ರೈಲ್ವೇ ಬೇಡಿಕೆಗಳ ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರಣ್ ಮಾಥೂರ್ ಅವರಿಗೆ ಮನವಿ

Appeal to Mukul Saran Mathur, General Manager, South Western Railway, on Railway Demands

ರೈಲ್ವೇ ಬೇಡಿಕೆಗಳ ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರಣ್ ಮಾಥೂರ್ ಅವರಿಗೆ ಮನವಿ

ವಿಜಯನಗರ, 22; ವಲಯ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಹಿರಿಯ ಸದಸ್ಯರಾದ ಬಾಬುಲಾಲ್ ಜೈನ್ ಅವರ ನೇತೃತ್ವದಲ್ಲಿ ವಿಜಯನಗರ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಇಂದು ಹೊಸಪೇಟೆ ರೈಲ್ವೇ ನಿಲ್ದಾಣದಲ್ಲಿ ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರಣ್ ಮಾಥೂರ್ ಅವರಿಗೆ ಈ ಭಾಗದ ಪ್ರಮುಖ ರೈಲ್ವೇ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.  ಈ ಸಂದರ್ಭದಲ್ಲಿ ಬಾಬುಲಾಲ್ ಜೈನ್ ರೈಲ್ವೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ಪುನರಾರಂಬಿಸಿ: ಮಹಾಕುಂಬ ಮೇಳದ ನಿಮಿತ್ತ ರದ್ದಾಗಿರುವ ಗಾಡಿ ಸಂಖ್ಯೆ : 07335/07336  ಬೆಳಗಾವಿ-ಹೊಸಪೇಟೆ-ಹೈದರಾಬಾದ್‌-ಮಣುಗೂರು ರೈಲನ್ನು ಕೂಡಲೇ ಪುನರ್ ಆರಂಬಿಸಬೇಕು. ಪರಿಷ್ಕೃತ ಆದೇಶ ಜಾರಿಗೊಳಿಸಿ 3-ವರ್ಷಗಳ ಹಿಂದೆ ಜಾರಿಗೆ ತರಲಾಗಿರುವ ಸ್ಲೀಪರ್ ಕ್ಲಾಸ್ ಪಾಲಿಸಿ ನಿಯಮದಡಿಯಲ್ಲಿ ಸಾಮಾನ್ಯ ದರ್ಜೆಯ ಟಿಕೆಟ್ ಪಡೆದು ಆಯ್ದ ರೈಲಿನಲ್ಲಿ ಹೊಸಪೇಟೆಯಿಂದ ಹುಬ್ಬಳ್ಳಿಗೆ ಮತ್ತು ಅಲ್ಲಿಂದ ಮರಳುವುದಕ್ಕೆ ಸ್ಲೀಪರ್ ಕೋಚ್‌ಗಳಲ್ಲಿ ಪ್ರಯಾಣಿಸುವ ಸೌಲಭ್ಯ ಜಾರಿಯಲ್ಲಿದ್ದರು ಸಹ ಗಾಡಿ ಸಂಖ್ಯೆ  16591/16592 ಹಂಪಿ ಎಕ್ಸ್‌ಪ್ರೇಸ್ ಹಾಗೂ 17226 ಅಮರಾವತಿ ಎಕ್ಸ್‌ಪ್ರೇಸ್ ಗಾಡಿಗಳಲ್ಲಿ ತೆರಳುವ ಪ್ರಯಾಣಿಕರಿಗೆ ಸ್ಲೀಪರ್ ಕೋಚ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸದೇ ಜನರಲ್ ಡಬ್ಬಿಗಳಿಗೆ ತೆರಳಲು ಸೂಚಿಸುತ್ತಾರೆ.  