ಸೂಪರ್ ಸ್ಪೇಷಾಲಟಿ ಆಸ್ಪತ್ರೆ ಮಂಜೂರಾತಿಗೆ ಮನವಿ

ಲೋಕದರ್ಶನ ವರದಿ

ಕೊಪ್ಪಳ 18: ಹಿಂದುಳಿದ ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯದ ಸಮಸ್ಯೆಯು ತೀವ್ರತೆಯು ಇದ್ದು, ಇಲ್ಲಿಯ ಜನರ ಆರೋಗ್ಯದ ದೃಷ್ಠಿಯಿಂದ ಕೊಪ್ಪಳ ನಗರದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸುವದು ಅಗತ್ಯವಿದ್ದು ತಕ್ಷಣ ಮಂಜೂರಾತಿ ನೀಡುವುಂತೆ ಸಂಸದ ಸಂಗಣ್ಣ ಕರಡಿ ಕೇಂದ್ರ ಹಾಗೂ ರಾಜ್ಯ ಸಕರ್ಾರವನ್ನು ಒತ್ತಾಯಿಸಿದ್ದಾರೆ. 

ಈಗಾಗಲೇ ರಾಜ್ಯ ಸಕರ್ಾರಕ್ಕೆ ಹಾಗೂ ಕೇಂದ್ರ ಸರ್ಕಾರ ಕ್ಕ ಈ ಕುರಿತು ಪತ್ರವನ್ನು ಬರೆದಿರುವ ಸಂಸದ ಸಂಗಣ್ಣ ಕರಡಿ ಅವರು ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಮಂತ್ರಿ ಹರ್ಷವರ್ಧನ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಮಾಡಿಮಾಡಿಕೊಂಡಿದ್ದಾರೆ. 

ರಾಜ್ಯದ ವಿವಿಧೆಡೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆದ ಬೆನ್ನಲ್ಲೆ ಕೊಪ್ಪಳ ಜಿಲ್ಲೆಯಲ್ಲೂ ಸೂಪರ್ ಸ್ಪೆಷಾಲಿಟಿ  ಆಸ್ಪತ್ರೆ ಆರಂಭಿಸುವಂತೆ ಕಳೆದ ತಿಂಗಳು ಸಂಸದರು ಸಹ ಅಭಿಯಾನ ಆರಂಭಿಸಿದ್ದರು 

ಆರೋಗ್ಯ ಸೂಚ್ಯಂಕದಲ್ಲಿ ತೀರಾ ಹಿಂದುಳಿದ ಹಾಗೂ ಹೈ-ಕ ಪ್ರದೇಶದಲ್ಲಿಯೇ ಹಿಂದುಳಿದ ಜಿಲ್ಲೆಯಾಗಿದ್ದು, ಇಲ್ಲಿ ತಾಯಿ ಮರಣ, ಶಿಶು ಮರಣ ವಿಪರೀತವಿದೆ. ಸಕಾಲಕ್ಕೆ ಸೂಕ್ತ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ಸಿಗದೆ ಅದೆಷ್ಟೋ ಬಾಣಂತಿಯರು, ಹಸುಗೂಸುಗಳು ಸಾವನ್ನಪ್ಪುತ್ತಿರುವುದು ಸಾಮಾನ್ಯವಾಗಿದೆ, ಇದು ಅತ್ಯಂತ ನೋವಿನ ಸಂಗತಿ.  

ಇದಲ್ಲದೆ ಮಕ್ಕಳಲ್ಲಿಯೂ ಅಪೌಷ್ಠಿಕತೆಯೂ  ವಿಪರೀತವಿದೆ. ಬಾಣಂತಿ ಮಹಿಳೆಯರಲ್ಲಿ ರಕ್ತಹೀನತೆಯೂ ದೊಡ್ಡ ಪ್ರಮಾಣದಲ್ಲಿಯೇ ಇದೆ.  ಸಾಮಾನ್ಯರಿಗೆ ಹಾಗೂ ಅದರಲ್ಲೂ ಬಡವರಿಗೆ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯಲು ಆಗದೆ ಪ್ರಾಣತೆತ್ತಿರುವ ಪ್ರಕರಣಗಳು ನಡೆದಿವೆ. ಈ ಪ್ರದೇಶದಲ್ಲಿ ಹೆದ್ದಾರಿಗಳು, ಕಾಖರ್ಾನೆಗಳು  ಅಧಿಕ ಪ್ರಮಾಣದಲ್ಲಿ ಇರುವುದರಿಂದ ಅವಗಡಗಳು ಸಂಭವಿಸುತ್ತಿವೆ. 

ಈ ವೇಳೆಯಲ್ಲಿ ಸೂಕ್ತ  ಚಿಕಿತ್ಸೆ ಸಿಗದೆ ಪ್ರಾಣವನ್ನೇ ಕಳೆದುಕೊಂಡಿರುವ ಉದಾಹರಣೆಗಳಿವೆ, ತುರ್ತು ಚಿಕಿತ್ಸೆಯು ಸೇರಿದಂತೆ ಇತರೆ ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಗಾಗಿ ಬಳ್ಳಾರಿ, ಹುಬ್ಬಳ್ಳಿ, ಬೆಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಇದೆ, ಈ ಮಧ್ಯೆದಲ್ಲಿ ರೋಗಿಗಳಿಗೆ ಚಿಕಿತ್ಸೆ ಸಿಗದೆ ಮರಣಕ್ಕೆ ತುತ್ತಾಗುವರು, ಜಿಲ್ಲೆಯು ಬೆಳೆಯುತ್ತಿರುವ ನಗರವಾಗಿದ್ದು, ಜಿಲ್ಲಾ ಕೇಂದ್ರವಾದ ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆರಂಭಿಸುವುಂತೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಸಹ ಆಗ್ರಹವನ್ನು ವ್ಯಕ್ತಪಡಿಸಿರುವರು,  ತಕ್ಷಣ ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸುವುಂತೆ ಕೇಂದ್ರ ಮಂತ್ರಿಗಳಿಗೆ ಸಲ್ಲಿಸಿರುವ ಪತ್ರದಲ್ಲಿ ಸಂಸದರು  ಮನವಿ ಮಾಡಿಕೊಂಡಿದ್ದಾರೆ.  

ಸಂಸದರೊಂದಿಗೆ ಕೇಂದ್ರದ ಮಾಜಿ ಸಚಿವ, ದಾವಣಗೆರೆ ಸಂಸದರಾದ ಜಿ.ಎಂ. ಸಿದ್ದೇಶ್ವರ್ ಇದ್ದರು.  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವಂತೆ ಸೋಷಿಯಲ್ ಮಿಡೀಯಾದಲ್ಲಿ ಕ್ಯಾಂಪೇನ್ ನಡೆದಿತ್ತು. ಆದರೆ ಅಧಿಕೃತವಾಗಿ ಕೊಪ್ಪಳ ಸಂಸದರು ಕೇಂದ್ರ ಸಕರ್ಾರವನ್ನು ಮನವಿ ಮಾಡುವ ಮೂಲಕ ಅದಕ್ಕೆ ಇಂಬು ನೀಡಿದ್ದಾರೆ. ಕೇಂದ್ರ ಸರ್ಕಾರ  ಸಂಸದರ ಮನವಿ ಪುರಸ್ಕರಿಸದರೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ, ಭೂಮಿ, ಸಿಬ್ಬಂದಿ ನೀಡಿದರೆ ಈ ಭಾಗದ ಜನತೆಯ ಕನಸು, ಬೇಡಿಕೆ ಈಡೇರಿದಂತಾಗುತ್ತದೆ.