕಾರಿಗಳು ಈ ಕುರಿತು ಗಮನ ಹರಿಸಿ, ಕಾಖರ್ಾನೆಯ ಮಾಲಿಕರೊಂದಿಗೆ ಚಚರ್ಿಸಿ ಪ್ರತಿ ಟನ್ ಕಬ್ಬಿಗೆ ರೂ. 3,000 ನಿಗಧಿ ಮಾಡದೇ ಇದ್ದಲ್ಲಿ ಸಮಸ್ತ ಕಬ್ಬು ಬೆಳೆಗಾರರ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಹಾಗೂ ರೈತ ಮುಖಂಡ ಬಿ. ಎನ್. ದಳವಾಯಿ, ಸಿದ್ದನಗೌಡ ಪಾಟೀಲ, ವೆಂಕಣ್ಣ ನಾಯಕ ಸೇರಿದಂತೆ ಇತರರಿದ್ದರು.

ಪೋಟೋ ಶೀಷರ್ಿಕೆಃ 14ಆರ್ಎಎಂ-1

ರಾಮದುರ್ಗ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕನರ್ಾಟಕ ವಿಕಾಸ ವೇದಿಕೆಯ ಅಧ್ಯಕ್ಷ ಅಶೋಕ ಪ್ರಜಾರಿ ಮಾತನಾಡಿದರು.