ಭಕ್ತಿಭಾವದಿಂದ ಅರಣ್ಯಸಿದ್ದೇಶ್ವರ-ಮಲಕಾರಿಸಿದ್ದೇಶ್ವರ ದೇವರ ಜಾತ್ರೆ
ಚಿಕ್ಕೋಡಿ 10: ಗಡಿ ಭಾಗದ ಅತೀ ದೊಡ್ಡ ಭಂಡಾರ ಜಾತ್ರಿ ಎಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಅರಣ್ಯಸಿದ್ದೇಶ್ವರ-ಮಲಕಾರಿಸಿದ್ದೇಶ್ವರ ದೇವರ ಜಾತ್ರೆಯ ಕೊನೆ ದಿನವಾದ ಸೋಮವಾರ ಭಕ್ತರು ಟನ್ ಗಟ್ಟಲ್ಲೆ ಭಂಡಾರು ಹಾರಿಸಿ ಭಕ್ತಿಭಾವ ಮೆರೆದರು.
ಹೌದು. ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದ ಪ್ರಸಿದ್ಧ ಭಂಡಾರು ಜಾತ್ರೆಯಾಗಿರುವ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಅರಣ್ಯಸಿದ್ದೇಶ್ವರ-ಮಲಕಾರಿಸಿದ್ದೇಶ್ವರ ದೇವರ ಜಾತ್ರೆಯಲ್ಲಿ ಸೋಮವಾರ ನಡೆದ ನಿವ್ವಾಳಕಿ ಮತ್ತು ದೇವವಾಣಿ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತಾಧಿಗಳು ಭಂಡಾರು ಹಾರಿಸುವ ಮೂಲಕ ಭಕ್ತಿಭಾವ ಸಮರ್ಿಸಿದರು.
ಹಂಡ ಕುದರಿ, ಪುಂಡ ಅರಣ್ಯಸಿದ್ಧಗ ಚಾಂಗಭಲೋ ಎಂಬ ದೇವವಾಣಿ ಸದ್ದಿನ ಮಧ್ಯೆ ಭಕ್ತರು ತಮ್ಮ ಆರಾಧ್ಯದೇವನಿಗೆ ಸಡಗರ ಸಂಭ್ರಮದಿಂದ ಹರಕೆ ತೀರಿಸಿದರು. ಜಾತ್ರೆಯ ಕೊನೆದಿನವಾದ ಸೋಮವಾರ ನಿವ್ವಾಳಕಿ ಮತ್ತು ದೇವವಾಣಿ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಆರಾಧ್ಯದೇವನಿಗೆ ಭಕ್ತಿಭಾವದಿಂದ ಭಂಡಾರದಲ್ಲಿ ಮಿಂದೆದ್ದರು.
ಬೃಹತ್ ಭಂಡಾರು ಜಾತ್ರೆಯಲ್ಲಿ ಅರಣ್ಯ ಸಿದ್ದೇಶ್ವರ ದೇವರ ಸನ್ನಿಧಿಗೆ ಗಡಿ ಭಾಗದ ದಕ್ಷಿಣ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಲಕ್ಷಾಂತರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುಣೀತರಾದರು. ಮತ್ತು ದೇವರ ಪಲ್ಲಕ್ಕಿಗೆ ಭಂಡಾರ ಹಾಗೂ ಉತ್ತೋತ್ತಿಗಳನ್ನು ಹಾರಿಸುವುದರ ಮೂಲಕ ಹರಕೆ ತೀರಿಸಿದರು.
ರಣರಣ ಬಿಸಿಲಿನ ಮಧ್ಯೆಯು ಗ್ರಾಮದ ದೇವಸ್ಥಾನದ ಅಷ್ಟ ದಿಕ್ಕುಗಳಿಂದ ಭಂಡಾರು ಚಿಮ್ಮುತ್ತಿತ್ತು. ಜಾತ್ರೆಗೆ ಬಂದಿರುವ ಪ್ರತಿಯೊಬ್ಬ ಭಕ್ತರ ಕೈಯಲ್ಲಿ ಭಂಡಾರು ಮತ್ತು ಉತ್ತೋತ್ತಿಗಳನ್ನು ಹಾರಿಸಿ ಹರಕೆ ತೀರಿಸುತ್ತಿರುವುದು ಒಂದು ಕಡೆಯಾದರೆ ಭಂಡಾರದ ಕಣಗಳಯ ಜಾತ್ರೆಗೆ ಮೆರಗು ತಂದವು. ಮೂರು ದಿನಗಳ ನಡೆಯುವ ಜಾತ್ರೆಗೆ ಸೋಮವಾರ ಶಾಂತಿಯುತವಾಗಿ ಮುಕ್ತಾಯಗೊಂಡಿತ್ತು.
ಜಾತ್ರಾ ಕಮೀಟಿಯ ಮಲ್ಲಿಕಾರ್ಜುನ ಪಾಟೀಲ, ವಿರೇಂದ್ರ ಪಾಟೀಲ, ವಿಠ್ಠಲ ವಾಳಕೆ, ಸಿದ್ರಾಮ ಗಡದೆ, ಬಾಲಗೌಡ ರೇಂದಾಳೆ, ಬಸವಾನಂದ ವಡೇರ, ರಾಮು ಜನಗೌಡ, ವಿಠ್ಠಲ ಬೇಕ್ಕೇರಿ, ಅಪ್ಪಾಸಾಹೇಬ ಬ್ಯಾಳಿ, ನಾಗುಗೌಡ ಪಾಟೀಲ, ಶಿವಾನಂದ ಸಂಕೇಶ್ವರಿ, ರವಿ ಪಾಟೀಲ, ಮಹೇಶ ಪಾಟೀಲ, ಸಿದ್ದು ನಾವಿ, ಸುರೇಶ ಬಾಡ್ಕರ, ಶಿವು ಪಾಟೀಲ ಸೇರಿ ಮುಂತಾದವರು ಇದ್ದರು.