ಸಂವಿಧಾನವು ಎಲ್ಲಾ ಕಾನೂನುಗಳಿಗೆ ತಾಯಿ ಇದ್ದ ಹಾಗೆ: ನ್ಯಾ. ಕುಲಕಣರ್ಿ

ಲೋಕದರ್ಶನ ವರದಿ

ಕೊಪ್ಪಳ 26:  ಭಾರತದಲ್ಲಿ ಯಾವುದೇ ಶಾಸನವು ರಚನೆಮಾಡಬೇಕಾದರೆ ಸಂವಿಧಾನವು ಎಲ್ಲಾ ಶಾಸನಗಳಿಗೆ ತಾಯಿ ಇದ್ದ ಹಾಗೆೆ ಎಂದು ಸನ್ಮಾನ್ಯ ಸಂಜೀವ್ ವಿ ಕುಲಕಣರ್ಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕೊಪ್ಪಳ, ಹೇಳಿದರು. 

ಇವರು ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೊಪ್ಪಳ, ಜಿಲ್ಲಾ ವಕೀಲರ ಸಂಘ, ಕೊಪ್ಪಳ ಹಾಗೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ "ಸಂವಿಧಾನ ದಿನಾಚರಣೆ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಂವಿಧಾನವು ಎಲ್ಲಾರಿಗೂ ಜೀವಿಸುವ ಹಕ್ಕನ್ನು, ಧಾಮರ್ಿಕ ಹಕ್ಕನ್ನು, ಮತ್ತು ಉಚಿತ ಶಿಕ್ಷಣ ಹಕ್ಕನ್ನು ಕೊಟ್ಟಿದೆ. ಈ ಹಕ್ಕುಗಳು ಉಲ್ಲಂಘನೆಯಾದರೆ ಅದಕ್ಕೆ ಪರಿಹಾರವನ್ನು ಸಹ ಮೂಲಭೂತ ಹಕ್ಕನ್ನಾಗಿ ಎಲ್ಲಾ ನಾಗರಿಕರಿಗೆ ಸಮಾನವಾಗಿ ನೀಡಿದೆ ಎಂದು ಸಂವಿಧಾನದ ಮಹತ್ವವನ್ನು ವಿವರಿಸುತ್ತಾ ವಿದ್ಯಾಥರ್ಿಗಳಿಗೆ ತಿಳಿಸಿದರು.

ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಎ.ವಿ.ಕಣವಿ, ಹಿರಿಯ ವಕೀಲರು, ಕಾರ್ಯಕ್ರಮದಲ್ಲಿ ಸಂವಿಧಾನದ ಪೂರ್ವಭಾವಿ ತತ್ವಗಳು ಹಾಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ವಿದ್ಯಾಥರ್ಿಗಳಿಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾನೂನು ಮಹಾವಿದ್ಯಾಲಯದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ.ಕೆ.ಬಿ.ಬ್ಯಾಳಿ ಸಂವಿಧಾನದ ಬಗ್ಗೆ ತಿಳುವಳಿಕೆ ಪ್ರತಿಯೊಬ್ಬರಿಗೂ ಅವಶ್ಯವಾಗಿ ಇರಬೇಕು ಮತ್ತು ಸಂವಿಧಾನವನ್ನು ಎಲ್ಲರೂ ಓದಬೇಕೆಂದು ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಕನರ್ಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಆಯೋಜಿಸಿದ 6ನೇ ಕನ್ನಡ ರಾಜ್ಯ ಮಟ್ಟದ ಅಣುಕು ನ್ಯಾಯಾಲಯದ ಸ್ಪಧರ್ೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದ ವಿದ್ಯಾಥರ್ಿಗಳಿಗೆ ಸನ್ಮಾನಿಸಲಾಯಿತು ಮತ್ತು ಈ ಸಂದರ್ಭದಲ್ಲಿ ಸನ್ಮಾನಿಸಲಾದ ವಿದ್ಯಾಥರ್ಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. 

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನ್ಯಾಯಾಧೀಶರಾದ ಸನ್ಮಾನ್ಯ ಟಿ.ಶ್ರೀನಿವಾಸ್, ಸದಸ್ಯ ಕಾರ್ಯದಶರ್ಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ, ಮಾನ್ಯ ಕುಮಾರ್. ಎಸ್. ಹಿರಿಯ ಸಿವಿಲ್ ನ್ಯಾಯಾಧೀಶರು, ಕೊಪ್ಪಳ, ಹರೀಶ್ ಪಾಟೀಲ್, ಪ್ರಧಾನ ಸಿವಿಲ್ ನ್ಯಾಯಾಧೀಶರು, ಕೊಪ್ಪಳ ಹಾಗೂ ಮನು ಶರ್ಮ, ಹೆಚ್ಚವರಿ ಸಿವಿಲ್ ನ್ಯಾಯಾಧೀಶರು, ಕೊಪ್ಪಳ, ಆಗಮಿಸಿದ್ದರು.

ಉಪನ್ಯಾಸಕರಾದ ಉಷಾದೇವಿ ಹಿರೇಮಠ, ಬಸವರಾಜ. ಎಸ್.ಎಮ್., ಕುಮಾರಿ ಸ್ಮಿತಾ ಅಂಗಡಿ, ಶೇಷಾದ್ರಿ ಕೆ, ವಿದ್ಯಾಥರ್ಿ ಪ್ರತಿನಿಧಿಗಳು ಹಾಗೂ ವಿದ್ಯಾಥರ್ಿಗಳು ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕು. ಶಿವಪ್ರಸಾದ, ಸ್ವಾಗತವನ್ನು ಪ್ರಾಚಾರ್ಯರಾದ ಡಾ. ಬಿ.ಎಸ್. ಹನಸಿ, ಮತ್ತು ಪ್ರಾರ್ಥನಾ ಗೀತೆಯನ್ನು ಕುಮಾರಿ. ಲಕ್ಷ್ಮಿ ಹಾಗೂ ಸಂಗಡಿಗರು ಹಾಗೂ ವಂದನಾರ್ಪಣೆಯನ್ನು ಕು. ದೇವೇಂದ್ರ, ನೆರವೇರಿಸಿಕೊಟ್ಟರು.