ಕಾಗವಾಡ 06: ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಹೆಣ್ಣು ಮಕ್ಕಳ ಅಪಹರಣೆ, ಅತ್ಯಾಚಾರ, ಕೊಲೆ ಇಂತಹ ಸಮಾಜ ತಲೆ ತಗ್ಗಿಸುವಂತಹ ಘಟನೆಗಳು ಜರುಗುತ್ತಿದೆ. ದೇಶದ 4 ರಾಜ್ಯದ ಮಹಾನಗರಗಳಲ್ಲಿ ಘಟನೆಗಳು ಸಂಭವಿಸುತ್ತಿವೆ. ಈಗ ಗ್ರಾಮೀಣ ಭಾಗದ ಮಟ್ಟದಲ್ಲಿಯೂ ಘಟನೆಗಳು ಕಾಲಿಡುತ್ತವೆ. ಇಂತಹ ಆರೋಪಿಗಳನ್ನು ಬಂಧಿಸಿ, ಗಲ್ಲು ಶಿಕ್ಷೆ ನೀಡಬೇಕೆಂದು ಕಾಗವಾಡ ತಾಲೂಕಾ ಕುಂಬಾರ ಸಮಾಜ ಬಾಂಧವರು ಉಗಾರದ ಭಕ್ತ ಕುಂಬಾರ ಪಟ್ಟಣ ಪತ್ತಿನ ಸಹಕಾರಿ ಸಂಸ್ಥೆ ವತಿಯಿಂದ ಕಾಗವಾಡ ತಹಶೀಲ್ದಾರರಿಗೆ ಮನವಿ ಅಪರ್ಿಸಿ, ವಿನಂತಿಸಿದ್ದಾರೆ.
ಸೋಮವಾರರಂದು ಕಾಗವಾಡ ತಹಸೀಲ್ದಾರ ಕಚೇರಿಗೆ ತಾಲೂಕಿನ ಕುಂಬಾರ ಸಮಾಜದ ಮುಖಂಡರು, ಸಂಸ್ಥೆಯ ಆಧ್ಯಕ್ಷ ಗುರುರಾಜ ಕುಂಬಾರ, ಅಪ್ಪಣ್ಣಾ ಕುಂಬಾರ, ಯೊಗೇಶ ಕುಂಬಾರ ಇವರ ನೇತೃತ್ವದಲ್ಲಿ ಕಚೇರಿಯ ಶೀರಸದಾದ ಎಂ.ಆರ್.ಪಾಟೀಲ ಇವರಿಗೆ ಮನವಿ ಅಪರ್ಿಸಿದರು.
ಕೆಲ ವಿಕೃತ ಕೃತ್ಯಗಳನ್ನು ಅತ್ಯಂತ ನಿದರ್ೈಯೆಯಿಂದ ಮಾಡುತ್ತಿದ್ದಾರೆ. ಇಂಥವರನ್ನು ಹುಡುಕಿ ಆಂದ್ರ ಪ್ರದೇಶದ ಜಗಮೋಹನ ರೆಡ್ಡಿ ಸಕರ್ಾರ 20 ದಿನಗಳಲ್ಲಿ ಗಲ್ಲು ಶಿಕ್ಷೆ ವಿಧಿಸಿದ್ದಾರೆ. ಅದರಂತೆ ಭಾರತ ಸಕರ್ಾರ ಮತ್ತು ರಾಜ್ಯ ಸಕರ್ಾರ ಕೂಡ ಈ ಕಾಯಿದೆ ಜಾರಿಗೆ ತಂದಲ್ಲಿ, ಇಂತಹ ಘಟಣೆಗಳು ನಿಲ್ಲಬಹುದು. ಇದು ಸಮಸ್ಥ ಕುಂಬಾರ ಸಮಾಜದ ಬೇಡಿಕೆಯಾಗಿದ್ದು. ಸಮಾಜದ ಸಭೆಯಲ್ಲಿ ತಿಮರ್ಾಣ ತೆಗೆದುಕೊಂಡಿದ್ದೇವೆ. ಬೆಳಗಾವಿ ಜಿಲ್ಲೆಯ ಕಾಕತಿಯಲ್ಲಿ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರವಾಗಿದೆ. ಇದೇ ರೀತಿ ಗುಲಬಗರ್ಾ ಜಿಲ್ಲೆಯ ಚಿಂಚೋಳಿಯಲ್ಲಿ ಅಪ್ರಾಪ್ತ ಬಾಲಿಕೆ ಮೇಲೆ ಅತ್ಯಾಚಾರವಾಗಿದೆ. ದಕ್ಷೀಣ ಕನ್ನಡ ಜಿಲ್ಲೆಯಲ್ಲಿಯೂ ಘಟಣೆ ಸಂಭವಿಸಿದೆ.
ಇದನ್ನು ಗಮನಿಸಿ ರಾಜ್ಯದ ಮಹಿಳೆಯರು, ಯುವತಿಯರು ಸುರಕ್ಷಿತವಾಗಿ ಇರಲು ಈ ಕಾಯಿದೆಗಳು ಜಾರಿಗೆ ತರಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ವೇಳೆ ಕುಂಬಾರ ಸಮಾಜದ ಮುಖಂಡರಾದ ಆನಂದ ಕುಂಬಾರ, ಕಲ್ಲಪ್ಪಾ ಕುಂಬಾರ, ಸುಭಾಷ ಕುಂಬಾರ, ಚನ್ನಬಸು ಪೋತರ್ುಗಲೆ, ಸೇರಿದಂತೆ ಅನೇಕರು ಇದ್ದರು.