ಬಳ್ಳಾರಿ 10: ಇತ್ತೀಚಿನ ಸರಕಾರ ಬೆಳವಣಿಗೆಗಳಿಗೆ ಜನರು ಬೇಸತ್ತಿದ್ದಾರೆ. ಪ್ರಜಾಪ್ರಭುತ್ವದ ಅಣಕ ನಡೆಯುತ್ತಿದೆ. ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರು ರಾಜೀನಾಮೆ ನಾಟಕದಲ್ಲಿ ನಿರತರಾಗಿದ್ದಾರೆ. ಪ್ರಮುಖ ವಿರೋಧ ಪಕ್ಷ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ ನಾಚಿಕೆಗೆಟ್ಟ ತೆರೆಯ ಮರೆಯ ಸೂತ್ರದಾರನ ಕೆಲಸ ಮಾಡುತ್ತಿದೆ. ಜನ ಭೀಕರ ಬರಗಾಲದಿಂದ ತತ್ತರಿಸಿದ್ದಾರೆ. ಭೀಕರ ಬರಗಾಲ, ಕುಡಿಯುವ ನೀರಿಗೂ ತತ್ವಾರ, ಜಾನುವಾರುಗಳು ಸಾಯುತ್ತಿವೆ ಕೈ ಕೊಟ್ಟ ಮುಂಗಾರಿನಿಂದಾಗಿ ರೈತರು ಕಂಗಾಲಾಗಿದ್ದಾರೆ. ಮಹಿಳೆಯರು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯಗಳು ಅವ್ಯಾಹತವಾಗಿ ನಡೆಯುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ, ಹೊಸ ಹೊಸ ರೋಗಗಳಿಂದ ಜನ ಪರದಾಡುತ್ತಿರುವಾಗ ಜನರ ಸಂಕಷ್ಟಕ್ಕೆ ನೆರವಾಗಲು ತಾಯಿಯಂತೆ ಧಾವಿಸಬೇಕಿದ್ದ ಶಾಸಕರು ತಮ್ಮದೇ ಸಕರ್ಾರವನ್ನು ಅಭದ್ರಗೊಳಿಸಲು ಮುಂದಾಗಿರುವುದು ಖಂಡನೀಯ. ಇದು ಕ್ಷೇತ್ರದ ಜನರಿಗೆ, ಮತದಾರರಿಗೆ ಮಾಡುತ್ತಿರುವ ಅನ್ಯಾಯ ಮತ್ತು ಅವಮಾನ.
ಶಾಸಕರ ಈ ನಡೆಯನ್ನು ಖಂಡಿಸುತ್ತಲೇ ಪ್ರಜಾಪ್ರಭುತ್ವದ ನೆಲೆಯಲ್ಲಿ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ಸಕರ್ಾರ ನಡೆಸುತ್ತಿರುವ ಬಿ.ಜೆ.ಪಿ.ರಾಜ್ಯದಲ್ಲಿ ಮಾಡುತ್ತಿರುವುದು ಹೇಯ ರಾಜಕೀಯ. ಜನರ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಸದನದಲ್ಲಿ ಪ್ರಸ್ತಾಪಿಸಿ ಚಚರ್ಿಸಿ ಪರಿಹಾರಕ್ಕೆ ಸಕರ್ಾರ ಮುಂದಾಗುವಂತೆ ಒಂದು ಪ್ರಬುದ್ಧ ವಿರೋಧ ಪಕ್ಷವಾಗಿ ತಮ್ಮ ಜವಾಬ್ದಾರಿ ಮೆರೆಯುವ ಬದಲು ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಫಲಿತಾಂಶ ಬಂದ ದಿನದಿಂದಲೇ ಅತ್ಯಂತ ಕೀಳು ಮಟ್ಟದ ರಾಜಕಾರಣ ಮಾಡುತ್ತಿರುವ ಬಿ.ಜೆ.ಪಿ.ಯ ನಡೆ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಆದರೆ ಇದ್ಯಾವುದೂ ತಮಗೆ ಸಂಬಂಧವೇ ಇಲ್ಲವೆಂಬಂತೆ ಸಚಿವ ಸ್ಥಾನಕ್ಕಾಗಿ ಹಂಬಲಿಸಿ ತಮ್ಮದೇ ಸರಕಾರವನ್ನು ಬೀಳಿಸ ಹೊರಟ ಶಾಸಕರನ್ನು ಮತದಾರರು ತರಾಟೆಗೆ ತೆಗೆದುಕೊಳ್ಳುವ ಸಮಯ ಇದಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು. ಆದರೆ ಚುನಾವಣೆಯ ಸಂದರ್ಭದಲ್ಲಿ ಕೈ ಮುಗಿದು ಕಾಲು ಹಿಡಿದು ಮತಯಾಚಿಸುವ ಇವರು ಗೆದ್ದು ಬಂದ ಕೂಡಲೇ ಗದ್ದುಗೆಯ ಆಸೆಗೆ ಎಲ್ಲವನ್ನೂ ಬಿಟ್ಟು ನಿಲ್ಲುವ ಸ್ಥಿತಿಗೆ ತಲುಪುವುದಕ್ಕಿಂತ ಅಸಹ್ಯ ಇನ್ನೊಂದಿರಲು ಸಾಧ್ಯವೇ? ಇಂತಹ ಸಂದರ್ಭದಲ್ಲಿ ಸಮಾನ ಮನಸ್ಕ ಪ್ರಜಾಪ್ರಭುತ್ವ ಪ್ರೇಮಿಗಳೆಲ್ಲ ಬೀದಿಗಿಳಿದು, ಧ್ವನಿ ಎತ್ತಿ ಪ್ರಜೆಗಳ ಅಧಿಕಾರವನ್ನು ಉಳಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಇಂತಹ ಶಾಸಕರಿಗೆ ತಕ್ಕ ಪಾಠ ಕಲಿಸಲೇಬೇಕು.? ಎಂದು ಜನವಾಧಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಮಂಜುಳಾ ಹವಾಲ್ದಾರ್, ಜಿಲ್ಲಾ ಕಾರ್ಯದಶರ್ಿ ಜೆ.ಚಂದ್ರಕುಮಾರಿ ಜಿಲ್ಲಾ ಸಮಿತಿ ಸದಸ್ಯರಾದ ಪ್ರಭಾವತಿ, ಸಾವಿತ್ರಿ, ಮಲ್ಲಮ್ಮ, ಉಮಾದೇವಿ, ಭಾಗ್ಯ, ನಾಗರತ್ನಮ್ಮ, ಸಾವಿತ್ರಿ, ಖಾಜಾಬೀ, ಸರೋಜಮ್ಮ, ವಿನೋದ (ಹುಲಿಗೆಮ್ಮ) ಅವರುಗಳು ಜಿಲ್ಲಾಧಿಕಾರಿಗಳಾದ ಎಸ್.ಎಸ್.ನಕುಲ್ ಅವರಿಗೆ ಮನವಿ ಸಲ್ಲಿಸಿದರು