ಬಸವ ಪ್ರಾಧಿಕಾರ ಮತ್ತು ಲಿಂಗಾಯತ ಅಭಿವೃದ್ದಿ ನಿಗಮ ರಚಿಸಲು ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ಬೆಳಗಾವಿ, 24:  ಬಸವಾದಿ ಶರಣರ ಸಮಾಧಿ ಸ್ಥಳಗಳ ಅಭಿವೃದ್ದಿಗಾಗಿ ಬಸವ ಪ್ರಾಧಿಕಾರ ಮತ್ತು ಲಿಂಗಾಯತ ಅಭಿವೃದ್ದಿ ನಿಗಮ ರಚಿಸಬೇಕು ಎಂದು ಬಸವ ಭೀಮ ಸೇನೆಯು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

ಈ ಕುರಿತು ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ ನೇತೃತ್ವದಲ್ಲಿ ಸೋಮವಾರದಂದು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು. 12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಚಳುವಳಿಯನ್ನು ಇಡಿ ವಿಶ್ವವೇ ಬೆರಗಾಗಿ ನೋಡುತ್ತಿರುವಂತಹ ವಿಸ್ಮಯಕಾರಿ ಸಮಗ್ರ ಕ್ರಾಂತಿ. ಬಸವಣ್ಣವರ ಕರೆಗೆ ಓಗೊಟ್ಟು ಶೋಷಿತ ಸಮುದಾಯಗಳ ಅಗಣಿತ ಶರಣರು ಕಸದ ತೊಟ್ಟಿಗಳಿಂದ, ಕೇರಿಗಳಿಂದ, ಕೊಳಚೆ ಪ್ರದೇಶಗಳಿಂದ ಎದ್ದು ಬಂದು ನವ ಮಾನವರಾದರು. 

ಬಸವಾದಿ ಶರಣರ ಕ್ರಾಂತಿ ಈ ನೆಲದ ಪ್ರಪ್ರಥಮ ಮಾನವೀಯ ಧರ್ಮ ಕಲ್ಪಿಸಿದ ಕ್ರಾಂತಿ. ಆ ಕ್ರಾಂತಿಯ ರೂವಾರಿ ಬಸವಣ್ಣನವರೇ ಈ ನಾಡಿನ ಹೆಮ್ಮೆ. ವಿಶ್ವಮಾನ್ಯ ವಚನ ಸಾಹಿತ್ಯ ಕಟ್ಟಿಕೊಟ್ಟಿರುವ ಬಸವಾದಿ ಶರಣರ ಸಮಾಧಿಗಳು ಈ ನಾಡಿನ ಸಂಕೇತಗಳು. ಆ ಸಂಕೇತಗಳನ್ನು ಉಳಿಸಿಕೊಳ್ಳುವದು ನಮ್ಮ ಆದ್ಯ ಕರ್ತವ್ಯ. ಆ ಎಲ್ಲ ಸಮಾಧಿ ಸ್ಥಳಗಳ ಸಂರಕ್ಷಣೆ ಹಾಗೂ ಅಭಿವೃದ್ದಿಗಾಗಿ ಬಸವ ಪ್ರಾಧಿಕಾರವನ್ನು ರಚನೆ ಮಾಡಬೇಕು. ಆ ಪ್ರಾಧಿಕಾರಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡುವ ಮೂಲಕ ಸಮಾಧಿ ಸ್ಥಳಗಳನ್ನು ಮಹಾಮನೆಗಳನ್ನಾಗಿ ರೂಪಿಸಬೇಕು. ಸಮಾಧಿ ಸ್ಥಳಗಳಿರುವ ಗ್ರಾಮಗಳನ್ನು ಆದರ್ಶ ಗ್ರಾಮಗಳನ್ನಾಗಿ ರೂಪಿಸಬೇಕು ಎಂಬುದು ನಮ್ಮ ಆಗ್ರಹ.

ಈ ಬಗ್ಗೆ ಈ ಹಿಂದೆಯೂ ಮನವಿ ಸಲ್ಲಿಸಲಾಗಿತ್ತು. ಈ ದಿಸೆಯಲ್ಲಿ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದೀರಿ. ಆದರೂ ಆ ಭರವಸೆ ಈಡೇರದರಿಂದ ಈಗ ಮತ್ತೊಮ್ಮೆ ಮನವಿ ಸಲ್ಲಿಸಲಾಗುತ್ತಿದೆ.

