ಮುಂಡಗೋಡ ಉದ್ಯಮಿ ಅಪಹರಿಸಿದ್ದ ಐವರ ಬಂಧನ :ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು
ಕಾರವಾರ 11: ಮುಂಡಗೋಡ ಉದ್ಯಮಿಯನ್ನು ಅಪಹರಿಸಿ, ಹಣ ದೋಚಿದ್ದ ಎಲ್ಲಾ ಐದು ಜನ ಆರೋಪಿಗಳು ಬಂಧಿಸಲಾಗಿದೆ ಎಂದು ಎಸ್ಪಿ ನಾರಾಯಣ ತಿಳಿಸಿದ್ದಾರೆ.ಧಾರವಾಡ ಮೂಲದ ರಹಿಮ್ ಜಾಫರ ಸಾಬ್ ಅಲ್ಲಾವುದ್ದೀನ್ ಹಾಗೂ ಧಾರವಾಡದ ಅಜಯ ಕೊಡ್ಲಿ ಬಿಜಾಪುರ,ಸಾಗರ ನಾಗರಾಜ ಕಲಾಲ್, ದಾದಾಪೀರ್ ಅಲ್ಲಾಭಕ್ಷ, ಹಸನ್ ಮೈನುದ್ದೀನ್ ಕಿಲ್ಲೆದಾರ ಎಂಬುವವರನ್ನು ಅಪಹರಣ , ಹಲ್ಲೆ, ಹಷ ವಸೂಲಿ ಆರೋಪದಲ್ಲಿ ಬಂಧಸಲಾಗಿದೆ ಎಂದಿದ್ದಾರೆ. ಪ್ರಕರಣ ಸೆಕ್ಷನ್ 140(3), 351(2) ಅಡಿ ದಾಖಲಾಗಿದೆ ಎಂದಿದ್ದಾರೆ.
ನಂತರ ಘಟನೆ ವಿವರಿಸಿದ ಅವರುಯಲ್ಲಾಪುರದ ಡೋಗಿನಾಳ ಬಳಿತಪ್ಪಿಸಿಕೊಳ್ಳಲು ಯತ್ನಿಸಿದಾಗ ,ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ, ಬಂಧಿಸಲಾಗಿದೆ.ಜನವರಿ 9ರ ರಾತ್ರಿ ಮುಂಡಗೋಡಿನ ಜಮೀರ್ ಅಹಮ್ಮದ್ ದರ್ಗಾವಾಲೆ ಎಂಬ ಉದ್ಯಮಿಯನ್ನು ಅಪಹರಣ ಮಾಡಿ 35 ಲಕ್ಷ ಬೇಡಿಕೆ ಇಟ್ಟಿದ್ದರು. ಉದ್ಯಮಿಯಿಂದ ಅಪಹರಣಕಾರರು 18 ಲಕ್ಷ ಹಣ ಪಡೆದು ಹಾವೇರಿ ಜಿಲ್ಲೆಯ ಗದಗ ರಿಂಗ್ ರೋಡ್ ನಲ್ಲಿ ಬಿಟ್ಟು ಪರಾರಿಯಾಗಿದ್ದರು.ನಂತರ ಮೂರು ಜನ ಅಪಹರಣಕಾರರನ್ನು ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದರು. ಇಬ್ಬರು ತಪ್ಪಿಸಿಕೊಂಡು ಹೋದಾಗ ಯಲ್ಲಾಪುರ ತಾಲೂಕಿನ ಹಳಿಯಾಳ ಸನಿಹ ಡೋಗಿನಾಳದಲ್ಲಿ ಪೊಲೀಸರು ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಇಬ್ಬರು ಆರೋಪಿಗಳು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದರು. ಈ ಘರ್ಷಣೆ ಯಲ್ಲಿ ಮೂವರು ಪೊಲೀಸರಿಗೆ ಗಾಯವಾಗಿದೆ. ಅಲ್ಲದೆ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಕಾಲಿಗೆಗುಂಡೇಟು ಹೊಡೆಸಿಕೊಂಡ ಆರೋಪಿಗಳಾದ ಧಾರವಾಡ ಮೂಲದ ರಹಿಮ್ ಜಾಫರ ಸಾಬ್ ಅಲ್ಲಾವುದ್ದೀನ್ ಹಾಗೂ ಧಾರವಾಡದ ಅಜಯ ಕೊಡ್ಲಿ ಬಿಜಾಪುರ ಎಂಬಾತನನ್ನು ಹುಬ್ಬಳ್ಳಿ ಕಿಮ್ಸಗೆ ದಾಖಲಿಸಲಾಗಿದೆ.ಮುಂಡಗೋಡು ಪಿ.ಐ ರಂಗನಾಥ ನೀಲಮ್ಮನವರ್, ಪಿ.ಎಸ್.ಐ ಪರಶುರಾಮ್ ,ಯಲ್ಲಾಪುರ ಪಿ.ಸಿ ಶಫಿ ಶೇಖ್ ಆರೋಪಿಗಳಿಂದ ಹಲ್ಲೆಗೊಳಗಾಗಿದ್ದಾರೆ. ಹಲ್ಲೆಗೊಳಗಾದ ಪೊಲೀಸರು ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೋಟೋ: ಆರೋಪಿಗಳಿಗೆ ಗುಂಡೇಟು ಬಿದ್ದ ಸ್ಥಳ ಪರೀಶೀಲನೆ ಮಾಡಿದ ಎಸ್ಪಿ ಹಾಗೂ ಅಡಿಶನಲ್ ಎಸ್ಪಿ ಹಾಗೂ ತನಿಖಾ ತಂಡ.