ಕವಿವ ಸಂಘದಿಂದ ಕಲೆ, ಕಲಾವಿದ, ಸಾಹಿತಿ, ಬರಹಗಾರರಿಗೆ ಅಪಾರ ಪ್ರೋತ್ಸಾಹ: ಕುಲಕಣರ್ಿ

ಧಾರವಾಡ 29:  ಕನರ್ಾಟಕ ವಿದ್ಯಾವರ್ಧಕ ಸಂಘವು ಎಂದಿನಿಂದಲೂ ಅವ್ಯಾಹತವಾಗಿ ರಚನಾತ್ಮಕ, ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಕಲೆ, ಕಲಾವಿದರಿಗೆ, ಸಾಹಿತಿಗಳಿಗೆ, ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿರುವ ನಾಡಿನ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಈ ದಿಶೆಯಲ್ಲಿ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ ನೇತೃತ್ವದಲ್ಲಿ 63 ನೇ ಕನರ್ಾಟಕ ರಾಜ್ಯೋತ್ಸವದ ನಿಮಿತ್ತ 15 ದಿನಗಳ ಕಾಲ ವೈವಿಧ್ಯಮಯ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದು ಸಂತೋಷವಾಗಿದೆ ಎಂದು ನ್ಯಾಯವಾದಿ ಹಾಗೂ ರಂಗಕಮರ್ಿ ರವಿ ಕುಲಕಣರ್ಿ ಹೇಳಿದರು.

ಕನರ್ಾಟಕ ವಿದ್ಯಾವರ್ಧಕ ಸಂಘವು 63 ನೇ ಕನರ್ಾಟಕ ರಾಜ್ಯೋತ್ಸವದ ಅಂಗವಾಗಿ 15 ದಿನಗಳ ಕಾಲ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ 12 ನೇ ದಿನ `ದಕ್ಷ ಯಜ್ಞ' ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

  ಸಂಘದ ಹಿರಿಯ ಸದಸ್ಯರಾದ ಬಾನಂದೂರ ಕೆಂಪಯ್ಯ, ಡಾ. ಉಮೇಶ ನಲವಡಿ, ಪ್ರೊ. ಆರ್. ಜಿ. ಅಕ್ಕಿಹಾಳ, ಶಂಕರ ನಾಶಿ, ಡಿ. ಜೆ. ಕೃಷ್ಣನ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಬೆಳಗಾವಿಯ ರಂಗಕಮರ್ಿ ಶಿರೀಶ ಜೋಶಿ ಇವರಿಗೆ ರಂಗಕಲಾ ಸನ್ಮಾನ ಮಾಡಲಾಯಿತು.  

ಸನ್ಮಾನಿತರ ಪರವಾಗಿ ಮಾತನಾಡಿದ ಡಾ. ಬಾನಂದೂರು ಕೆಂಪಯ್ಯ, 1970 ರ ದಶಕದಲ್ಲಿ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರನ್ನು ನನಗೆ ಗಣ್ಯರೊಬ್ಬರು ಪರಿಚಯಿಸಿದರು. ಪಾಪುರವರು ನಾಡಿಗೆ, ದೇಶಕ್ಕೆ ನಮ್ಮಂತಹ ಕಲಾವಿದರಿಗೆ, ಲೇಖಕರಿಗೆ ಮಾರ್ಗದರ್ಶಕರಾಗಿದ್ದಾರೆ. ಅವರ ಮಾರ್ಗದರ್ಶನ ನಮಗೆ ಇನ್ನೂ ಹಲವಾರು ವರ್ಷ ಒದಗಲಿ ಎಂದ ಅವರು ಈ ಸಂಸ್ಥೆ ನಾಡಿನ ಪ್ರಾತಿನಿಧಿಕ ಸಂಸ್ಥೆಯಾಗಿದ್ದು ಡಾ. ಪಾಪುರವರು ಈ ಸಂಸ್ಥೆಗೆ ಭದ್ರ ಬುನಾದಿ ಹಾಕಿದವರು. ಇಲ್ಲಿ ನಾನು ಹಲವಾರು ಬಾರಿ ಹಾಡಿದ್ದೇನೆ. ಪಾಪುರವರ ಮುಂದೆ ಹಾಡಿದ್ದೇನೆ. ಆಗೆಲ್ಲ ನನ್ನ ಬೆನ್ನು ಚಪ್ಪರಿಸಿ ಚೆನ್ನಾಗಿ ಹಾಡುತ್ತಿಯೆಂದು ನನ್ನನ್ನು ಪ್ರೋತ್ಸಾಹಿಸಿ ಸಲಹೆ ಸೂಚನೆ ನೀಡಿದ್ದುಂಟು. ವಚನಗಳಿಗೆ ಹಾಡಿನ ರೂಪಕೊಟ್ಟು ಹಾಡಿರಿ ಎಂದು ಹಾಡಲು ಹಚ್ಚಿ, ವಚನಗಳಿಗೆ ಒಂದು ಧ್ವನಿ ಕೊಟ್ಟವರು ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಎಂದ ಅವರು, ಸಂಘದ ಈ ಸನ್ಮಾನ ನನಗೆ ಅತ್ಯಂತ ಸಂತೋಷ ನೀಡಿದೆ ಎಂದರು.

