ಹುಬ್ಬಳ್ಳಿ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ
ಅರವಿಂದ ಮಾಲಖೇಡೆ ಅಧಿಕಾರ ಸ್ವೀಕಾರ
ಹುಬ್ಬಳ್ಳಿ 25: ಹುಬ್ಬಳ್ಳಿ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಅರವಿಂದ ಮಾಲಖೇಡೆಯವರು ನ. 25ರಂದು ಅಧಿಕಾರ ಸ್ವೀಕರಿಸಿದರು.
ಅರವಿಂದ ಮಾಲಖೇಡೆಯವರು ಭಾರತೀಯ ರೈಲ್ವೆ ಟ್ರಾಫಿಕ್ ಸೇವೆ 1991ನೇ ವರ್ಷದ ಬ್ಯಾಚ್ಗೆ ಸೇರಿದವರು. ಅವರು ರೈಲ್ವೆ ಪರಿಚಾಲನೆ, ರೈಲ್ವೆ ವಾಣಿಜ್ಯ ವಿಭಾಗ ಮತ್ತು ಆಡಳಿತಾತ್ಮಕ ಹುದ್ದೆಗಳಲ್ಲಿ ಅಪಾರವಾದ ಅನುಭವವನ್ನು ಹೊಂದಿದ್ದಾರೆ. ಅವರು ಭಾರತೀಯ ಕಂಟೇನರ್ ಕಾಪರ್ೊರೇಷನ್ ಮತ್ತು ಐ.ಆರ್.ಸಿ.ಟಿ.ಸಿ.ಯಲ್ಲಿಯೂ ಸಹಾ ಕಾರ್ಯನಿರ್ವಹಿಸಿದ್ದಾರೆ.
ಹುಬ್ಬಳ್ಳಿ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುವುದಕ್ಕೆ ಮೊದಲು ಅವರು ಪಶ್ಚಿಮ ರೈಲ್ವೆಯಲ್ಲಿ ಮುಖ್ಯ ವಾಣಿಜ್ಯ ವ್ಯವಸ್ಥಾಪಕ(ಪ್ರಯಾಣಿಕ ಮಾರುಕಟ್ಟೆ)ರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಗುವಾಹಟಿಯ ಈಶಾನ್ಯ ಗಡಿ ರೈಲ್ವೆಯಲ್ಲಿ ಮುಖ್ಯ ಸರಕು ಸಾಗಣೆ ವ್ಯವಸ್ಥಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮಧ್ಯ ರೈಲ್ವೆಯಲ್ಲಿ ಉಪಮುಖ್ಯ ಪರಿಚಾಲನಾ ವ್ಯವಸ್ಥಾಪಕ(ಸರಕು)ರಾಗಿ ಕಾರ್ಯ ನಿರ್ವಹಿಸಿದ ಅವರು ಮುಂಬಯಿ ವಿಭಾಗದಲ್ಲಿ ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹುದ್ದೆಯೂ ಸೇರಿದಂತೆ ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದಾರೆ. ಅವರು ಮಧ್ಯ ರೈಲ್ವೆಯ ಮುಂಬಯಿ ವಿಭಾಗದಲ್ಲಿ ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಅತ್ಯುತ್ತಮ ಸೇವೆಗಾಗಿ ರಾಷ್ಟ್ರೀಯ ಪುರಸ್ಕಾರ (ರೈಲ್ವೆ ಸಚಿವರ ಪುರಸ್ಕಾರ)ವನ್ನು ಪಡೆದಿದ್ದಾರೆ. 2015ರಿಂದ 2019ರವರೆಗೆ ಐ.ಆರ್.ಸಿ.ಟಿ.ಸಿ.ಯ ಪಶ್ಚಿಮ ವಲಯದ ಜಿ.ಜಿ.ಎಮ್. ಆಗಿ ಪಶ್ಚಿಮ, ಮಧ್ಯ, ಪಶ್ಚಿಮ ಮಧ್ಯ ಹಾಗೂ ಕೊಂಕಣ ರೈಲ್ವೆ ವ್ಯಾಪ್ತಿಯಲ್ಲಿ ಐ.ಆರ್.ಸಿ.ಟಿ.ಸಿ.ಯ ಕಾರ್ಯಚಟುವಟಿಕೆಯ ನೇತೃತ್ವವನ್ನು ವಹಿಸಿದ್ದಾರೆ.
ಮಾಲಖೇಡೆಯವರು ಪ್ರತಿಷ್ಠಿತ ಚೆವೆನಿಂಗ್ ಗುರುಕುಲ ಸ್ಕಾಲರ್ಶಿಪ್ಅನ್ನು ಪಡೆದುಕೊಂಡವರಾಗಿದ್ದು 2009ನೇ ಇಸವಿಯಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸನಲ್ಲಿ ನಾಯಕತ್ವ ವಿಕಾಸ ಕಾರ್ಯಕ್ರಮದ ತರಬೇತಿಯನ್ನು ಪಡೆದುಕೊಂಡಿದ್ದಾರೆ.