ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಅಧಿಕಾರಿಳಿಗೆ ಕರ್ನಾಟಕ ನವ ನಿರ್ಮಾಣ ಸೇನೆ ವತಿಯಿಂದ ಮನವಿ
ಕೊಪ್ಪಳ 21; ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ಕಚೇರಿಯಿಂದ ಬಿಎಸ್ಪಿಎಲ್ ಕಂಪನಿ ಸ್ಥಾಪನೆಗೆ ಅನುಮತಿ (ಎನ್.ಒ.ಸಿ) ನೀಡಿರುವುದನ್ನು ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಘಟಕ ಕೊಪ್ಪಳ ತೀವ್ರವಾಗಿ ಖಂಡಿಸುತ್ತದೆ. ಕೊಪ್ಪಳ ತಾಲೂಕಿನಲ್ಲಿ ಈಗಾಗಲೇ ನೂರಾರು ಕಾರ್ಖಾನೆಗಳು ಸ್ಥಾಪನೆಯಾಗಿದ್ದು ಅದರಿಂದ ತಾಲೂಕಿನ ಗ್ರಾಮೀಣ ಭಾಗದ ಜನರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಂತೆ ಇರುವ ಬಿಎಸ್ಪಿಎಲ್ ಕಾರ್ಖಾನೆಗೆ ಅನುಮತಿಯನ್ನು ಈ ಕೂಡಲೇ ರದ್ದು ಮಾಡಬೇಕು. ಯಾಕೆಂದರೆ ಈಗಾಗಲೇ ನೂರಾರು ಕಾರ್ಖಾನೆಗಳಿಂದ ನಮ್ಮ ಭಾಗದ ಜನರಿಗೆ ನೆಗಡಿ, ಕೆಮ್ಮು, ದಮ್ಮು, ಅಸ್ತಮಾ, ಟಿಬಿ ಅಂತಹ ಅನೇಕ ಮಾರಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇಲ್ಲಿನ ನೀರು ಆಹಾರವು ಕೂಡ ಕಲುಷಿತವಾಗಿದೆ. ಪರಿಸರ ರಕ್ಷಣೆ ಮಾಡಬೇಕಾಗಿರುವುದು ತಮ್ಮ ಕರ್ತವ್ಯ ಆದರೆ ಇಲ್ಲಿ ರಕ್ಷಕರೇ ಭಕ್ಷಕರಾಗಿ ಜನರ ಪಾಲಿಗೆ ಶಾಪವಾಗಿ ಕಾಡುತ್ತಿದ್ದುದು ನೋವಿನ ಸಂಗತಿ ಹಾಗಾಗಿ ನಾವುಗಳು ಪರಿಸರ ಮತ್ತು ನಿಯಂತ್ರಣ ಅಧಿಕಾರಗಳ ಕಚೇರಿಯ ಅಧಿಕಾರಿಗಳಿಗೆ ಈ ಕೂಡಲೇ ಮನವಿ ಮಾಡಿಕೊಳ್ಳುತ್ತೇವೆ, ಮತ್ತು ಎಚ್ಚರಿಕೆಯನ್ನು ನೀಡುತ್ತೇವೆ ಈ ಕೂಡಲೇ ಬಿಎಸ್ ಪಿಎಲ್ ಕಾರ್ಖಾನೆಗೆ ನೀಡಿರುವ ಅನುಮತಿ (ಎನ್.ಒ.ಸಿ) ಯನ್ನು ರದ್ದುಪಡಿಸಬೇಕು ತಹಸಿಲ್ದಾರ ಕಛೇರಿಯ ವೃತ್ತದಿಂದ ಮೇರವಣಿಗೆ (ಅರೆ ಬೆತ್ತಲೆ ಮೇರವಣಿಗೆಗೆ ಪೋಲಿಸರ ಅನುಮತಿ ನಿರಾಕರಣೆ) ಹೋರಟ ಕಾರ್ಯಕರ್ತರು ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ಕಚೇರಿಯ ಮುಂದೆ ಪ್ರತಿಬಟನೆ ಮಾಡಿ ಮನವಿ ಸಲ್ಲಿಸಿದರು, ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಶ್ರೀ ವಿಜಯಕುಮಾರ ಕವಲೂರು, ಗೌರವ ಅಧ್ಯಕ್ಷರಾದ ಜಿಎಸ್ ಗೋನಾಳ, ವಿನೋದ ಕುಮಾರ್ ಜಿ, ಶಿವಕುಮಾರ ಏಣಗಿ, ಚಂದ್ರು ಅಣ್ಣಿಗೇರಿ, ಗವಿಸಿದ್ದಪ್ಪ ಮಂಗಳಾಪುರ, ಮಹ್ಮದ್ ಗರ್ಸಗಲ್, ವಿನೋದ ಕುಮಾರ, ಸೋಹೇಲ್, ದೇವೆಂದ್ರ್ಪ ತೋಂಡಿಹಾಳ, ಶಾಮ್ ಬೇಣಗಿ, ಹನುಮಗೌಡ ಆಟೋ, ಆರ್ ಜಿ ತಿಮ್ಮನಗೌಡ್ರ, ಶಕೀಲ್ ಅಹ್ಮದ್ ಬ್ಯಾಗವಾಟ್, ಮಂಜುನಾಥ ಪಾಟೀಲ್, ಮಂಜುನಾಥ ಶಹಾಪುರ, ರಾಮಣ್ಣ ಗಾಣಿಗೇರ ಇನ್ನು ಮುಂತಾದವರು ಉಪಸ್ಥಿತರಿದ್ದರು.