ಕೊಪ್ಪಳ 26: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ಅರಿವು ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಗೊಂಡಬಾಳ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಕಾರ್ಯಕ್ರಮದಡಿ ಯೋಜನೆಯ ಕುರಿತು ಕೂಲಿಕಾರರಿಗೆ, ದುರ್ಬಲವರ್ಗದವರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವು ಬುಧವಾರದಂದು ಜರುಗಿಸಲಾಯಿತು.
ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಪ್ರಸಕ್ತದಲ್ಲಿ ಬರಗಾಲ ಇರುವದರಿಂದ ಮಣ್ಣು ನೀರು ಸಂರಕ್ಷಣಾ ಶೇ.65 ರಷ್ಟು ಕಾಮಗಾರಿಗಳು ಅನುಷ್ಠಾನ ಕಡ್ಡಾಯವಾಗಿರುವದರಿಂದ ಕೆರೆ ಹೂಳೆತ್ತುವದು, ಕೃಷಿಹೊಂಡ, ಬದುನಿಮರ್ಾಣ ಮುಂತಾದ ಕಾಮಗಾರಿಗಳಲ್ಲಿ ಕೂಲಿಕಾರರು ಕೆಲಸ ನಿರ್ವಹಿಸಿ ಕೂಲಿಯನ್ನು ತಮ್ಮ ಬ್ಯಾಂಕ್ ಖಾತೆಗೆ ಪಡೆಯಲು ಅರ್ಹರು. ಕೂಲಿಕಾರರು ತಾವು ನಿರ್ವಹಿಸಿದ ಕೆಲಸಕ್ಕೆ ತಕ್ಕ ಕೂಲಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗದಿದ್ದಲ್ಲಿ ರೋಜಗಾರ್ ಸಭೆಯಲ್ಲಿ ಭಾಗವಹಿಸಿ ತಮ್ಮ ಕುಂದು-ಕೊರೆತೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇದು ಸಹಕಾರಿಯಾಗಿದೆ. ವೈಯಕ್ತಿಕ ಕಾಮಗಾರಿಗಳಾದ ಕೃಷಿಹೊಂಡ, ಬದುನಿಮರ್ಾಣ, ತೋಟಗಾರಿಕೆ ಸಸಿಗಳನ್ನು ಬೆಳೆಸಲು ಅವಕಾಶ ಇರುತ್ತದೆ. ಸಕರ್ಾರದ ಸುತ್ತೋಲೆಗಳಿಗೆ ನಾವೆಲ್ಲರೂ ಬದ್ದರಾಗಿ ಈ ಯೋಜನೆಯಲ್ಲಿ ಭಾಗವಹಿಸಿ ಕೂಲಿ ನಿರ್ವಹಿಸಿ ಪ್ರತಿ ದಿನಕ್ಕೆ ರೂ. 249/- ಮತ್ತು ಗುದ್ದಲಿ ಮತ್ತು ಸಲಿಕೆ ಹರಿತಗೊಳಿಸಲು ರೂ. 10/- ಪಡೆಯಲು ಅವಕಾಶ ಇರುತ್ತದೆ. ಹಾಲಿ ಒಂದು ಕುಟುಂಬ ಅಥವಾ ಒಂದು ಉದ್ಯೋಗ ಚೀಟಿಗೆ 100 ದಿನಗಳಿಂದ 150 ಮಾನವ ದಿನಗಳಿಗೆ ಹೆಚ್ಚಿಸಿ ಸಕರ್ಾರ ಆದೇಶ ಹೊರಡಿಸಿದೆ. ಯೋಜನೆ ಜಾರಿಯಾಗಿ 10 ವರ್ಷಗಳು ಗತಿಸಿದ್ದು ಯೋಜನೆಯ ಅನುಷ್ಠಾನದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ ಎಂದರು.
ನಂತರ ಪಂಚಾಯತಿ ಅಭಿವೃದ್ದಿ ಅಧಿಕಾರಿ ಕೆ. ಸೌಮ್ಯ ಮಾತನಾಡಿ, ಕಳೆದ ಸಾಲಿನಲ್ಲಿ ಜಾಬಕಾರ್ಡ ಹೊಂದಿದ ಯಜಮಾನ ಮಾತ್ರ ಬ್ಯಾಂಕ್ ಖಾತೆ ಹೊಂದಿದ್ದರೆ ಸಾಕು ಕೂಲಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಆದರೆ ಈ ಕುರಿತು ಸಕರ್ಾರದ ಸುತ್ತೋಲೆ ಹೊರಡಿಸಿದ್ದು, ಜಾಬಕಾರ್ಡನಲ್ಲಿರುವ ಎಲ್ಲಾ ಸದಸ್ಯರ ಬ್ಯಾಂಕ್ ಖಾತೆ ಹೊಂದಿ ಜೊತೆಗೆ ಆಧಾರಕಾರ್ಡ ಬ್ಯಾಂಕ್ ಖಾತೆಗೆ ಜೋಡಣೆ ಮಾಡಲು ಆಧಾರ ಕಾರ್ಡನ ಜೆರಾಕ್ಸ್ ಪ್ರತಿಯನ್ನು ಸಂಬಂಧಪಟ್ಟ ಬ್ಯಾಂಕ್ಗೆ ನೀಡಿ ಲಿಂಕ್ ಮಾಡಲು ಎಲ್ಲರೂ ಅನುಸರಿಸಬೇಕು. ಪ್ರಸಕ್ತ ಸಾಲಿನ ಮಳೆಯ ಪ್ರಮಾಣ ಕಡಿಮೆ ಆಗಿರುವದರಿಂದ ಕೂಲಿಕಾರರು ಗುಳೆ ಹೋಗದೇ ನಮ್ಮ ಗ್ರಾಮ ಪಂಚಾಯತಿಯ ಕ್ರಿಯಾ ಯೋಜನೆಯಲ್ಲಿರುವ ಕಾಮಗಾರಿಗಳಲ್ಲಿ ಕೂಲಿ ಕೆಲಸ ನಿರ್ವಹಿಸಿ ಕೂಲಿ ಪಡೆದು ಆಥರ್ಿಕ ಜೀವನಮಟ್ಟ ಸುಧಾರಿಸಿಕೊಳ್ಳಲು ಇದೊಂದು ಸದಾವಕಾಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಂತ್ರಿಕ ಸಹಾಯಕ ಗುರುರಾಜ ಕಲ್ಲಭಾವಿ ಮತ್ತು ಕೂಲಿಕಾರರು, ಗ್ರಾಮ ಪಂಚಾಯತ ಸಿಬ್ಬಂದಿ ಮತ್ತು ಕೂಲಿಕಾರರು, ಸಾರ್ವಜನಿಕರು ಹಾಜರಿದ್ದರು. ವಿವಿಧ ಕೂಲಿಕಾರರು, ಸಾರ್ವಜನಿಕರು ವಿವಿಧ ಇಲಾಖೆಯಡಿಯ ಎಂಜಿನರೇಗಾ ಯೋಜನೆ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಪಡೆದರು.