ಬಡ ಜನರಿಗೆ ಜಾಗ ಕಲ್ಪಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ

Appeal to the District Collector to provide space for poor people

ಬಡ ಜನರಿಗೆ ಜಾಗ ಕಲ್ಪಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ 

ವಿಜಯಪುರ, 11 : ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸ್ಲಂ ಏರಿಯಾದ ಬಡ ಜನರಿಗೆ ಜಾಗ ಕಲ್ಪಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.  

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಅಧ್ಯಕ್ಷರಾದ ಸಂತೋಷ ಡಂಬಳ ಮಾತನಾಡಿ, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸಿಂದಗಿ ಪಟ್ಟಣದ ವರ್ಡ ನಂ. 13 ರ ಸ್ಲಂ ಏರಿಯದಲ್ಲಿ ಹಿರಿಯ ನಾಗರಿಕರು, ಅಂಗವಿಕಲರು, ಕಡು ಬಡ ಜನರು, ದಲಿತರು ಮತ್ತು ಅಲ್ಪಸಂಖ್ಯಾತರು, ಬಾಣಂತಿಯರು ದಿನಗೂಲಿ ಕೆಲಸ ಮಾಡಿಕೊಂಡು ತಮ್ಮ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ವಾಸ ಮಡುವ ಜನರಲ್ಲಿ ತಮ್ಮದೇ ಅಂತ ಯಾವುದೇ ರೀತಿಯ ಸ್ವಂತ ಜಾಗ ಅಥವಾ ಯಾವುದೇ ರೀತಿಯ ಆಸ್ತಿ ಏನು ಇರುವುದಿಲ್ಲಾ. ಸದರಿ ಎಲ್ಲಾ ಜನರು ಸೂಮಾರು 43 ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದಾರೆ. ಅವರಿಗೆ ಬೇರೆ ಕಡೆ ಸೂರು (ಜಾಗ) ಕಲ್ಪಿಸಿ ಆನಂತರ ಅಲ್ಲಿಯ ಜನರಿಗೆ ಸ್ಥಳಾಂತಿರಸಬೇಕು ಹಾಗೂ ಸ್ಲಮ್ ಜನರಿಗೆ ಸೂರು(ಜಾಗ) ಕಲ್ಪಿಸುವ ವರೆಗೆ ಅಲ್ಲಿಯೇ ಇರಲು ಅವಕಾಶ ಮಾಡಿ ಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಲಾಯಿತು.  

ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಫಯಾಜ ಕಲಾದಗಿ, ಜಿಲ್ಲಾ ಸಂಚಾಲಕರಾದ ಮಹಾದೇವ ರಾವಜಿ, ಮಲ್ಲು ಬಗಲಿ, ಅಕ್ಕರಾಮ ಮಾಸುಳಕರ, ಅಮೀನಸಾವ ಅಗಸಿಮನಿ, ಶಾಂತಮ್ಮ ಚಾಂದಕೋಟೆ, ಬಸಮ್ಮ ನಾಗರಾಳ, ರೇಣುಕಾ ಮಾದರ, ನಿಲಗಂಗಾ ಕುಂಬಾರ, ಪವಿತ್ರ ಹಡಪದ, ಅಂಬವ್ವ ಕುಂಬಾರ, ಸುಧಾರಾಣಿ ಹಡಪದ ಮುಂತಾದವರು ಇದ್ದರು.