ಇತ್ತೀಚೆಗೆ ಕಾಂಗ್ರೆಸ್ನ ಕೆಲ ಶಾಸಕರು ತಮಗೆ ಭೇಟಿಯಾಗಿ ವೀರಶೈವ ಲಿಂಗಾಯತ ನಿಗಮ ರಚಿಸುವಂತೆ ಮತ್ತು ವೀರಶೈವ ಲಿಂಗಾಯತ ಎಂಬುದನ್ನು ಕೇಂದ್ರ ಸರಕಾರದ ಓಬಿಸಿ ಮೀಸಲಾತಿ ಪಟ್ಟಿಯಲ್ಲಿ ಸೇರಿಸಬೇಕೆಂದು ಮನವಿ ಮಾಡಿದ್ದಾರೆ. ಈ ಮನವಿಯೇ ಒಂದು ಕಪಟ ನಾಟಕ. ದೇಶದ ಯಾವ ಮೂಲೆಯಲ್ಲಿಯೂ ವೀರಶೈವ ಲಿಂಗಾಯತ ಎಂಬ ಪದವೆ ಇಲ್ಲ. ವೀರಶೈವ ಲಿಂಗಾಯತ ಎಂಬುದು ಧರ್ಮವಂತೂ ಅಲ್ಲವೆ ಅಲ್ಲ. ಕನಿಷ್ಟ ಒಂದು ಜಾತಿ ಅಥವಾ ಉಪ ಜಾತಿಯೂ ಅಲ್ಲ. ಧರ್ಮವೂ ಅಲ್ಲ. ಜಾತಿಯೂ ಅಲ್ಲದಕ್ಕೆ ಮೀಸಲಾತಿ ನೀಡಬೇಕು ಎಂಬುದು ಪರಿಶುದ್ದ ಕಪಟ ನಾಟಕ.

ಲಿಂಗಾಯತ ಸಮಾಜದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲದ ವೀರಶೈವ ಮಹಾಸಭೆಯಲ್ಲಿ ಕುಳಿತಿರುವ ಆಥರ್ಿಕ ಬಲಾಢ್ಯರು, ಲಿಂಗಾಯತ ಸಮಾಜವನ್ನು ಅತ್ಯಂತ ವ್ಯವಸ್ಥಿತವಾಗಿ ತುಳಿಯುವ ವಿಫಲ ಯತ್ನ ಮಾಡುತ್ತಿದ್ದಾರೆ. ಇವರು ಲಿಂಗಾಯತ ಸಮಾಜದ ಆಂತರಿಕ ವೈರಿಗಳು. ಬಹುಶಃ ಒಂದು ಸಮಾಜದ ಬಲಾಢ್ಯರು ತಮ್ಮದೆ ಸಮಾಜವನ್ನು ಈ ಮಟ್ಟಕ್ಕೆ ದ್ರೋಹ ಮಾಡುವದು ಕೇವಲ ಲಿಂಗಾಯತ ಸಮಾಜದಲ್ಲಿ ಮಾತ್ರ ಇದ್ದಾರೆ ಎಂಬುದು ಲಿಂಗಾಯತ ಸಮಾಜದ ಬಹುದೊಡ್ಡ ದುದರ್ೈವ ಎಂದು ಮನವಿಯಲ್ಲಿ ವಿಷಾದ ವ್ಯಕ್ತ ಪಡಿಸಲಾಗಿದೆ.

ತನ್ನದೆ ಸಮಾಜದ ವಿರೋಧಿ ಗಳಾಗಿರುವ ವೀರಶೈವ ಮಹಾಸಭೆಯ ಯಾವ ಮನವಿಯನ್ನು ಪರಿಗಣಿಸಬಾರದು. ಬಸವಾದಿ ಶರಣರ ಸಮಾಧಿ ಸ್ಥಳಗಳ ಅಭಿವೃದ್ದಿಗೆ ಬಸವ ಪ್ರಾಧಿಕಾರ ಹಾಗೂ ಲಿಂಗಾಯತ ಸಮಾಜದ ಅನುಕೂಲಕ್ಕಾಗಿ ಲಿಂಗಾಯತ ಅಭಿವೃದ್ದಿ ಪ್ರಾಧಿಕಾರ ರಚಿಸಬೇಕು ಎಂದು ಮನವಿ ಮಾಡಲಾಗಿದೆ.

ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.