ಆಶಾ ಕಾರ್ಯಕರ್ತೆ ಗಂಗಮ್ಮ ಪ್ರೇರಣೆ: ಗ್ಯಾರೆಂಟಿ ಸಮಿತಿಗೆ ಕೋಳಿವಾಡ 1,50.ಲಕ್ಷ ರೊ ದೇಣಿಗೆ
ರಾಣೇಬೆನ್ನೂರು 8: ಅನೇಕ ಕಷ್ಟಗಳ ಮಧ್ಯೆಯು ಆಶಾ ಕಾರ್ಯಕರ್ತೆ ಗಂಗಮ್ಮ ಅವರು, ತಮ್ಮ ಅಪ್ರತಿಮ ಸಾಧನೆ ಮೆರೆದು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಅಂತವರ ಪ್ರಾಂಜಲ ಮನಸ್ಸಿನ ಆರ್ಥಿಕ ದೇಣಿಗೆ ಸೇವಾ ಕಾರ್ಯದಿಂದ ತಾವು ಸಹ ಪ್ರೇರೇಪಣೆಗೊಂಡಿರುವಾಗಿ, ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಅವರು ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಶಾಮ ಸುಂದರ ಅಡಿಗ ಅವರಿಗೆ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರು ತಾಲೂಕ ಗ್ಯಾರಂಟಿ ಅಧ್ಯಕ್ಷರ ತಿಂಗಳ ವೇತನ 1.50.000 ರೂಗಳನ್ನು ಇಲಾಖೆಗೆ ವಿತರಿಸಿ ಮಾತನಾಡಿದರು. ಆಶಾ ಕಾರ್ಯಕರ್ತೆಯಾಗಿದ್ದ ಗಂಗಮ್ಮ ಲಗುಬಿಗಿ ಮತ್ತು ಕುಟುಂಬದವರು ತುಂಬಾ ಬಡತನದಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿಯೂ ಸಹ ತಮಗೆ ಸರಕಾರದಿಂದ ದೊರೆತ ಗೃಹಲಕ್ಷ್ಮಿ ಯೋಜನೆಯ 24,000 ರೂಪಾಯಿಗಳನ್ನು ದೇಣಿಗಿಯಾಗಿ ತಮ್ಮ ಜೀವನ ಸಾರ್ಥಕತೆ ಮೆರೆದಿದ್ದಾರೆ. ಅದರಿಂದ ತಾವು ಸಹ ಪ್ರೇರಣೆ ಗೊಂಡಿರುವುದಾಗಿ ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಗಂಗಮ್ಮ ಅವರು ಈಗಾಗಲೇ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ1.50.000 ರೂಗಳು ಸಾಲ ಮಾಡಿ ಓರ್ವ ಪುತ್ರನನ್ನು ಎಂ.ಎ. ಶಿಕ್ಷಣ ಪೂರೈಸಿದ್ದಾರೆ. ಇನ್ನೊರ್ವ ಪುತ್ರ ನನ್ನು ಬಿ. ಎಸ್. ಸಿ, ನರ್ಸಿಂಗ್ ಓದಿಸುತ್ತಿದ್ದಾರೆ ಅವರ ಈ ಸಾಧನೆ ಮಾದರಿಯಾಗಿದೆ ಎಂದು ಸ್ಲಾಗಿಸಿದರು. ಇಂತಹ ಸಂದರ್ಭದಲ್ಲಿಯೂ ಸಹ ನಮ್ಮೂರ ಶಾಲೆಗೆ ಹಣ ದಾನ ಮಾಡಿದ್ದಾರೆ ಅವರ ಈ ಸೇವಾಗುಣ ಇತರರಿಗೆ ಮಾದರಿಯಾಗಿದೆ ಮತ್ತು ಅವರ ಮಗನ ಓದು ಪೂರ್ಣವಾಗುತ್ತಿದ್ದಂತೆ ಸರಕಾರಿ ನೌಕರಿ ದೊರಕಿಸಲು ಮುಂದಾಗುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಧಾನಿ ಗಂಗಮ್ಮ ಕುಟುಂಬದವರನ್ನು ಅಭಿನಂದಿಸಿ ಸನ್ಮಾನಿಸಿದರು. ಇದೇ ರೀತಿ ಪ್ರೇರಣೆ ಪಡೆದ ಐರಣಿ ಗ್ರಾಮದ ಗಜಾನನ ಸಮಿತಿಯು ಒಂದು ಲಕ್ಷ, ಮತ್ತು ಬುಳ್ಳಜ್ಜನವರು ಶಾಲೆಗೆ ವೈಫೈ ವ್ಯವಸ್ಥೆ ಮಾಡಿದ್ದಾರೆ. ಮತ್ತೋರ್ವ ಶಿಕ್ಷಣ ಪ್ರೇಮಿ ಶಾಲೆಗೆ ಸೌಂಡ್ ಸಿಸ್ಟಮ್ ದಾನ ನೀಡಿದ್ದು ಮತ್ತಿರೆ ದಾನಿಗಳು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿರುವುದು ಅತ್ಯಂತ ಪ್ರಸಂಸನೀಯ ಕಾರ್ಯವಾಗಿದೆ ಅಲ್ಲದೆ ಮತ್ತಷ್ಟು ದಾನಿಗಳು ಮುಂದೆ ಬಂದು ಮತ್ತಷ್ಟು ದಾನವನ್ನು ನೀಡಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸೌಲಭ್ಯ ಕಲ್ಪಿಸಿ ರಾಜ್ಯಕ್ಕೆ ಮಾದರಿಯಾಗಬೇಕೆಂದು ಪ್ರಕಾಶ್ ಕೋಳಿವಾಡ ಅವರು ಗ್ರಾಮದ ನಾಗರಿಕರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಗ್ಯಾರೆಂಟಿ ಸಮಿತಿ ಉಪಾಧ್ಯಕ್ಷ ಎಸ್. ಆರ್.ಪಾಟೀಲ, ತಾಲೂಕಾ ಅಧ್ಯಕ್ಷ ಮಂಜನಗೌಡ ಪಾಟೀಲ, ಬಿಇಓ ಶ್ಯಾಮ ಸುಂದರ್ ಅಡಿಗ, ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಕೃಷ್ಣಪ್ಪ ಕಂಬಳಿ, ಚಂದ್ರ್ಪ ಬೇಡರ, ನಾಗರಾಜ್ ಕುಸಗೊರ, ಬೀರ್ಪ ಬುಳ್ಳಪ್ಪನವರ, ರವಿ ಮಲ್ಲಳ್ಳಿ, ಗೌರಮ್ಮ ತೆಂಗಿನ, ಭಾಗ್ಯಲಕ್ಷ್ಮಿ ಅರಕೇರಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.