ಲೋಕದರ್ಶನ ವರದಿ
ಕೊಪ್ಪಳ 16: ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಜ ಶರಣ ಹಡಪದ ಅಪ್ಪಣ್ಣನವರ 885ನೇ ಜಯಂತಿಯನ್ನು ಆಚರಿಸಲಾಯಿತು.
ಪೂಜಾ ಕಾರ್ಯಕ್ರಮವನ್ನು ನಂದಯ್ಯ ಸಸಿಮಠ ನೆರವೇರಿಸಿದರು. ಪುಷ್ಪಾರ್ಪಣೆ ಕಾರ್ಯಕ್ರಮವನ್ನು ಶಿಕ್ಷಕರಾದ ಮಲ್ಲಪ್ಪ ಕುಕನೂರ ನೆರವೇರಿಸಿದರು. ಮುಖ್ಯಅತಿಥಿಗಳಾಗಿ ಶಿಕ್ಷಣ ಸಂಯೋಜಕ ಚಂದ್ರಶೇಖರ ಹತ್ತಿಕಟಗಿ ಆಗಮಿಸಿ ಶಿವಶರಣ ಹಡಪದ ಅಪ್ಪಣ್ಣನವರ ಜೀವನ ಚರಿತ್ರೆ ವಿಸ್ತಾರವಾಗಿ ವಿವರಿಸಿದರು. ಅಪ್ಪಣ್ಣನವರ ಕಾಯಕ ನಿಷ್ಠೆ ಹಾಗೂ ಅವರ ವಚನಗಳ ಕುರಿತು ಗುಣಗಾನ ಮಾಡಿದರು.
ಗ್ರಾಮದ ಹಡಪದ ಸಮಾಜದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜ್ಞಾನಭಾರತಿ ಹಿರಿಯ ಪ್ರಾಥಮಿಕ ಶಾಲೆಯ 400 ಮಕ್ಕಳಿಗೆ ಉಚಿತ ನೋಟ್ ಬುಕ್, ಪೆನ್ ಹಾಗೂ ಕಲಿಕಾ ಸಮಾಗ್ರಿಗಳನ್ನು ಸಂಘದ ಅಧ್ಯಕ್ಷರಾದ ಈಶಪ್ಪ ಹಡಪದ, ಉಪಾಧ್ಯಕ್ಷ ಗವಿಸಿದ್ದಪ್ಪ ಎಂ ಹಡಪದ, ಕಾರ್ಯದರ್ಶಿ ಮಾಹಂತೇಶ ಹಡಪದ ಹಾಗೂ ಮಾರುತೆಪ್ಪ ಹಡಪದರವರು ಸೇರಿ ಕಲಿಕಾ ಸಮಾಗ್ರಿಗಳನ್ನು ವಿತರಿಸಿದರು.
ಸಮಾರಂಭದ ಮುಖ್ಯಅತಿಥಿಗಳಾಗಿ ತಾ.ಪಂ ಸದಸ್ಯ ರಾಜು ಮಾದಿನೂರ, ಗ್ರಾ.ಪಂ ಸದಸ್ಯರಾದ ಪ್ರಕಾಶ ಹಾಲವತರ್ಿ, ನಾಗರಾಜ ಚುಕ್ಕನಕಲ, ಹನುಮರಡ್ಡಿ ಡಂಬ್ರಳ್ಳಿ, ಯಮನೂರಪ್ಪ ಬಡಳ್ಳಿ, ಶರಣಗೌಡ ಪೋಲಿಸ್ ಪಾಟೀಲ, ಶರಣಪ್ಪ ತಳವಾರ, ಊರಿನ ಮುಖಂಡರಾದ ಸುರೇಶರಡ್ಡಿ ಮಾದಿನೂರ, ನಂದಯ್ಯ ಸಸಿ, ಪಂಪಣ್ಣ ಹಳ್ಳಿಗುಡಿ, ಪ್ರಭುರಾಜ ಪಾಟೀಲ, ಸಣ್ಣ ಹನುಮಪ್ಪ ಹುಳ್ಳಿ, ಯಂಕಣ್ಣ ಉಪ್ಪಾರ, ಮರಿಯಪ್ಪ ತೋಟದ, ವಸಂತರಡ್ಡಿ ಮಾದಿನೂರ ಹಾಗೂ ಸಂಜಯಗೌಡ್ರು ನಾಗನಗೌಡ್ರು ಇತರರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದ ರೇಖಾ ಕುಲಕರ್ಣಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕರಾದ ಉಮಾ ಅಂಗಡಿ, ಸಹ ಶಿಕ್ಷಕರಾದ ನಾಗರತ್ನಮ್ಮ ಕೆ, ರಾಮಣ್ಣ ವಿ, ಮಹ್ಮದ ಇಸ್ಮಾಯಿಲ್, ಮಲ್ಲಪ್ಪ ಕುಕನೂರ ಉಪಸ್ಥಿತರಿದ್ದರು.