ಮರ್ಯಾದೆಗೇಡಿ ಹತ್ಯೆ ಆರೋಪಿಗಳ ಗಲ್ಲು ಶಿಕ್ಷೆಗೆ ಆಗ್ರಹಿಸಿ ಮನವಿ
Appeal demanding death penalty for those accused of honour killings
ತಾಳಿಕೋಟೆ 31: ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ಮಾನ್ಯಾ ವಿವೇಕಾನಂದ ದೊಡಮನಿ ಅವರನ್ನು ಮರ್ಯಾದಾ ಹತ್ಯೆ ಮಾಡಿ ಪರಿಶಿಷ್ಟ ಕುಟುಂಬದ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಸ್ಥಳೀಯ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಅಂಬೇಡ್ಕರ್ ಸೇನೆ ತಾಲ್ಲೂಕಾ ಸಮಿತಿ ವತಿಯಿಂದ ಸೋಮವಾರ ತಹಶೀಲ್ದಾರ ಅವರಿಗೆ ತಲುಪಿಸಲಾಯಿತು. ಘಟನೆಯಲ್ಲಿ ಭಾಗಿಯಾದವರನ್ನು ಪೊಲೀಸ್ ಇಲಾಖೆ ಬಂಧನ ಮಾಡಿದರೆ ಸಾಲದು, ಅವರನ್ನು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಆಗದಂತೆ ಸಕಲರೀತಿಯಲ್ಲಿ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಒದಗಿಸುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ
ದೌರ್ಜನ್ಯಕ್ಕೆ ಒಳಗಾದ ಮಾನ್ಯಾ ವಿವೇಕಾನಂದ ಕುಂಟುಂಬದವರಿಗೆ ಸರ್ಕಾರ ಸರ್ಕಾರಿ ಕೆಲಸ, ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸ್ಸು ಈ ಮಾದರ(ಕಟ್ಟಿಮನಿ),ಮಲ್ಲಪ್ಪ ಶಿರೋಳ, ದೇವೇಂದ್ರ್ಪ ಬೇವಿನಗಿಡ, ಮಲ್ಲಿಕಾರ್ಜುನ್ ಅಸ್ಕಿ, ಶಫೀಕ್ ಇನಾಮದಾರ, ಖಾಜೆ ಪಟೇಲ್, ದ್ಯಾಮಣ್ಣ ಸೋಮನಾಳ, ಕಾಲಪ್ಪ ಮಾದರ, ದೇವಪ್ಪ ತುಂಬಿಗಿ, ಬಸವರಾಜ್ ಮುತ್ತಗಿ, ಆಕಾಶ್ ಮನಗೂಳಿ, ಚೈತನ್ಯ ಮಣೂರ, ಮಡು ವನಕ್ಯಾಳ, ಇಸ್ಮಾಯಿಲ್ ನದಾಫ್, ವಿಠ್ಠಲ್ ಕೇಸಾಪುರ, ಮಡು ಚಲವಾದಿ,ಅಂಬೇಡ್ಕರ್ ಸೇನೆಯ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಬಾಗಿಯಾಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 