ಇ ಸ್ವತ್ತು ಉತಾರ ಪೊರೈಸುವಂತೆ ಮುಖ್ಯಾಧಿಕಾರಿಗೆ ಮನವಿ
ಶಿಗ್ಗಾವಿ 20: ಬಂಕಾಪೂರ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿರುವ ರಿ.ಸ.ನಂ. 2/1ಅ ತಹಸೀಲ್ದಾರ ಪ್ಲಾಟ್ ನ 7.9 ಗುಂಟೆ ವಿಸ್ತೀರ್ಣದ ಪ್ಲಾಟ್ ಖರೀದಿದಾರರರಿಗೆ ಇ ಸ್ವತ್ತು ಉತಾರ ಪೊರೈಸುವಂತೆ ಅಲ್ಲಿನ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಅರ್ಿಸಿದರು. ತಹಸೀಲ್ದಾರ ಪ್ಲಾಟ್‌ಗಳಲ್ಲಿ 131 ಜನ ಖರೀದಿದಾರರಿದ್ದು, ಸರ್ವ ಪ್ಲಾರ್ಟ ಖರೀದಿದಾರರಿಗೂ ಇ ಸ್ವತ್ತು ಉತಾರ ಪೊರೈಸಬೇಕು. ಸರಕಾರದ ಸುತ್ತೋಲೆ ಪ್ರಕಾರ ಸರ್ಕಾರವೇ ವಿತರಿಸಿದ ಗುರುತಿನಚೀಟಿ, ಮಾಲೀಕತ್ವ ಗುರುತಿಸುವ ನೊಂದಾಯಿತ ದೃಡಿಕರಣ ದಾಖಲೆ, ಸ್ವತ್ತಿನ ಋಣಬಾರ ಪ್ರಮಾಣಪತ್ರ, ಸ್ವತ್ತಿನ ಛಾಯಾಚಿತ್ರ, ಆಸ್ತಿ ತೇರಿಗೆ ಪಾವತಿಸಿದ ರಶೀದಿ, ಹಾಗು ಆಸ್ತಿ ಮಾಲಕತ ಭಾವಚಿತ್ರ ಇ ಎಲ್ಲ ದಾಖಲೆಗಳು ಪ್ಲಾಟ್ ಖರೀದಾರರಲ್ಲಿದ್ದು, ದಯವಿಟ್ಟು ಸರಕಾರದ ಆದೇಶದ ಪ್ರಕಾರ ಪ್ಲಾಟ್ ಖರೀದಾರರಿಂದ ದಾಖಲೆ ಪಡೆದು ಇ ಸ್ವತ್ತು ಉತಾರ ಪೊರೈಸಿ ಅನಕೂಲ ಕಲ್ಪಿಸಿಕೊಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಪದ್ಮ ಹಿರೇಮಠ, ಪುಷ್ಫಾ ಗಚ್ಚಿನಮಠ, ರವಿ ಕೊಲ್ಲಾಪುರ, ರೇಖಾ ಕರಡಿ, ಲಕ್ಷ್ಮೀ ದೊಡ್ಡಮನಿ ಇದ್ದರು.