ರೈತರಿಗೆ ಅಪಾರ ಹಾನಿ, ಪರಿಹಾರ ನೀಡಲು ಅರವಿಂದ ಕುಲಕರ್ಣಿ ಆಗ್ರಹ
ವಿಜಯಪುರ 25: ಕೃಷಿ ಇಲಾಖೆಯ ಮೂಲಕ ವಿತರಿಸಿದ ಜಿ.ಆರ್.ಜಿ 152 ಹಾಗೂ ಜಿ.ಆರ್.ಜಿ 811 ಕಳಪೆ ತೊಗರಿ ಬೀಜ ವಿತರಣೆ ಮಾಡಿದ್ದರಿಂದ ಬಿತ್ತಿದ ತೊಗರಿ ಬೆಳೆ ನೋಡಲು ಬಲು ಅಬ್ಬರವಾಗಿದೆ. ಆದರೆ ಗಿಡಗಳಲ್ಲಿ ಒಂದು ತೊಗರಿ ಕಾಯಿ ಇಲ್ಲ ಇದರಿಂದ ರೈತರು ಆತಂಕಕ್ಕಿಡಾಗಿದ್ದಾರೆ. ಹಾನಿಗೊಳಗಾದ ತೊಗರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಹಾಗೂ ಕಳಪೆ ತೊಗರಿ ಬೀಜ ವಿತರಿಸಿದ ಕಂಪನಿಗಳ ವಿರುದ್ಧ ಕ್ರಮ ಜರುಗಿಸಬೇಕು. ಪರೀಶೀಲನೆ ಮಾಡದೆ ಕೃಷಿ ಇಲಾಖೆಯಿಂದ ಬೀಜ ವಿತರಿಸಿರುವುದು ಇದು ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಆದ್ದರಿಂದ ಕಳಪೆ ಬೀಜ ವಿತರಿಸಿದ ಕಂಪನಿ ಮೇಲೆ ಹಾಗೂ ರೈತರಿಗೆ ಸುಳ್ಳು ಹೇಳಿ ಕಳಪೆ ಬೀಜ ಕೊಟ್ಟ ಕೃಷಿ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಒತ್ತಾಯಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿಜಯಪುರ ಜಿಲ್ಲೆಯಾದ್ಯಂತ ತೊಗರಿ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಇಡೀ ಜಿಲ್ಲೆಯಲ್ಲಿ ಜಿ.ಆರ್.ಜಿ 152 ಹಾಗೂ ಜಿ.ಆರ್. ಜಿ 811 ತೊಗರಿ ಬೀಜ ಬಿತ್ತನೆ ಮಾಡಲಾಗಿದೆ. ಕೃಷಿ ಇಲಾಖೆಯವರು ಬೀಜ ತೆಗೆದುಕೊಳ್ಳುವ ಸಂದರ್ಭದಲ್ಲಿ ತೊಗರಿ ಗುಣಮಟ್ಟ ಯಾವ ತಳಿ ಬೀಜ ರೈತರು ಬಿತ್ತನೆ ಮಾಡಬೇಕಾದರೆ ಇದಕ್ಕೆ ಅನುಸರಿಸಬೇಕಾದ ಕ್ರಮಗಳೆನು ಎಂಬುದರ ಬಗ್ಗೆ ಮೊದಲು ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡು ನಂತರ ರೈತರು ತೊಗರಿ ಬೀಜ ಖರೀದಿ ಮಾಡುವ ಸಂದರ್ಭದಲ್ಲಿ ರೈತರಿಗೆ ತಿಳಿ ಹೇಳಿ ಬಿತ್ತನೆಯ ಸಂದರ್ಭದಲ್ಲಿ ಯಾವ ಕ್ರಮ ಅನುಸರಿಸಬೇಕು ಜಿ.ಆರ್.ಜಿ 152 ಹಾಗೂ ಜಿ.ಆರ್.ಜಿ 811 ತೊಗರಿ ಬೀಜ ಬಿತ್ತನೆ ಮಾಡಬೇಕಾದರೆ ಎಷ್ಟೆಷ್ಟು ಅಂತರದಲ್ಲಿ ಬಿತ್ತನೆ ಮಾಡಬೇಕೆಂಬುದು ಮೊದಲೇ ಬೀಜದ ಕಂಪನಿಯವರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಕೊಡಬೇಕು. ಬಿತ್ತನೆ ಮಾಡಿದ ನಂತರ ಎಷ್ಟು ಪ್ರಮಾಣ ನೀರು ಹಾಯಿಸಬೇಕು ಮತ್ತು ಯಾವ ಅವಧಿಯವರೆಗೆ ತೊಗರಿ ಬೆಳೆಗೆ ನೀರು ಉಣಿಸಬೇಕೆಂಬುದು ಮೊದಲೇ ರೈತರಿಗೆ ಮಾಹಿತಿ ನೀಡಬೇಕು. ಯಾವುದನ್ನು ರೈತರಿಗೆ ಮಾಹಿತಿ ನೀಡಿಲ್ಲ.
