ಶಿಗ್ಗಾವಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸಲು ಕೇಂದ್ರ ಸಚಿವರಿಗೆ ಮನವಿ
Appeal to Union Minister to provide funds for Shiggaoni development works
ಶಿಗ್ಗಾವಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸಲು ಕೇಂದ್ರ ಸಚಿವರಿಗೆ ಮನವಿ
ಶಿಗ್ಗಾವಿ 06: ಪಟ್ಟಣದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸುವದು ಹಾಗೂ ಕಾಮಗಾರಿ ಮಾಡಿಕೊಡುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಗೆ ಪುರಸಭೆ ನಾಮ ನಿರ್ದೇಶಿತ ಸದಸ್ಯ ಮಂಜುನಾಥ ಮಣ್ಣಣ್ಣವರ ಮನವಿ ಮಾಡಿ ಪಟ್ಟಣದ ಬಹುದಿನಗಳ ಬೇಡಿಕೆಯಾಗಿರುವ ಹಿಂದೂ ರುದ್ರ ಭೂಮಿಯ ಅಭಿವೃದ್ಧಿಗೆ (ರಸ್ತೆ ಹಾಗೂ ಚರಂಡಿ) ಅನುದಾನ ಒದಗಿಸುವುದು, ಐತಿಹಾಸಿಕ ನಾಗನೂರ ಕೆರೆಯ ಹೂಳ ಎತ್ತಲು ಹಾಗೂ ತಂತಿ ಬೇಲಿ ಆಳವಡಿಸಲು ವಿಶೇಷ ಅನುದಾನ ನೀಡಿ ಕಾರ್ಯ ನಿರ್ವಹಿಸಿಕೊಡುವ ಕುರಿತು ರಾಷ್ಟ್ರೀಯ ಹೆದ್ದಾರಿ-4 ರ ಶಿಗ್ಗಾವಿ ಪ್ರವಾಸಿ ಮಂದಿರ ಪ್ರಮುಖ ಸರ್ವಿಸ್ ರಸ್ತೆಯನ್ನು ದಾಟಲು ಪ್ರವಾಸಿ ಮಂದಿರದ ಹತ್ತಿರ ಸ್ಟಾಯ್ ವಾಕರ್ ನಿರ್ಮಿಸಿ ಕೊಡುವುದು. ಶಿಗ್ಗಾವಿ ಅಂಕಲಕೋಟಿ ಸರಕಾರಿ ಕಾಲೇಜಿನಿಂದ ಅರಳಿ ಪೇಟ್ರೋಲ್ ಪಂಪವರೆಗೆ ಎಡ ಹಾಗೂ ಬಲಕ್ಕೆ (ಅವಶ್ಯಕತೆ ಇದ್ದಲ್ಲಿ) ಸರ್ವಿಸ್ ರಸ್ತೆಗಳಿಗೆ ತಡೆಗೋಡೆ ನಿರ್ಮಿಸಿಕೊಡುವದು. ತಾಲೂಕಿನಲ್ಲಿ ಬಿತ್ತನೆ ಹಂಗಾಮು ಜೋರಾಗಿದ್ದು, ಯುರಿಯಾ ಮತ್ತು ಡಿ.ಎ.ಪಿ. ರಸಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಿಕೊಡುವುದು. ಹಾಗೂ ಮತಕ್ಷೇತ್ರದ ಎಳ್ಳೆದೆಲೆ ಬೆಳೆಗಾರರಿಗೆ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯ ಸಂದರ್ಭದಲ್ಲಿ ಹೆಚ್ಚಿನ ಬೆಳೆ ವಿಮಾ ಒದಗಿಸಲು ಕೇಂದ್ರ ಸಚಿವರು ಬೇಡಿಕೆಗಳನ್ನು ಗಂಭಿರವಾಗಿ ತೆಗೆದುಕೊಂಡು ತಾಲೂಕಿನ ವಿದ್ಯಾರ್ಥಿಗಳು ರೈತರು, ನಾಗರಿಕರ ಹಿತದೃಷ್ಟಿಯಿಂದ ತಮ್ಮ ಅನುದಾನದಲ್ಲಿ ಅಥವಾ ವಿಶೇಷ ಅನುದಾನ ನೀಡಿ ಕಾಮಗಾರಿಗಳನ್ನು ಮಾಡಿ ಕೊಡುವಂತೆ ಮಂಜುನಾಥ ಮಣ್ಣಣ್ಣವರ ಮನವಿ ಮಾಡಿಕೊಂಡರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 