ಗ್ರಾಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಟಗರಿನ ಕಾಳಗ ಆಯೋಜನೆ

As part of the Gramadevi Jatra Mahotsav, a ram fight was organized

ಗ್ರಾಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಟಗರಿನ ಕಾಳಗ ಆಯೋಜನೆ

ಹಾನಗಲ್ 05 :ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶಾಸಕ ಶ್ರೀನಿವಾಸ ಮಾನೆ ಗೆಳೆಯರ ಬಳಗದ ಆಶ್ರಯದಲ್ಲಿ ಬೆಳ್ಳೋಡಿ ಕಾಳಿ ಟಗರಿನ ನೆನಪಿನಲ್ಲಿ ಆಯೋಜಿಸಲಾಗಿದ್ದ ಟಗರಿನ ಕಾಳಗ ನೆರೆದ ಸಾವಿರಾರು ಸಂಖ್ಯೆ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು. ನೂರಾರು ಜನ ಸುತ್ತಲೂ ಜಮಾಯಿಸಿ ಟಗರಿನ ಕಾಳಗದ ಸೊಬಗು ಕಣ್ತುಂಬಿಕೊಂಡರು. ಕೊಬ್ಬಿದ ಎರಡು ಟಗರುಗಳು ನಾಲ್ಕೈದು ಹೆಜ್ಜೆ ಹಿಂದೆ ಸರಿದು ವಾಪಸ್ ಎದುರು ದೌಡಾಯಿಸಿ ಜೋರಾಗಿ ತಲೆಯಿಂದ ಡಿಚ್ಚಿ ಹೊಡೆಯುವ ದೃಶ್ಯ ಬಲು ರೋಚಕವಾಗಿತ್ತು. ನೋಡುಗರು ಕೇಕೆ, ಶಿಳ್ಳೆ ಹೊಡೆದು ಹುರಿದುಂಬಿಸಿದರು. ಸುಮಾರು 50 ಕ್ಕೂ ಹೆಚ್ಚು ಟಗರುಗಳು ಸ್ಪರ್ಧೆಯದಲ್ಲಿ ನೋಡುಗರಿಗೆ ರಸದೌತಣ ಉಣ ಬಡಿಸಿದವು. ಹಾಲು ಹಲ್ಲು, 2 ಹಲ್ಲು, 4 ಹಲ್ಲು, 6 ಹಲ್ಲು ಹಾಗೂ 8 ಹಲ್ಲು ಹೀಗೆ ಟಗರುಗಳನ್ನು ವಿಂಗಡಿಸಿ ಸ್ಪರ್ಧೆಗೆ ಬಿಡಲಾಗುತ್ತಿತ್ತು. ಟಗರುಗಳ ಪರಸ್ಪರ ಸೆಣಸಾಟ ರೋಮಾಂಚನ ಸೃಷ್ಟಿಸಿತು. ಇದಕ್ಕೂ ಮೊದಲು ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮಂಜಣ್ಣ ನೀಲಗುಂದ ಕಾಳಗ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಕೆಎಂಎಫ್ ನಿರ್ದೇಶಕ ಚಂದ್ರ​‍್ಪ ಜಾಲಗಾರ, ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ಅಕ್ಕಿಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಮುಖಂಡರಾದ ಆದರ್ಶ ಶೆಟ್ಟಿ, ಮಹೇಶ ಪವಾಡಿ, ರಾಜಕುಮಾರ ಶಿರಪಂತಿ, ಈರಣ್ಣ ಬೈಲವಾಳ, ಸಾಹಿತಿ ಮಾರುತಿ ಶಿಡ್ಲಾಪೂರ, ಉಮೇಶ ದೊಡ್ಡಮನಿ, ಶಿವು ಭದ್ರಾವತಿ, ಮಾಲತೇಶ ಕಾಳೇರ, ಶಿವು ತಳವಾರ, ಲಿಂಗರಾಜ ಮಡಿವಾಳರ, ಷಣ್ಮುಖ ಕುಂದೂರ, ಸಂಜು ಬ್ಯಾಡಗಿ, ಶಿವು ಆಲದಕಟ್ಟಿ, ಸುರೇಶ ನಿಂಗೋಜಿ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.