ಸನಾತನ ಸಂಪ್ರದಾಯದಂತೆ ಆರತಿ ಎತ್ತಿ ತಿಲಕವಿಟ್ಟು ಹಾರೈಕೆ
As per the Sanatan tradition, aarti is performed and tilak is applied, making a wish.
ಮಹಾಲಿಂಗಪುರ 12: ಸ್ಥಳೀಯ ಕೆಜಿ ಎಸ್ ಕ್ಲಸ್ಟರಿನ ವತಿಯಿಂದ ಜರುಗಿದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು 21 ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಯುಕ್ತ ಭಾರತೀಯ ಸನಾತನ ಸಂಪ್ರದಾಯದಂತೆ ಮಕ್ಕಳಿಗೆ ಆರತಿ ಎತ್ತಿ, ತಿಲಕವಿಟ್ಟು ವಿಶೇಷವಾಗಿ ಹಾರೈಸಲಾಯಿತು. ಸಾಯಿರಾಮ ಬಡಿಗೇರ ಚಿತ್ರಕಲೆಯಲ್ಲಿ, ಮನೋಜ ಬಡಿಗೇರ ಕ್ಲೇ ಮಾಡೆಲಿಂಗ್,ಪ್ರಣವ ಕಲಾಲ ಮಿಮಿಕ್ರಿ, ಸ್ಪಂದನ ಮಾಳಿ ಕನ್ನಡ ಭಾಷಣ, ಚುಕ್ಕಿ ಮೇಟಿ ರಂಗೋಲಿಯಲ್ಲಿ ಪ್ರಥಮ ಹಾಗೂ ಸುಹಾನ ಪಿರಜಾದೆ ಗಜಲ್, ಇಶ್ರತ್ ಫಾತಿಮಾ ಯಕ್ಸಂಬಿ ಚರ್ಚಾ ಸ್ಪರ್ಧೆ, ವಿನಾಯಕ ಕೊಂಕಣಕೊಪ್ಪ ಚಿತ್ರಕಲೆ,ಪ್ರತೀಕ್ಷಾ ಮ್ಯಾಗಡಿ ಆಶುಭಾಷಣ, ಮಹಾಲಕ್ಷ್ಮಿ ಗುಳದಳ್ಳಿ ಭಾವಗೀತೆ, ಭವಾನಿ ಜಾಧವ ಜನಪದ ಗೀತೆ, ಹರ್ಷಿತಾ ಮಠಪತಿ ಇಂಗ್ಲಿಷ್ ಭಾಷಣ, ಶ್ರದ್ಧಾ ಬಾರುಕೋಲ ಸಂಸ್ಕೃತ ಧಾರ್ಮಿಕ ಪಠಣ, ಅನ್ವಿತಾ ಮುದಕವಿ ಅಭಿನಯಗೀತೆ,ಸಾಯಿಸಂಕಲ್ಪ ಪರದೇಶಿ ಚಿತ್ರಕಲೆ, ಧರಣಿ ಶಿರೋಳ ಭಕ್ತಿ ಗೀತೆ, ಜಾಹ್ನವಿ ತಿಪ್ಪಾ ಇಂಗ್ಲಿಷ್ ಕಂಠಪಾಠ , ಯತೀಂದ್ರ ಸಿಪ್ರಿ ಆಶುಭಾಷಣದಲ್ಲಿ ದ್ವಿತೀಯ ಮತ್ತು ಸಾನ್ವಿ ಜಮಖಂಡಿ ಪ್ರಬಂಧ ರಚನೆ, ಜೈನಾಬ್ ಜಾಗೀರದಾರ ಹಿಂದಿ ಭಾಷಣ,ಶ್ರೀನಿಧಿ ಬಡಿಗೇರ ಪ್ರಬಂಧ ರಚನೆಯಲ್ಲಿ ತೃತೀಯ ಹೀಗೆ ಒಟ್ಟು 21 ಸ್ಪರ್ಧೆಗಳಲ್ಲಿ ವಿಜೇತರಾಗಿ ಸಾಧಕ ಮಕ್ಕಳಿಗೆ ಶಾಲೆಯ ಶಿಕ್ಷಕಿಯರು ಆರತಿ ಎತ್ತಿ ಹಾರೈಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 