ಅಂಬೇಡ್ಕರ್ ಮೂತರ್ಿಗೆ ಅವಮಾನಪಡಿಸಿದ ದುಷ್ಕಮರ್ಿಗಳ ಬಂಧನಕ್ಕೆ ಒತ್ತಾಯಿಸಿ ಮನವಿ

ಲೋಕದರ್ಶನ ವರದಿ

ಮುದ್ದೇಬಿಹಾಳ 21:ಜಮಖಂಡಿ ತಾಲೂಕು ಸಸಾಲಟ್ಟಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂತರ್ಿಗೆ ಅವಮಾನಪಡಿಸಿದ ದುಷ್ಕಮರ್ಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಈ ವೇಳೆ ಹಲಗೆ ಬಾರಿಸುತ್ತ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಸಂಚರಿಸಿದರು. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಮೂತರ್ಿಗೆ ಮಾಲಾರ್ಪಣೆ ಮಾಡಿ ವೃತ್ತದ ಸುತ್ತಲೂ ಮಾನವ ಸರಪಳಿ ನಿಮರ್ಿಸಿ ಸಂಚಾರಕ್ಕೆ ತಡೆಯೊಡ್ಡಿದರು. ಈ ವೇಳೆ ಕನರ್ಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ.ಮುದೂರ, ರಾಜ್ಯ ಮುಖಂಡ ಹರೀಶ ನಾಟಿಕಾರ ಮತ್ತಿತರರು ಘಟನೆ ಖಂಡಿಸಿ ಮಾತನಾಡಿ ರಾಜ್ಯದೆಲ್ಲಡೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಯಂತ್ರಣಕ್ಕೆ ಕ್ರಮ ಜರಿಗಸಬೇಕು ಮತ್ತು ಸಸಾಲಟ್ಟಿ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಶಿಕ್ಷೆ ಕೊಡಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಿನಿ ವಿಧಾನಸೌಧಕ್ಕೆ ಆಗಮಿಸಿ ಸಸಾಲಟ್ಟಿಯಲ್ಲಿ ಅಂಬೇಡ್ಕರ್ ಮೂತರ್ಿಗೆ ಅವಮಾನ ಪಡಿಸಿದವನ್ನು ಬಂಧಿಸಬೇಕು ಮತ್ತು ರಾಜ್ಯಾದ್ಯಂತ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಸಕರ್ಾರವು ಕಠಿಣ ಕಾಯ್ದೆ ರೂಪಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಪ್ರಭಾರ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಅವರಿಗೆ ಸಲ್ಲಿಸಿದರು.

ಈ ಸಂದರ್ಭ ದಲಿತ ಮುಖಂಡರಾದ ಡಿ.ಬಿ.ಮುದೂರ, ಹರೀಶ ನಾಟಿಕಾರ, ಈರಣ್ಣ ತಾರನಾಳ, ಅಂಬೇಡ್ಕರ್ ಸೇನೆಯ ತಾಲೂಕು ಉಪಾಧ್ಯಕ್ಷ ಪ್ರಕಾಶ ಚಲವಾದಿ ಸರೂರ, ಪ್ರಮುಖರಾದ ಅರುಣಕುಮಾರ ತಿಳಗೂಳ, ಹಣಮಂತ ದಾಸರ, ಮಂಜುನಾಥ ಚಲವಾದಿ, ಹಣಮಂತ ಚಲವಾದಿ, ಬಸವರಾಜ ಚಲವಾದಿ, ನಾಗರಾಜ ಚಲವಾದಿ, ಹಣಮಂತ ಕಾಳಗಿ, ಅನಿಲ ಚಲವಾದಿ, ಪರಸು ಚಲವಾದಿ, ದೇವರಾಜ ಚಲವಾದಿ, ಮೌನೇಶ ಹಂಡರಗಲ್ಲ, ದೇವರಾಜ ಹಂಗರಗಿ ಸೇರಿದಂತೆ ಗುಂಡಕರ್ಜಗಿ, ಹಂಡರಗಲ್, ಹಗರಗುಂಡ, ಹಂದ್ರಾಳ, ಹರಿಂದ್ರಾಳ, ಗಂಗೂರ, ಬಸರಕೋಡ, ಕೊಡಗಾನೂರ, ಕಾಳಗಿ, ನಾಗೂರ, ಯರಝರಿ, ತಮದಡ್ಡಿ, ಬಿಜ್ಜೂರ, ಬಳವಾಟ, ಸರೂರ, ಮುಂತಾದೆಡೆಯಿಂದ ಆಗಮಿಸಿದ್ದ ನುರಾರು ಜನರು ಪಾಲ್ಗೊಂಡಿದ್ದರು.