ಅರುಣ್ ನಾಯ್ಕೋಡಿ, ರಮೇಶ ಗಂಗನಳ್ಳಿ ಅವಿರೋಧ ಆಯ್ಕೆ
ಇಂಡಿ 08: ಮುದ್ದೇಬಿಹಾಳ ತಾಲೂಕಿನ ಡವಳಗಿ ಹೈಸ್ಕೂಲಿನಲ್ಲಿ ನಡೆದ ಚುನಾವಣೆಯಲ್ಲಿ ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲಾ ಮುಖ್ಯ ಗುರುಗಳ ಮಹಾಮಂಡಳ ವಿಜಯಪುರ ಇದರ ಅಡಿಯಲ್ಲಿ ನಡೆದ ಚುನಾವಣೆಯಲ್ಲಿ ಸಿಂದಗಿ ತಾಲೂಕು ಮಹಾಮಂಡಳದ ಅಧ್ಯಕ್ಷರಾಗಿ ಯರಗಲ್ ಪ್ರೌಢಶಾಲೆಯ ಮುಖ್ಯ ಗುರುಗಳಾದ ಅರುಣ್ ನಾಯ್ಕೋಡಿ ಹಾಗೂ ಆಲಮೇಲ ತಾಲೂಕಿನಿಂದ ಕಡಣಿ ಪ್ರೌಢಶಾಲೆಯ ರಮೇಶ್ ಗಂಗನಳ್ಳಿ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.
ಸಿಂದಗಿ ತಾಲೂಕಿನ ಕಕ್ಕಳಮೇಲಿ ಸಿದ್ಧರಾಮೇಶ್ವರ ಪ್ರೌಢಶಾಲೆಯ ಮುಖ್ಯ ಗುರು ಬಿ ಬಿ ಪಾಟೀಲ್ ಹಾಗೂ ವಿವಿಧ ಶಾಲೆಯ ಮುಖ್ಯಗುರು ರಾಜಕುಮಾರ ಬಿರಾದಾರ, ಸುಭಾಸ್ ನಾಯಕ, ಕುಲಕರ್ಣಿ ಸರ್, ಮುತ್ತುರಾಜ್ ಮಂದೆವಾಲಿ, ಜಗದೀಶ್ ಪಾಟೀಲ, ಪ್ರವೀಣ್ ಬಿರಾದಾರ, ಜಿ ಜಿ ಬಿರಾದಾರ, ಕನ್ನೊಳ್ಳಿ ಬಿರಾದಾರ ಸರ್ ಹಾಗೂ ಎಂ ಕೆ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇವರ ಆಯ್ಕೆಯನ್ನು ಸಿಂದಗಿ ಹಾಗೂ ಆಲಮೇಲ ತಾಲೂಕಿನ ಎಲ್ಲ ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸರ್ವಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.