ಬಾಗಲಕೋಟ-ಕುಡಚಿ ರೇಲ್ವೆ ಮಾರ್ಗ ಪೂರ್ಣಗೊಳಿಸಲು ಮನವಿ
Appeal to complete Bagalkot-Kudachi railway line
ಬಾಗಲಕೋಟ-ಕುಡಚಿ ರೇಲ್ವೆ ಮಾರ್ಗ ಪೂರ್ಣಗೊಳಿಸಲು ಮನವಿ
ಮಹಾಲಿಂಗಪುರ 16: ಬಾಗಲಕೋಟ - ಕುಡಚಿ ಮತ್ತು ಸವದತ್ತಿಗೆ ರೇಲ್ವೆ ಮಾರ್ಗ ಕುರಿತು ರಾಜ್ಯ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ ಖಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಅಕ್ಟೋಬರ್ 13 ರಂದು ಸುಕ್ಷೇತ್ರ ಬಂಡಿಗಣಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಸಲ್ಲಿಸಿದರು. ಜಮಖಂಡಿ ವಿಭಾಗದಲ್ಲಿಯ ಬಾಗಲಕೋಟ-ಕುಡಚಿ ರೇಲ್ವೆ ಯೋಜನೆಗೆ ಇರುವ ಅಡೆ ತಡೆ ನಿವಾರಿಸಿ ಮಾರ್ಗ ಪೂರ್ಣಗೊಳ್ಳಲು ಸಹಕಾರ ಕುರಿತಾಗಿ ಮತ್ತು ಈ ರೇಲ್ವೆ ಮಾರ್ಗ ಈಗಾಗಲೇ ಲೋಕಾಪೂರದವರೆಗೆ ಸಾಗಿ ಬಂದಿದ್ದು, ಈ ಪಟ್ಟಣದಿಂದ ತೀರ ಹತ್ತಿರದ ತೀರ್ಥಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಸ್ಥಾನವಿದೆ.ಪ್ರತಿ ವರ್ಷ ಮತ್ತು ಪ್ರತಿ ಹದಿನೈದು ದಿನಗಳ ಅಂತರದಲ್ಲಿ ಮಹಾರಾಷ್ಟ್ರ ಮತ್ತು ಉತ್ತರದ ಎಲ್ಲ ರಾಜ್ಯಗಳಿಂದಲೂ ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ. ಇವರಿಗೆ ಹಾಗೂ ದಕ್ಷಿಣ ಭಾರತ ಪ್ರಯಾಣ ಬಯಸುವವರಿಗೆ ಉತ್ತರ ದಿಂದ ದಕ್ಷಿಣ, ಪೂ- ಪ ಕಡೆಗಿನ ದೊಡ್ಡ ದೊಡ್ಡ ಮಹಾನಗರಗಳಿಗೂ ಸಾಗುವ ಸೇತುವೆಯಂತೆ, ವಾಣಿಜ್ಯಕರಣಕ್ಕೂ ಸೈ ಎನಿಸಿಕ್ಕೊಳ್ಳುವ ಮಾರ್ಗ ಇದು.ಧಾರವಾಡ - ಲೋಕಾಪೂರ ರೇಲ್ವೆ ಮಾರ್ಗ ಪ್ರಯಾಣಿಕರಿಗೆ ಅವಶ್ಯಕವಾಗಿದೆ ಎಂದು ಎದ್ದು ಕಾಣುತ್ತಿದೆ.ಆದ್ದರಿಂದ ಸಿಎಂ ಅವರು ಐತಿಹಾಸಿಕ ನಿರ್ಣಯ ಕೈಗೊಳ್ಳುವ ಮೂಲಕ ಈ ಪ್ರದೇಶದ ಜಮೀನನ್ನು ರೇಲ್ವೆ ಇಲಾಖೆಗೆ ಒದಗಿಸುವ ಕುರಿತು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡು ಕೇಂದ್ರಕ್ಕೆ ನೂತನ ರೇಲ್ವೆ ಮಾರ್ಗ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಮನವಿ ಮಾಡಲಾಗಿದೆ. ರೈತ ನಾಯಕ ಸುಭಾಸ ಶಿರಬೂರ, ಶ್ರೀನಿವಾಸ ಬಳ್ಳಾರಿ, ಬಸವರಾಜ ಕೊಕಟನೂರ, ಹೊಳಬಸು ಶೆಟ್ಟರ್ ಮತ್ತು ಮೈನೂದ್ದೀನ್ ಖಾಜಿ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 