ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ

ಲೋಕದರ್ಶನ ವರದಿ

ಬೆಳಗಾವಿ 11: ಹಲಗಾ ಗ್ರಾಮದಲ್ಲಿರುವ ಭರತೇಶ ಶಿಕ್ಷಣ ಸಂಸ್ಥೆಯ ಭರತೇಶ ಸೆಂಟ್ರಲ್ ಶಾಲೆಯಲ್ಲಿ ಇತ್ತಿಚಿಗೆ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ  ನಿವೃತ್ತ ಕರ್ನಲ್ ಪ್ರಕಾಶ ಮಿಠಾರೆ ಅವರು ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾಥರ್ಿಗಳು ದೇಶದ ಇತಿಹಾಸ  ಬಗ್ಗೆ ತಿಳಿದುಕೊಳ್ಳಬೇಕು.  ದೇಶದ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಸದೃಢರಾಗಬೇಕು ಮತ್ತು ಮಾನಸಿಕವಾಗಿ ಈಗಿನಿಂದಲೆ ಸಿದ್ದತೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಶಾಲೆಯ ಪ್ರಾಚಾರ್ಯ ಮಹಾನಂದಾ ಗಂಗಣ್ಣವರ ಅವರು ಅತಿಥಿಗಳನ್ನು ಸ್ವಾಗತಿಸಿದರು.  ಶಿಕ್ಷಕಿ ಗೀತಾ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವಿನೋದ ದೊಡ್ಡಣ್ಣವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.