ಪ್ರೊ. ಆರ್. ಜಿ. ಅಕ್ಕಿಹಾಳ ಮಾತನಾಡಿ, 129 ವರ್ಷಗಳಿಂದ ಕನ್ನಡ ಭುವನೇಶ್ವರಿಯ ಸತತ ಸೇವೆಗೈದು,  ಕನ್ನಡ ದೀಪ ಹಚ್ಚುತ್ತ, ಕನ್ನಡ ಡಿಂಡಿಮವ ಬಾರಿಸುತ್ತ ಬಂದ ಈ ಸಂಘವು ನಮ್ಮನ್ನು ಸನ್ಮಾನಿಸಿ ಗೌರವಿಸಿದ್ದು ನಮ್ಮ ಸೌಭಾಗ್ಯ. ಎಂದ ಅವರು ನಾವು ಕನರ್ಾಟಕದಿಂದ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡು ವೃತ್ತಿಗಾಗಿ ಹೊರದೇಶಗಳಿಗೆ, ಹೊರರಾಜ್ಯಗಳಿಗೆ ಹೋದರೂ ಎಂದೂ ನಾವು ಕನ್ನಡತನವನ್ನು  ಬಿಟ್ಟಿಲ್ಲ ಎಂದು ಹೇಳಿ ಸಂಘದ ಸನ್ಮಾನ ತುಂಬಾ ಸಂತಸ ತಂದಿದೆ ಎಂದರು. 

ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಮಾತನಾಡಿ, ಸಂಘ ಬೆಳೆಸುವಲ್ಲಿ ನಲವಡಿ ಮನೆತನದವರ ಸೇವೆ ಚಿರಸ್ಮರಣೀಯವಾಗಿದೆ. ನಲವಡಿ ಕುಟುಂಬದ ಡಾ. ಉಮೇಶ ನಲವಡಿ ಇಂದು ಸನ್ಮಾನಗೊಳ್ಳುತ್ತಿರುವುದು ನನಗೆ ಸಂತೊಷವನ್ನುಂಟು ಮಾಡಿದೆ ಎಂದರು.

ವೇದಿಕೆ ಮೇಲೆ ಉಪಾಧ್ಯಕ್ಷ ನಿಂಗಣ್ಣ ಕುಂಟಿ, ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ, ಗೌರವ ಉಪಾಧ್ಯಕ್ಷ ಡಾ. ಇಸಬೆಲ್ಲಾ ಝೇವಿಯರ್, ಬಿ. ಎಲ್. ಪಾಟೀಲ,  ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ ತುರಮರಿ, ವಿಶ್ವೇಶ್ವರಿ ಹಿರೇಮಠ, ಎಸ್.ಬಿ. ಗಾಮನಗಟ್ಟಿ ಉಪಸ್ಥಿತರಿದ್ದರು.  

ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಶಂಕರ ಕುಂಬಿ ನಿರ್ವಹಿಸಿದರು. ಸಹ ಕಾರ್ಯದಶರ್ಿ ಸದಾನಂದ ಶಿವಳ್ಳಿ ವಂದಿಸಿದರು. ಕೋಶಾಧ್ಯಕ್ಷ ಕೃಷ್ಣ ಜೋಶಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ಶಿವಾನಂದ ಭಾವಿಕಟ್ಟಿ ಸನ್ಮಾನಿತರನ್ನು ಪರಿಚಯಿಸಿದರು.  

ನಂತರ ಸಿದ್ಧರಾಮ ಹಿಪ್ಪರಗಿ ನಿರ್ವಹಣೆಯ, ವಿರೇಶ ಪುಠಾಣಿ ರಂಗಪಠ್ಯ ಮತ್ತು ನಿದರ್ೇಶನದ `ದಕ್ಷ ಯಜ್ಞ' ಪೌರಾಣಿಕ ನಾಟಕವನ್ನು `ಗಣಕರಂಗ' ಧಾರವಾಡ ತಂಡದವರು ಸೊಗಸಾಗಿ ಪ್ರಸ್ತುತಪಡಿಸಿ ನೆರೆದ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.  

ಬಸವಲಿಂಗಯ್ಯ ಹಿರೇಮಠ, ಡಾ. ಎಸ್. ಟಿ. ನಂದಿಬೇವೂರ ದಂಪತಿಗಳು, ವಾಯ್. ಸಿ. ಬಿಜಾಪುರ, ಮಹೇಶ ಕುಲಕಣರ್ಿ, ಶಿವಯೋಗಿ ಹಂಚಿನಾಳ, ಲಕ್ಷ್ಮಣ ಬಕ್ಕಾಯಿ, ಸೋಮಶೇಖರ ಜಾಡರ, ಭರತ ಜಾಧವ, ಪ್ರೊ. ವೀಣಾ ಸಂಕನಗೌಡರ, ಸುಜಾತಾ ಹಡಗಲಿ, ಮಧುಮತಿ ಸಣಕಲ್ಲ, ಬಿ. ಕೆ. ಹೊಂಗಲ, ಎಂ. ಬಿ. ಹೆಗ್ಗೇರಿ,  ಪ್ರಕಾಶ ಮಲ್ಲಿಗವಾಡ, ರಾಘವೇಂದ್ರ ಕುಂದಗೋಳ, ಪ್ರಕಾಶ ಮುಳಗುಂದ, ಬಸಪ್ಪ ಪಟ್ಟಣಶೆಟ್ಟಿ, ಎಲ್. ಕೆ. ಪುರದ ಚನಬಸಪ್ಪ ಅವರಾದಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.