ಕಂಪನಿಯವರು ನೀಡಿದ ಬೀಜದ ಬಗ್ಗೆ ಯಾವುದೇ ತೊಂದರೆ ಇರುವುದಿಲ್ಲ ಹಾಗೂ ಇದು ಒಣಬೇಸಾಯದಲ್ಲಿ ಹೆಚ್ಚಿನ ಇಳುವರಿ ಬರುತ್ತದೆ ಎಂದು ನಂಬಿಸಿದ್ದಾರೆ. ಮತ್ತು ನೆಟೆ ರೋಗ ಬರುವುದಿಲ್ಲವೆಂದು ರೈತರಿಗೆ ನಂಬಿಸಿ ಬೀಜ ವಿತರಣೆ ಮಾಡಿದ್ದಾರೆ. ಬೀಜ ವಿತರಣೆ ಮಾಡಿ ತೊಗರಿ ಬೆಳೆ ಹಾಳಾದ ನಂತರ ನೀವೆ ತಪ್ಪು ಮಾಡಿದ್ದಿರಿ ಸರಿಯಾಗಿ ಬಿತ್ತನೆ ಮಾಡಿದ ಸಾಲುಗಳಲ್ಲಿ ಅಂತರವಿಲ್ಲ ನೀವು ಸರಿಯಾಗಿ ನೀರು ಒದಗಿಸಿಲ್ಲ ಎಂಬಿತ್ಯಾದಿ ತಪ್ಪುಗಳನ್ನು ರೈತರ ಮೇಲೆ ಹಾಕಿ ರೈತರ ಮೇಲೆ ಆಪಾದನೆ ಕೊಡಲಾಗುತ್ತಿದೆ. ಇದನ್ನೆ ಬೀಜ ಖರೀದಿ ಮಾಡುವ ವೇಳೆ ರೈತರಿಗೆ ಸರಿಯಾಗಿ ಮಾಹಿತಿ ಕೊಡುವದಿಲ್ಲ ಏಕೆ?. ಬೀಜ ಮಾರುವ ಮೊದಲು ತಪ್ಪು ಮಾಹಿತಿ ನೀಡಿ ಎಲ್ಲ ಹಾಳಾದ ನಂತರ ಹೀಗೆ ಮಾಡಬೇಕಿತ್ತು, ಹಾಗೇ ಮಾಡಬೇಕಿತ್ತು ಇದು ರೈತರ ತಪ್ಪು ಎಂದು ಹೇಳಿ ರೈತರ ಮೇಲೆ ಆಪಾದನೆ ಕೊಡಲಾಗುತ್ತಿದೆ. ಕಳಪೆ ತೊಗರಿ ಬೀಜ ವಿಷಯ ಮರೆ ಮಾಚಲು ಮುಂದಾಗಿದ್ದಾರೆ. ಒಟ್ಟಾರೆ ತೊಗರಿ ಬೀಜವೇ ಮೊದಲು ಕಳಪೆ ಮಟ್ಟದ್ದಾಗಿದೆ. ಎತ್ತರದಲ್ಲಿ ತೊಗರಿ ಬೀಜ ಬೆಳೆದರು ಒಂದು ತೊಗರಿ ಕಾಯಿ ಆಗಿಲ್ಲ ಎಂದು ರೈತರ ಅಳಲಾಗಿದೆ. ಇದಕ್ಕೆ ಮೂಲ ಕಾರಣ ಕಳಪೆ ಜಿ.ಆರ್.ಜಿ 152 ಹಾಗೂ ಜಿ.ಆರ್.ಜಿ 811 ತೊಗರಿ ಕಳಪೆ ಬೀಜವನ್ನು ಕೃಷಿ ಇಲಾಖೆಯವರಿಗೆ ಪೂರೈಸಿ ರೈತರನ್ನು ಹಾಳು ಮಾಡಿದ್ದಾರೆ.
ರಾಜ್ಯ ಬೀಜ ನಿಗಮದವರು ತೊಗರಿ ಬೀಜದ ಗುಣಮಟ್ಟ ಮಾಡದೇ ಬೀಜ ವಿತರಿಸುವ ಕಂಪನಿಗೆ ಸರ್ಟಿಪೈ ಮಾಡಿದ್ದಾದರು ಹೇಗೆ. ಸರ್ಟಿಪೈ ಮಾಡಬೇಕಾದರೆ ಯಾವ ಆದಾರದ ಮೇಲೆ ಸರ್ಟಿಪೈ ಮಾಡಿದ್ದಾರೆಂಬುದು ಇದರ ಗುಣಮಟ್ಟವನ್ನು ಲ್ಯಾಬದಲ್ಲಿ ಪರೀಕ್ಷೀಸಬೇಕು. ಇದು ಬೀಜ ನಿಗಮದವರು ಹಾಗೂ ಕೃಷಿ ಇಲಾಖೆಯವರ ಕೈವಾಡ ಇದೆ ಎಂಬುದು ಸ್ಪಷ್ಟ ಪಡಿಸುತ್ತದೆ. ಮೊದಲೇ ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಇಂತಂಹದರಲ್ಲಿ ಬೀಜ ವಿತರಿಸಿದ ಕಂಪನಿಯವರು ಒಂದು ರೀತಿ ರೈತರಿಗೆ ಮೋಸ ವೆಸಗುತ್ತಿದ್ದಾರೆ. ಇದರಿಂದ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಹಾನಿಗೊಳಗಾದ ತೊಗರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕಳಪೆ ಬೀಜ ವಿತರಿಸಿದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಕಂಪನಿಯ ಪರವಾನಿಗೆ ರದ್ದು ಪಡಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದ್ದಾರೆ.