ಅಲ್ಲದೇ ದಂಡವಸೂಲಿ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಆದುದರಿಂದ ಈ ಸೌಲಭ್ಯವನ್ನು ಯಥಾವತ್ತಾಗಿ ಮುಂದುವರೆಸಲು ಮತ್ತೊಂದು ಪರಿಷ್ಕೃತ ಆದೇಶ ಜಾರಿಗೊಳಿಸಿ ಟಿಕೆಟ್ ಪರೀವೀಕ್ಷಕರಿಗೆ ನಿಯಮಪಾಲಿಸಲು ಸೂಚನೆ ನೀಡಬೇಕು. ಹೊಸಪೇಟೆ-ಮಂಗಳೂರು ನಡುವೆ ನೇರ ರೈಲು ಪ್ರವಾಸೋದ್ಯಮ ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳ ಬೆಳವಣಿಗೆಯ ದೃಷ್ಟಿಯಿಂದ ಕೊಟ್ಟೂರು ಮಾರ್ಗವಾಗಿ ಹೊಸಪೇಟೆಯಿಂದ ಬಂದರು ನಗರ ಮಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು.  ಹೊಸಪೇಟೆ ರೈಲ್ವೇ ನಿಲ್ದಾಣಕ್ಕೆ ಪ್ರಯಾಣಿಕರ ರೈಲುಗಳು ಸಕಾಲದಲ್ಲಿ ಆಗಮಿಸಿ ಮತ್ತು ನಿರ್ಗಮಿಸಲು ಅನುಕೂಲವಾಗುವಂತೆ ಎರಡು ನೂತನ ಪ್ಲಾಟ್ ಫಾರಂಗಳ ನಿರ್ಮಾಣ ಹಾಗೂ ರೈಲ್ವೇ ನಿಲ್ದಾಣದ ಆಧುನೀಕರಣ ಕಾರ್ಯಗತಗೊಳಿಸಬೇಕು.  ವಾರಕ್ಕೆ ಎರಡು ಬಾರಿ ಸಂಚರಿಸುತ್ತಿರುವ ಗಾಡಿ ಸಂಖ್ಯೆ : 17313/17314 ಹುಬ್ಬಳ್ಳಿ ಚೆನ್ನೈ ರೈಲನ್ನು ಪ್ರತಿದಿನ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಅದರಂತೆ 16217/16218 ಮೈಸೂರು-ಶಿರಡಿ-ಮೈಸೂರು ರೈಲನ್ನು ವಾರಕ್ಕೆ ಮೂರು ಬಾರಿ ಸಂಚರಿಸಲು ಕ್ರಮ ಕೈಗೊಳ್ಳಬೇಕು. 11139/11140 ಹೊಸಪೇಟೆ-ಮುಂಬೈ ರೈಲಿನ ಹಳೇ ಕೋಚ್‌ಗಳ ಬದಲಾಗಿ ಅತ್ಯಾಧುನಿಕ ಎಲ್‌.ಹೆಚ್‌.ಬಿ. ಕೋಚ್‌ಗಳನ್ನು ಅಳವಡಿಸಬೇಕೆಂದು ಆಗ್ರಹಿಸಿದರು.  ಈ ಸಂದರ್ಭದಲ್ಲಿ ಪುಕ್‌ರಾಜ್ ಚೋಪ್ರಾ, ಪ್ರಭಾಕರ್, ಮಹೇಶ್ ಕುಡುತಿನಿ, ರಾಮಕೃಷ್ಣ, ಪ್ರೋಽಽಉಮಾಮಹೇಶ್ವರ್, ನಜೀರ್ ಸಾಬ್, ವಿಶ್ವನಾಥ ಕೌತಾಳ್, ಅಶೋಕ್ ಜೈನ್, ಜಬ್ಬರ್ ರಾಜ್ ಪುರೋಹಿತ್, ವರುಣ್‌.ಜೆ, ರಂಗನಾಥ, ರಮೇಶ ಲಮಾಣಿ, ಇತರ ಹುಬ್ಬಳ್ಳಿಯ ರೈಲ್ವೇ ಅಧಿಕಾರಿಗಳು ಉಪಸ್ಥಿತರಿದ್ದರು.