ವಿವೇಕಾನಂದರ ಆಶಯದಂತೆ ಮಕ್ಕಳು ವಿವೇಕರಾಗಿ ಶಕ್ತಿವಂತರಾಶಗಲಿ ಢವಳೇಶ್ವರ ಗ್ರಾಮ ಸಂಸ್ಕೃತಿ ತೊಟ್ಟಿಲು

As per Vivekananda's wish, Dhavleshwar village is the cradle of culture so that children become wis

ವಿವೇಕಾನಂದರ ಆಶಯದಂತೆ ಮಕ್ಕಳು ವಿವೇಕರಾಗಿ ಶಕ್ತಿವಂತರಾಶಗಲಿ ಢವಳೇಶ್ವರ ಗ್ರಾಮ ಸಂಸ್ಕೃತಿ ತೊಟ್ಟಿಲು  

ಮಹಾಲಿಂಗಪುರ 27 : ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆಶಯದಂತೆ ವಿವೇಕವಂತರಾಗಿ ಶಕ್ತಿವಂತರಾಗಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.  

ಸಮೀಪದ ಢವಳೇಶ್ವರ ಗ್ರಾಮದ ಢವಳನಾಥ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿವೇಕಾನಂದ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ವಿವೇಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.  

ಉಪನ್ಯಾಸಕ ಶಿವಲಿಂಗ ಸಿದ್ನಾಳ ಮಾತನಾಡಿ ಢವಳೇಶ್ವರ ಗ್ರಾಮ ಸಂಸ್ಕೃತಿಯ ತೊಟ್ಟಿಲು, ಇಲ್ಲಿನ ಎಲ್ಲ ಕಾರ್ಯಕ್ರಮಗಳು ಸಂಸ್ಕೃತಿಯ ಮೆಟ್ಟಿಲು, ಊರಿನ ಯುವಕರು ಸಂಸ್ಕೃತಿಯ ಸಂರಕ್ಷಕರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಂಸ್ಕೃತಿಯ ರಾಯಭಾರಿಗಳಾಗಬೇಕು. ನಾವೇನೂ ಕಾವಿ ಧರಿಸಬೇಕಿಲ್ಲ, ಕೋವಿ ಹಿಡಿಯಬೇಕಿಲ್ಲ ಅವರ ಆದರ್ಶ ಅಳವಡಿಸಿಕೊಂಡು ಸ್ವಾಭಿಮಾನಿಗಳಾಗಿ, ಸನಾತನಿಗಳಾದರೆ ಸಾಕು ಎಂದರು.  

ವಿವೇಕಾನಂದ ಯುವಬ್ರಿಗೇಡ್ ರೂವಾರಿ ಮಹಾಲಿಂಗ ಪಟ್ಟಣಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಭಾರತೀಯ ಸನಾತನ ಧರ್ಮವನ್ನು ಜಗಕ್ಕೆ ಪರಿಚಯಿಸಿದ ವೀರಸನ್ಯಾಸಿಯನ್ನು ನೂರಾರು ವರ್ಷವಾದರೂ ಸ್ಮರಿಸುತ್ತೇವೆ. ಇಂದಿನ ಯುವ ಪೀಳಿಗೆ ಕೂಡ ಮುಂದಿನ ಜನಾಂಗ ನೆನಪಿಡುವಂಥ ಆಗಾಧ ಸಾಧನೆ ಮಾಡಬೇಕು ಎಂದರು.  

ಎಲ್ಲ ವಿದ್ಯಾರ್ಥಿಗಳಿಗೆ ವಿದ್ಯತ್‌ವಾಣಿ ಎಂಬ ಕೈಪಿಡಿ ಉಚಿತವಾಗಿ ನೀಡಲಾಯಿತು. ನೂರಾರು ಮಕ್ಕಳು ಸ್ವಾಮಿ ವಿವೇಕಾನಂದರ ಛದ್ಮವೇಷದಲ್ಲಿ ಗಮನ ಸೆಳೆದರು. ನಾನಾ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶತಮಾನ ಕಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 18 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಹಿರಿಯ ಶಿಕ್ಷಕ ಬಿ.ಎಲ್‌.ದೊಡಮನಿ ಅವರನ್ನು ಪುಷ್ಪವೃಷ್ಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.  

ವಿವೇಕಾನಂದ ಯುವ ಬ್ರಿಗೇಡ್ ರೂವಾರಿ ಮಹಾಲಿಂಗ ಪಟ್ಟಣಶೆಟ್ಟಿ, ಸಂಗಮೇಶ ನಾರಗೌಡ, ಅಶೋಕ ಹವಾಲ್ದಾರ, ಲಕ್ಷ್ಮಣ ಪಟ್ಟಣಶೆಟ್ಟಿ, ಗಂಗಾಧರ ಸಂಗನ್ನವರ, ಕಾಂತು ಪಟ್ಟಣಶೆಟ್ಟಿ, ಶ್ರೀಕಾಂತ ದೇಶಪಾಂಡೆ, ಆನಂದ ಪಟ್ಟಣಶೆಟ್ಟಿ, ರಮೇಶ ಪಾಟೀಲ, ಮಲ್ಲಯ್ಯ ಮಠದ, ಪೂರ್ಣೇಶ ಮಠಪತಿ, ಮಹೇಶ ಪಾಟೀಲ, ಮಾಂತು ನಾವ್ಹಿ, ಮಹಾಲಿಂಗ ವಡರಟ್ಟಿ, ಕಲ್ಮೇಶ ನೇಗಿನಹಾಳ, ಚೆನ್ನಪ್ಪ ಶಿವಾಪೂರ, ಅನಿಲ ಚೌರಡ್ಡಿ, ಜಯಶ್ರೀ ಅರಕೇರಿ, ಭಾಗ್ಯಶ್ರೀ ನೇಗಿನಹಾಳ, ಸಿ.ವ್ಹಿ.ದಾದನಟ್ಟಿ, ಚಿಂಚಖಂಡಿ, ಮನ್ನಿಕೇರಿ, ಮಹಾಜನ ಸೇರಿದಂತೆ ಹಲವರು ಇದ್ದರು.