ಗೋವಿನಜೋಳ ಸಂಸ್ಕರಣಾ ಸಹಕಾರಿ ಸಂಘಕ್ಕೆ ಅಶೋಕ ಗದಿಗೆಪ್ಪ ಹುಲಿ ಅವಿರೋಧವಾಗಿ ಆಯ್ಕೆ
ಧಾರವಾಡ 17: ಜಿಲ್ಲೆ ನವಲಗುಂದ ತಾಲೂಕು ನವಲಗುಂದ ನಗರದಲ್ಲಿರುವ ರೇಣುಕಾದೇವಿ ರೈತರ ಗೋವಿನಜೋಳ ಸಂಸ್ಕರಣಾ ಸಹಕಾರಿ ಸಂಘಕ್ಕೆ ನಡೆದ ಅಧ್ಯಕ್ಷ ವ ಉಪಾಧ್ಯಕ್ಷರ ಚುನಾವಣೆಯಲ್ಲಿ ಸೋಮೇಶ ಜಗದೀಶ ಉಪನಾಳ ಇವರು ಅಧ್ಯಕ್ಷರಾಗಿ ಮತ್ತು ಅಶೋಕ ಗದಿಗೆಪ್ಪ ಹುಲಿ ಇವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ರಿಟರ್ನಿಂಗ್ ಅಧಿಕಾರಿಗಳಾಗಿ ಪಿ. ಮಧುಸೂದನ ಕಾರ್ಯನಿರ್ವಹಿಸಿದರು. ಈ ಸಂದರ್ಬದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರಾದ ಮಾಜಿ ಅಧ್ಯಕ್ಷರಾದ ಎಸ್ ಎ ಪಾಟೀಲ, ಮತ್ತು ಮಾಜಿ ಉಪಾಧ್ಯಕ್ಷರಾದ ಎ. ಎಸ್. ಬಾಗಿ, ನಿರ್ದೇಶಕರಾದ ಬಿ.ಎಂ. ನರಗುಂದ, ಎಫ್. ಆರ್. ಪಾಟೀಲ, ಡಿ. ಎಂ. ಸೂರಿನ, ಎಂ. ಎಚ್. ಬಂಡಿವಾಡ, ಬಿ. ಎಂ. ಕುಡವಕ್ಕಲಿಗೇರ್, ಎ. ಜೆ. ಉಪನಾಳ, ಎನ್. ಎಸ್. ಪಾಟೀಲ, ಎಸ್. ಬಿ. ಬೆಟಗೇರಿ, ಆರ್. ಬಿ. ಮಣಕವಾಡ, ಎನ್. ಬಿ. ದೊಡ್ಡಮನಿ, ಎಸ್. ಎಸ್. ನಿಡವಣಿ, ಡಿ. ಜಿ. ತಳವಾರ ಎನ್. ಸಿ. ಧರ್ಮಾಯತ ಅವರೊಂದಿಗೆ, ನಗರದ ಪ್ರಮುಖರಾದ ರಾಯನಗೌಡ್ರ ಪಾಟೀಲ, ಬಸವರಾಜ ಹರಿವಾಳದ, ನಾಗಪ್ಪ ಸಂಘಟಿ, ನಿಂಗಪ್ಪ ಹಳ್ಳದ ಮುಂತಾದವರು ಹಾಜರಿದ್ದರು.