ಕೊಪ್ಪಳ 16: ಶಿವಶರಣ ಹಡಪದ ಅಪ್ಪಣ್ಣನವರು ಭಕ್ತಿ ದಾಸೋಹ, ಕಾಯಕ ತತ್ವವನ್ನು ಪಾಲಿಸಿ ಬಸವಣ್ಣನವರ ಅನುಯಾಯಿಯಾಗಿ ಶರಣ ತತ್ವದಲ್ಲಿ ಬದುಕಿ ಆತ್ಮಾಭಿಮಾನದ ಸಂಕೇತವಾಗಿದ್ದಾರೆ ಎಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ವಿ. ಡಾಣಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯಾ ಭವನದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ, ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡಿದರು.
ಬಸವಣ್ಣನವರು ಶರಣರ ಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು. ಬಸವಣ್ಣನವರಿಗೆ ಆಪ್ತ ಕಾರ್ಯದಶರ್ಿಯಾಗಿ ಕಾರ್ಯನಿರ್ವಹಿಸುತ್ತಾ ಮೌಢ್ಯವನ್ನು ತೊಡೆದು ಹಾಕಿ ಸಮಾನತೆಯನ್ನು ಸಾರಿದರು. ಕುಲಕಸುಬಿನ ಬಗ್ಗೆ ವೃತ್ತಿ ಗೌರವವನ್ನು ಹೊಂದಿದ್ದ ಅವರು ಸ್ವಾಭಿಮಾನದಿಂದ, ಆತ್ಮ ಸಂತೋಷದೊಂದಿಗೆ ಬದುಕಿ ನಿಜಸುಖಿ ಎನಿಸಿಕೊಂಡರು. ಅಪ್ಪಣ್ಣನವರು ಮಸಬಿನಾಳ ಗ್ರಾಮದಲ್ಲಿ ಜನಿಸಿ ತಮ್ಮದೇ ಆದ ಆದರ್ಶಗಳೊಂದಿಗೆ ಬಸವಣ್ಣನವರ ಮಹಾ ಮನೆಯ ಸದಸ್ಯರಗಿ, ಇತರ ಶರಣರೊಂದಿಗೆ ಶರಣತತ್ವ ಪಾಲಿಸಿದರು. 234 ವಚನಗಳನ್ನು ರಚಿಸಿರುವ ಅಪ್ಪಣ್ಣನವರು ಎಲ್ಲಿಯೂ ತಮ್ಮ ಜಾತಿ, ಕುಲಕಸುಬಿನ ಬಗ್ಗೆ ಕೀಳಾಗಿ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ. ಆದ್ದರಿಂದ ಆ ಸಮುದಾಯದವರು ಕೂಡ ತಮ್ಮ ವೃತ್ತಿ ಕುರಿತು ಕೀಳು ಭಾವನೆ ಹೊಂದದೇ ವೃತ್ತಿ ಗೌರವವನ್ನು ಪಾಲಿಸಿ ಅಪ್ಪಣ್ಣನವರ ಆದರ್ಶಗಳನ್ನು ಅನುಸರಿಸುತ್ತಾ ಅವರ ದಾರಿಯಲ್ಲಿ ಸಾಗೋಣ. ಇಂದಿನ ದಿನಗಳಲ್ಲಿ ಕುಲಕಸುಬಿನೊಂದಿಗೆ ಶಿಕ್ಷಣವೂ ಅತ್ಯವಶ್ಯಕವಾಗಿರುವುದರಿಂದ ಸಮುದಾಯವರು ನಿಮ್ಮ ಮಕ್ಕಳಿಗೆ ವೃತ್ತಿಯೊಂದಿಗೆ ಉತ್ತಮ ಶಿಕ್ಷಣವನ್ನು ನೀಡಿ ಸಮಾಜದ ಮುನ್ನೆಲೆಗೆ ಬರಲು ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ.
ಹಡಪದ ಅಪ್ಪಣ್ಣನವರು ಮನಸ್ಸುಗಳನ್ನು ಕಟ್ಟಿ ಅಹಂಕಾರವನ್ನು ಮೆಟ್ಟಿ ದುಶ್ಚಟಗಳಿಂದ ದೂರವಿದ್ದು ಸಂವೃದ್ಧಿಯ ಬದುಕನ್ನು ಬದುಕಲು ತಿಳಿಸಿದರು. ಬಸವ ಚಳುವಳಿಯ ನಿಜವಾದ ವಾರಸುದಾರರು ಕೆಳವರ್ಗದಿಂದ ಬಂದವರು ಎಂಬುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಯಾವುದೇ ಜಾತಿ, ವರ್ಗವಾಗಿದ್ದರು ಭೇದವಿಲ್ಲದೇ ನಮ್ಮ ವೃತ್ತಿಯನ್ನು ಗೌರವಿಸಿ ಸಮುದಾಯದ ಏಳ್ಗೆಗಾಗಿ ಶರಣತತ್ವಗಳನ್ನು ಪಾಲಿಸೋಣ ಎಂದು ಹಿರೇವಂಕಲಕುಂಟಾ ಸಕರ್ಾರಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ವಿ. ಡಾಣಿ ಅವರು ಹೇಳಿದರು.
ಸಮಾರಂಭದಲ್ಲಿ ವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಎಲ್ಲಾ ಗಣ್ಯರಿಂದ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವೇದಿಕೆ ಮೇಲಿರುವ ಎಲ್ಲಾ ಗಣ್ಯರು ನೆರವೇರಿಸಿದರು. ಜಿಲ್ಲಾ ಸಂಖ್ಯಾ ಸಂಗ್ರಣಾಧಿಕಾರಿ ಕೃಷ್ಣಮೂತರ್ಿ ದೇಸಾಯಿ, ಗಣ್ಯರಾದ ಸಿ.ವಿ. ಚಂದ್ರಶೇಖರ್, ಸಮಾಜದ ಮುಖಂಡರಾದ ಮಂಜುನಾಥ ಅಂದ್ರಾಳ, ಗವಿಸಿದ್ದಪ್ಪ ಕಾಟ್ರಹಳ್ಳಿ, ಅನುಮೇಶ ಹಡಪದ, ಮಂಜುನಾಥ, ಶರಣಪ್ಪ ದದೇಗಲ್, ಬಸವರಾಜ ಮುನವಳ್ಳಿ, ಶರಣಪ್ಪ ಧರೇಣ್ಣನವರ ಸೇರಿದಂತೆ ಇತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇ ಶಕರಾದ ಸಿದ್ದಲಿಂಗೇಶ ಕೆ. ರಂಗಣ್ಣನವರ ಕಾರ್ಯಕ್ರಮ ನಿರೂಪಿಸಿದರು. ಬಾಬಣ್ಣ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ನಾಡಗೀತೆ ಹಾಗೂ ರೈತಗೀತೆಯನ್ನು ಹಾಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆ ಇಂದು ಬೆಳಿಗ್ಗೆ ಕೋಟೆ ರಸ್ತೆಯ ಮಹೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು, ಗಡಿಯಾರ ಕಂಬದ ಮಾರ್ಗವಾಗಿ ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ಜರುಗಿತು. ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಮುಂಚೂಣಿಯಲ್ಲಿದ್ದು, ಮೆರವಣಿಗೆ ವಿಜೃಂಭಣೆಯಿಂದ ನೆರವೇರಲು ಕಾರಣಕರ್ತರಾದರು. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.