ಬೈಲಹೊಂಗಲ 22: ಮತಕ್ಷೇತ್ರದ ಎಣಗಿ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲು ಹಾಗೂ ಸರ್ವಧರ್ಮದ ಸ್ಮಶಾನಕ್ಕೆ ಶವ ಸಾಗಿಸಲು ಸೂಕ್ತ ರಸ್ತೆ ಮಾಡಿಕೊಡಬೇಕು ಎಂದು ಆಗ್ರಹಿಸಿ ಏಣಗಿ ಗ್ರಾಮಸ್ಥರು ಹಾಗೂ ಭಾರತೀಯ ಕೃಷಿಕ ಸಮಾಜದ ಸದಸ್ಯರು ಶುಕ್ರವಾರ ಉಪವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಕಮತ, ಸದಸ್ಯ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ರಾಜ್ಯ ಸಕರ್ಾರ ಸಾರ್ವಜನಿಕರ ಹಿತ ದೃಷ್ಠಿಯಿಂದ ಪ್ರತಿ ಗ್ರಾಮಕ್ಕೆ ಸ್ಮಶಾನಗಳನ್ನು ಮಂಜುರಾತಿ ಮಾಡುತ್ತಿದೆ. ಏಣಗಿ ಗ್ರಾಮ ಸುಮಾರು 2 ಸಾವಿರ ಜನಸಂಖ್ಯೆಯುಳ್ಳ ಪುಟ್ಟಗ್ರಾಮ. ಇದೊಂದು ಮಲಪ್ರಭಾ ಯೋಜನೆಯಲ್ಲಿ ಸ್ಥಳಾಂತರಗೊಂಡ ಗ್ರಾಮ ಇಲ್ಲಿ ಸಕರ್ಾರ ಜನತೆಗೆ ಪುರ್ನವಸತಿ ಯೋಜನೆ ಕಲ್ಪಿಸುವ ಸಮಯದಲ್ಲಿ ಗ್ರಾಮದ ಹೊರವಲಯ ಸವರ್ೆ ನಂ. 339/1 1 ಏಕರೆ ಜಮೀನು ಲಿಂಗಾಯತರಿಗೆ ಮತ್ತು ರಿ.ನಂ358 2 ಏಕರೆ ಮಂಜುರಾತಿಯಾಗಿ ಇಲ್ಲಿಯವರೆಗೆ ಈ ಜಮೀನುಗಳಲ್ಲಿ ಗ್ರಾಮದಲ್ಲಿ ಮರಣ ಹೊಂದಿದವರ ಅಂತ್ಯಕ್ರಿಯೆ ನೆರವೆರಿಸುತ್ತಾ ಸಾರ್ವಜನಿಕರು ಬಂದಿದ್ದಾರೆ.
ಗ್ರಾಪಂ.ಅಧ್ಯಕ್ಷ ಈರಪ್ಪ ಹುಬ್ಬಳ್ಳಿ ಮಾತನಾಡಿ, ಸ್ಮಶಾನಗಳ ರಸ್ತೆಗೆ ಗುರುತಿಲ್ಲದ್ದರಿಂದ ಜಮೀನುಗಳ ಮಾಲಿಕರು ರಸ್ತೆ ನೀಡದೆ ಪದೆ ಪದೆ ಕಿರಿ ಕಿರಿ ಮಾಡುತ್ತಿರುವದರಿಂದ ಅಂತ್ಯಸಂಸ್ಕಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಸವದತ್ತಿ ತಾಲೂಕಾ ತಹಸೀಲ್ದಾರ ಹತ್ತಿರ ಸಾಕಷ್ಟು ಮನವಿ ಮಾಡಿದ್ದರು ಯಾವುದೆ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ತೀರಿಕೊಂಡವರ ಶವಸಂಸ್ಕಾರಕ್ಕಾಗಿ ಸುಮರು 6 ಘಂಟೆಯಕ್ಕಿಂತ ಹೆಚ್ಚಿನ ಸಮಯ ಕಾಯುವಂತಾಗಿದೆ. ಸುತಗಟ್ಟಿ ಗ್ರಾಮದ ಸರಹದ್ದಿಯ ರಸ್ತೆಯಿಂದ 2 ಘಂಟೆಗಳಕಾಲ ಶವ ಸಾಗಿಸಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ.
ಇದರಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದ್ದು ಸಕರ್ಾರದ ಸ್ಮಶಾನವಿದ್ದರು ಅದಕ್ಕೆ ಸಂಪರ್ಕ ರಸ್ತೆ ಇಲ್ಲದೆ ಪ್ರತಿ ಬಾರಿ ಅಂತ್ಯಕ್ರಿಯೆ ಕೈಗೊಳ್ಳುವಾಗ ಈ ದುಸ್ಥಿತಿ ಎಣಗಿ ಗ್ರಾಮಕ್ಕೆ ಬಂದೊದಗಿದೆ. ಇದರಿಂದ ಗ್ರಾಮದಲ್ಲಿಯ ಜನತೆ ಆತಂಕಕ್ಕೆ ಒಳಗಾಗಿ ತಮ್ಮ ಮನೆಯಲ್ಲಿ ಅಂತಿಮ ವಯೊವೃದ್ಧರು ತಿರಿಕೊಂಡರೆ ನಮ್ಮ ಮುಂದಿನ ಕಾರ್ಯ ಹೇಗೆ ಎಂಬ ಜಿಜ್ಞಾಸೆ ಪ್ರಜ್ಞಾವಂತ ನಾಗರೀಕರಲ್ಲಿ ಕಾಡುತ್ತಿದೆ.
ಇಂದಿನ ಮುಂದುವರೆದ ನಾಗರಿಕತೆಯಲ್ಲಿ ಪ್ರತಿಯೊಬ್ಬ ವ್ಯಕ್ತಿ ತಿರಿಹೊದಾಗ ಅಂತಹ ವ್ಯಕ್ತಿಯ ಶವಸಂಸ್ಕಾರಕ್ಕೆ ತೊದರೆಯಾಗದಂತೆ ಸಕರ್ಾರವೆ ಜಮೀನು ಖರೀದಿಸಿ ಶವಸಂಸ್ಕಾರಕ್ಕೆ ಅನುದಾನ ನೀಡುತ್ತಿರುವಾಗ ಈ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ದಾರಿ ಇಲ್ಲದೆ ಪರಿತಪಿಸುವ ಕಾಲ ಬಂದಿರುವದು ನಿಜಕ್ಕೂ ದುರಾದೃಷ್ಟಕರ. ಎಳು ದಿನಗಳ ಒಳಗಾಗಿ ಏಣಗಿ ಗ್ರಾಮದ ಸ್ಮಶಾನಕ್ಕೆ ಸಂಪರ್ಕ ರಸ್ತೆ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವದು. ಮುಂದೆ ಗ್ರಾಮದಲ್ಲಿ ಯಾರಾದರು ನೀಧನ ಹೊಂದಿದರೆ ಅವರ ಶವಯಾತ್ರೆಯನ್ನು ಸಕರ್ಾರದ ಕಛೇರಿ ಮುಂದೆಯೆ ನೆರವೆರಿಸಲಾಗುವದು ಎಂದು ಆಗ್ರಹಿಸಿದರು.
ಮಹಾಂತೇಶ ಅಬ್ಬಾಯಿ, ರಮೇಶ ಸಣ್ಣರ, ಸುರೇಶ ಹೊಳಿ, ಮಲ್ಲಯ್ಯ ಪೂಜೇರ, ಗಂಗಪ್ಪ ಪೂಜೇರ, ರಾಜು ಧೂಪದಾಳ, ಪ್ರಶಾಂತ ಏಣಗಿ, ಮಂಜುನಾಥ ನಾಶಿಪುಡಿ, ಬಸವರಾಜ ಕಮತಗಿ, ವೀರಭದ್ರ ನಾಶಿಪುಡಿ, ಭೀಮಪ್ಪ ತೋಟಗಿ, ನಾಗಪ್ಪ ಅಬ್ಬಾಯಿ, ಸತೀಶ ದಳವಾಯಿ, ಮಹಾಂಥೇಶ ಮೇಟಿ, ,ಗುರುಪುತ್ರ ಮೇಟಿ, ಈರಪ್ಪ ಸಣ್ಣರ, ಯಲ್ಲಪ್ಪ ಅಂಗಡಿ, ಅಲ್ಲಾಸಾಬ ಧೂಪದಾಳ, ಖಾಶಿಮಸಾಬ ಭಾವಾಖಾನ, ಇಮಾಮಸಾಬ ಧೂಪದಾಳ, ಖಾಲೆಸಾಬ ಸುತಗಟ್ಟಿ ಹಾಗೂ ನೂರಾರು ಏಣಗಿ ಗ್ರಾಮಸ್ಥರು ಇದ್ದರು.