ಅಶೋಕ್ ಮಣಿ ಅವರಿಗೆ ಗೌರವ ಸನ್ಮಾನ
ಮುದ್ದೇಬಿಹಾಳ, 07; ತಾಲೂಕಿನ ಐದನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಅಶೋಕ್ ಮಣಿ ಇವರನ್ನು ಕಸಾಪ ಗೌರವ ಕಾರ್ಯದರ್ಶಿ ಗಂಗಾಧರ್ ಕಸ್ತೂರಿ ಇವರ ಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಶರಣ ಸಾಹಿತ್ಯ ಪರಿಷತ್ತಿನ ಜಮ್ಮಲದಿನ್ನಿ, ಸಾಹಿತಿ ಅಬ್ದುಲ್ ರೆಹಮಾನ್ ಬಿದರಕುಂದಿ, ಪತ್ರಕರ್ತ ಎಸ್.ಎಸ್.ಗಡೇದ, ಈರಣ್ಣ ಕಲಬುರ್ಗಿ ಹಾಗೂ ಚನ್ನಬಸ್ಸು ಸರಶಟ್ಟಿ ಇದ್ದರು.